newsfirstkannada.com

×

ಮೇಕಪ್ ಮಾಡಿಕೊಳ್ಳುವ ಮುನ್ನ ಎಚ್ಚರ! ನಿಮ್ಮ ಸೌಂದರ್ಯವರ್ಧಕಗಳಲ್ಲಿ ಈ ಕೆಮಿಕಲ್ಸ್​ ಇವೆಯಾ ಪರೀಕ್ಷಿಸಿ

Share :

Published October 27, 2024 at 10:17am

    ನಿಮ್ಮ ಸೌಂದರ್ಯವರ್ಧಕಗಳ ಅಯ್ಕೆಯಲ್ಲಿ ಇರಲಿ ಕೊಂಚ ಎಚ್ಚರ

    ಈ ಕೆಮಿಕಲ್​ಗಳು ನಿಮ್ಮ ಬ್ಯೂಟಿ ಪ್ರಾಡಕ್ಟ್​ಗಳಲ್ಲಿ ಇದೆಯಾ ನೋಡಿ

    ಸೌಂದರ್ಯ ಹೆಚ್ಚಿಸುವ ಉತ್ಪನ್​ಗಳು ಕ್ಯಾನ್ಸರ್​​ಗೆ ಕಾರಣವಾಗಲಿವೆ

ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡದವರು ಯಾರು. ಎಲ್ಲರಿಗೂ ನಾವು ಸುಂದರವಾಗಿ ಕಾಣಬೇಕು ಎನ್ನುವು ಒಂದು ಹಂಬಲ.ಒಂದು ವಯಸ್ಸಿಗೆ ಬಂದ ಮೇಲೆ ಕನ್ನಡಿಗೆ ಅಂಟಿಕೊಳ್ಳುವಷ್ಟು ಆತ್ಮರತಿ ಪ್ರೀತಿ ನಮಗೆ ಅಂಟಿಕೊಂಡಿರುತ್ತೆ. ಅದರಲ್ಲೂ ಹೆಣ್ಣು ಮಕ್ಕಳು ಅಂದ್ರೆನೇ ಸೌಂದರ್ಯಕ್ಕೆ ಇನ್ನೊಂದು ಹೆಸರು. ಅವರು ಕನ್ನಡಿಯ ಮುಂದೆ ನಿಂತು ಮೇಕಪ್ ಸೆಟ್​ ಕೈಗೆತ್ತಿಕೊಂಡರೆ ಮುಗೀತು. ಸಮಯದ ಚಲಿಸುತ್ತಿದೆ ಎನ್ನುವುದನ್ನೇ ಮರೆತುಬಿಡುತ್ತಾರೆ. ಆದರೆ ಒಂದು ವಿಚಾರ ತಿಳಿದಿರಲಿ. ಮುಖವನ್ನು ಮತ್ತಷ್ಟು ಸುಂದರಗೊಳಿಸುವ ಮುನ್ನ ಕೊಂಚ ಎಚ್ಚರವಿರಲಿ. ಸೌಂದರ್ಯವರ್ಧಕಗಳ ವಿಚಾರಕ್ಕೆ ಬಂದಾಗ ಪ್ರಮುಖವಾಗಿ ಎಲ್ಲರು ಅದರ ಗುಣಮಟ್ಟದ ಬಗ್ಗೆ ಯೋಚಿಸುತ್ತಾರೆ. ಆದ್ರೆ ಅದರಲ್ಲಿ ಯಾವ ಕೆಮಿಕಲ್​ ಮಿಕ್ಸ್ ಆಗಿದೆ ಅನ್ನೋದನ್ನ ಮರೆತುಬಿಡುತ್ತಾರೆ. ಅದನ್ನು ಮರೆತರೆ ನಿಮಗೆ ಹಲವು ಆಪತ್ತುಗಳಿವೆ ಎಚ್ಚರ.

ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಸೌಂದರ್ಯವರ್ಧಕಗಳಲ್ಲಿ ಕೆಲವು ಸಾಮಾನ್ಯ ಮಿಶ್ರಣಗಳು ಇರುತ್ತವೆ. ಅದರಲ್ಲೂ ಪ್ರಮುಖವಾಗಿ ಪಾರಾಬೆನ್ಸ್​( Parabens) ಮತ್ತು ಥಾಲೆಟ್​​( phthalates)ಗಳನ್ನು ಮಿಶ್ರಣ ಮಾಡಿರುತ್ತಾರೆ ಇದು ನಿಮ್ಮ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರಲಿದೆ.ನಿಮ್ಮ ಸೌಂದರ್ಯ ದ್ವಿಗುಣಗೊಳಿಸಲು ಆಯ್ದುಕೊಂಡ, ನೀವೇ ಇಷ್ಟಪಟ್ಟು ತಂದ ಕಾಸ್ಮೆಟಿಕ್​ ನಿಮಗೆ ಸ್ತನ ಕ್ಯಾನ್ಸರ್​ ತಂದೊಡ್ಡಬಹುದು.

ಇದನ್ನೂ ಓದಿ: ಅಮೆರಿಕಾದ ಕನಸುಗಳು ಕರಗುತ್ತಿವೆಯೇ? ಕೋಟಿ ಸಂಬಳವಿದ್ದರೂ ನೆಮ್ಮದಿಯಿಲ್ಲ ಅಂತಿರೋದೇಕೆ ಭಾರತೀಯರು?

2023ರಲ್ಲಿ ನಡೆಸಲಾದ ಒಂದು ಅಧ್ಯಯನದಲ್ಲಿ ನಿತ್ಯ ನಮ್ಮ ಸೌಂದರ್ಯಕ್ಕಾಗಿ ಬಳಸುವ ಮೇಕಪ್​ನಲ್ಲಿ ಮೇಲೆ ಹೇಳಿದಂತಹ ಕೆಮಿಕಲ್ಸ್ ಮಿಶ್ರಣವಿದ್ದಲ್ಲಿ ಅಂತಹ ಮೇಕಪ್​ಗಳಿಂದ ದೂರ ಉಳಿಯುವುದೇ ಒಳ್ಳೆಯದು. ಈ ಹಿಂದೆ ನಡೆಸಲಾದ ಅಧ್ಯಯನದಲ್ಲಿ ಈ ಪಾರಾಬೆನ್ಸ್ ಹಾಗೂ ಥಾಲೆಟ್​ಗಳ ಮಿಶ್ರಣ ಇರುವ ಕಾಸ್ಮೆಟಿಕ್ಸ್​ನ್ನು ನೀವು ಬಳಸಿದ್ದೇ ಆದಲ್ಲಿ ಅದು ಬ್ರೀಸ್ಟ್​ ಕ್ಯಾನ್ಸರ್​ ತಂದೊಡ್ಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಲಾಗಿದೆ. ಇಂತಹ ಕೆಮಿಕಲ್ ಇರುವ ಸೌಂದರ್ಯವರ್ಧಕಗಳನ್ನು ನೀವು ನಿರಂತರ 28 ದಿನ ಬಳಸಿದ್ದೇ ಆದಲ್ಲಿ ಬ್ರೀಸ್ಟ್ ಕ್ಯಾನ್ಸರ್​ನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಹಾಗಿದ್ದರೆ ಇದರಿಂದ ಹೊರಗೆ ಬರುವುದು ಹೇಗೆ. ಈ ತರಹದ ಕಾಸ್ಮಿಟಿಕ್ ಬಿಟ್ಟು ಬೇರೆನೂ ಬಳಸಬೇಕು ಅಂತ ಕೇಳಿದ್ರೆ ಅದಕ್ಕೂ ಕೂಡ ಪರ್ಯಾಯ ವ್ಯವಸ್ಥೆಗಳು ಇವೆ.

ಇದನ್ನೂ ಓದಿ: MNC ಜಾಬ್ ಮಾಡುವವರಿಗಿಂತ ಭಿಕ್ಷುಕರೇ ಇಲ್ಲಿ ಶ್ರೀಮಂತರು; ತಿಂಗಳ ಸಂಪಾದನೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ!

