newsfirstkannada.com

×

INDW vs NZW; ಮೈದಾನದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ರಾಧ.. ಕ್ರಿಕೆಟ್ ಲೋಕ ಫುಲ್ ಫಿದಾ!

Share :

Published October 28, 2024 at 6:44am

Update October 28, 2024 at 3:10pm

    ಬಾಲ್​ಗಾಗಿ ಓಡೋಡಿ ಹೋಗಿ ಕ್ಯಾಚ್ ಹಿಡಿದ ಪ್ಲೇಯರ್ ರಾಧ

    ಏಕದಿನ ಪಂದ್ಯದಲ್ಲಿ ಇದೊಂದು ಅತ್ಯದ್ಭುತ ಕ್ಯಾಚ್ ಆಗಿದೆ

    ರಾಧ ಯಾದವ್ ಡೈವ್ ಮಾಡಿದ ವಿಡಿಯೋ ಸಖತ್ ವೈರಲ್

ನ್ಯೂಜಿಲೆಂಡ್​ ಮಹಿಳಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಧ ಯಾದವ್ ಅತ್ಯದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್​ ನಾಯಕಿ ಸೋಫಿ ಡಿವೈನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ​ ಆಗಿ ಕ್ರೀಸ್​ಗೆ ಆಗಮಿಸಿದ ಸುಜಿ ಬೇಟ್ಸ್ 58, ಜಾರ್ಜಿಯಾ ಪ್ಲಿಮ್ಮರ್ 41 ರನ್​ ಗಳಿಸಿ ಉತ್ತಮ ಆರಂಭವನ್ನು ನೀಡಿ ಔಟ್ ಆದರು. ನಂತರ ಕ್ರೀಸ್​​ನಲ್ಲಿ ಕ್ಯಾಪ್ಟನ್ ಸೋಫಿ ಡಿವೈನ್ ಹಾಗೂ ಬ್ರೂಕ್ ಹ್ಯಾಲಿಡೇ ಬ್ಯಾಟಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: ಕಿವೀಸ್ ಎದುರು ಮಂಡಿಯೂರಿದ ಟೀಮ್ ಇಂಡಿಯಾ.. ಕ್ಯಾಪ್ಟನ್ ಸೋಫಿ ಡಿವೈನ್ ಬೊಂಬಾಟ ಬ್ಯಾಟಿಂಗ್

ಈ ವೇಳೆ 32ನೇ ಓವರ್​ನ ಪ್ರಿಯಾ ಮಿಶ್ರಾ ಬೌಲಿಂಗ್​ನಲ್ಲಿ ಬ್ರೂಕ್ ಹ್ಯಾಲಿಡೇ ಫ್ರಂಟ್ ಬಂದು ಬಿಗ್ ಶಾಟ್ ಮಾಡಿದರು. ಆ ಬಾಲ್ ಸಿಕ್ಸ್ ಹೋಗುತ್ತೆ ಎಂದು ಭಾವಿಸಲಾಗಿತ್ತಾದ್ರು ಮೈದಾನದಲ್ಲೇ ಮೇಲಕ್ಕೆ ಹೋಯಿತು. ಈ ವೇಳೆ ಫ್ರಂಟ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ರಾಧ ಯಾದವ್ ವೇಗವಾಗಿ ಓಡಿ ಬಾಲ್​ ಅನ್ನು ಡೈವ್ ಮಾಡಿ ಕ್ಯಾಚ್ ಹಿಡಿದರು. ಇದರಿಂದ ಕಿವೀಸ್​ 139 ರನ್​ಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡಿತು. ರಾಧ ಯಾದವ್ ಡೈವ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ಪಂದ್ಯದಲ್ಲಿ ಆಲ್​ರೌಂಡರ್ ಆಟ ಆಡಿದ್ದ ರಾಧ ಯಾದವ್ ಅವರು 3 ಕ್ಯಾಚ್ ಹಿಡಿದಿದ್ದು ಅಲ್ಲದೇ, 4 ವಿಕೆಟ್​ ಪಡೆದಿದ್ದರು. ಜೊತೆಗೆ ಅದ್ಭುತ ಬ್ಯಾಟಿಂಗ್ ಮಾಡಿ 48 ರನ್​ಗಳನ್ನ ಬಾರಿಸಿದ್ದರು. ಈ ಏಕದಿನ ಪಂದ್ಯದಲ್ಲಿ ಕಿವೀಸ್ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 259 ರನ್​ಗಳನ್ನ ಗಳಿಸಿತ್ತು. ಆದರೆ ಭಾರತದ ಮಹಿಳಾ ಆಟಗಾರ್ತಿಯರು 47 ಓವರ್​​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು ಕೇವಲ 183 ರನ್​ಗಳನ್ನ ಮಾತ್ರ ಗಳಿಸಿತು. ಇದರಿಂದ ನ್ಯೂಜಿಲೆಂಡ್ 76 ರನ್​ಗಳಿಂದ ವಿಜಯ ಸಾಧಿಸಿ, ಸರಣಿಯಲ್ಲಿ 1-1 ಸಮಬಲ ಸಾಧಿಸಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDW vs NZW; ಮೈದಾನದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ರಾಧ.. ಕ್ರಿಕೆಟ್ ಲೋಕ ಫುಲ್ ಫಿದಾ!

https://newsfirstlive.com/wp-content/uploads/2024/10/RADHA_YADAV.jpg

Load More