ನೀವು ಸುರಕ್ಷಿತ ಬ್ಯೂಟಿ ಪ್ರಾಡಕ್ಟ್​ಗಳ ಮೊರೆ ಹೋಗುಬೇಕು ಅಂತ ಬಯಸಿದಲ್ಲಿ ನಿಮಗೆ ಹಲವು ಪರ್ಯಾಯ ವ್ಯವಸ್ಥೆಗಳು ಇವೆ. ಮೊದಲನೇಯದಅಗಿ ನೀವು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ಕಾಸ್ಮೆಟಿಕ್​ ಮೊರೆ ಹೋಗಬೇಕು ಉದಾಹರಣೆಗೆ ಆಯಿಲ್, ಸಸ್ಯಗಳಿಂದ ತಯಾರಿಸಲಾದ ಕಾಸ್ಮೆಟಿಕ್ ಹಾಗೂ ಸಾವಯವ ಸೌಂದರ್ಯವರ್ಧಕಗಳನ್ನು ಆಯ್ಕೆ ಮಾಡಿಕೊಂಡಲ್ಲಿ ನೀವು ಸೇಫ್

ಅದು ಮಾತ್ರವಲ್ಲ ನೀವು ನಿಮ್ಮ ಮನೆಯಲ್ಲಿಯೇ ಅನೇಕ ರೀತಿಯ ಸೌಂದರ್ಯವರ್ಧಕಗಳನ್ನು ತಯಾರಿಸಬಹುದು. ತೆಂಗಿನ ಎಣ್ಣೆಯ ಮೂಲಕ ಬಾಡಿಲೋಷನ್ ತಯಾರಿಸಿಕೊಳ್ಳಬಹುದು. ಜೇನುತಪ್ಪದಿಂದ ಮತ್ತು ಓಟ್​ಮೀಲ್​ನಿಂದ ಫೇಸಿಯಲ್​ ಸ್ಕ್ರಬ್​ ರೆಡಿ ಮಾಡಿಕೊಳ್ಳಬಹುದು

ಅದೇ ರೀತಿ ಶಾಂಪೂ ಹಾಗೂ ಕಂಡಿಷನರ್​ಗಳನ್ನು ಸಲ್ಫೆಟ್​ ಫ್ರೀ ಹಾಗೂ ಪಾರಾಬೆನ್ ಫ್ರೀ ಶಾಂಪೂ ಹಾಗೂ ಕಂಡಿಷನರ್​ಗಳನ್ನು ಉಪಯೋಗಿಸಿ ಆ ರೀತಿಯ ಶಾಂಪೂ ಹಾಗೂ ಕಂಡಿಷನರ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಪತ್ತೆದಾರಿಗಳಂತೆ ನಿಮ್ಮ ಕಾಸ್ಮೆಟಿಕ್​ಗಳನ್ನು ಗುರುತಿಸಿ. ನೀವು ಖರೀದಿ ಮಾಡಿವ ಸೌಂದರ್ಯವರ್ಧಕಗಳ ಮೇಲಿರುವ ಲೇಬಲ್​ಗಳನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಅಪಾಯಕಾರಿ ಕೆಮಿಕಲ್ಸ್ ಇವೆಯಾ ಅಂತ ನೋಡಿ. ಇಲ್ಲವಾದಲ್ಲಿ ಮಾತ್ರ ಖರೀದಿ ಮಾಡಿ. ಇದ್ದರೆ ಕೆಮಿಕಲ್ ಫ್ರೀ ಕಾಸ್ಮೆಟಿಕ್ ಹುಡುಕಿ ಅದನ್ನು ಬಳಕೆ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಕಪ್ ಮಾಡಿಕೊಳ್ಳುವ ಮುನ್ನ ಎಚ್ಚರ! ನಿಮ್ಮ ಸೌಂದರ್ಯವರ್ಧಕಗಳಲ್ಲಿ ಈ ಕೆಮಿಕಲ್ಸ್​ ಇವೆಯಾ ಪರೀಕ್ಷಿಸಿ

https://newsfirstlive.com/wp-content/uploads/2024/10/Cosmetics-Chemicals-1.jpg

Load More