ಹೆಚ್ಚಿನ ಜನ ಸಾಕ್ಸ್ ಇಲ್ಲದೇ ಶೂಗಳನ್ನು ಧರಿಸುತ್ತಾರೆ
ಸಾಕ್ಸ್ ಇಲ್ಲದೆ ಯುವಕರು ಶೂ ಹಾಕೋದು ಟ್ರೆಂಡ್ ಆಗ್ತಿದೆ
ಒಂದು ಸಣ್ಣ ನಿರ್ಲಕ್ಷ್ಯದಿಂದ ಏನೆಲ್ಲ ಸಮಸ್ಯೆ ಆಗ್ತದೆ?
ಹೆಚ್ಚಿನ ಜನರು ಸಾಕ್ಸ್ ಇಲ್ಲದೇ ಶೂಗಳನ್ನು ಧರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಫ್ಯಾಷನ್ ಯುವಜನತೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಪಾದಗಳಲ್ಲಿ ದುರ್ವಾಸನೆ ಬರುವುದಲ್ಲದೆ ಆರೋಗ್ಯವೂ ಹಾಳಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಪಾದಗಳು ದೇಹದ ಬೆವರುವ ಭಾಗಗಳಲ್ಲಿ ಒಂದಾಗಿದೆ. ಇಡೀ ದಿನ ಶೂ ಧರಿಸುವುದರಿಂದ ಹೆಚ್ಚು ಬೆವರುತ್ತದೆ. ಬೆವರು ಶೂಗಳ ಒಳಗೆ ತೇವಾಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ ಸಾಕ್ಸ್ ಧರಿಸಿ ಶೂ ಹಾಕೋದು ಒಳ್ಳೆಯ ಅಭ್ಯಾಸ. ವಾಸನೆ ತಡೆಯಲು ಮತ್ತು ಪಾದಗಳನ್ನು ಒಣಗಿಡಲು ಸಾಕ್ಸ್ ಉತ್ತಮವಾಗಿದೆ. ಜೊತೆಗೆ ಇದು ಪಾದಗಳ ಬೆವರುವಿಕೆಯನ್ನು ತಡೆಯುತ್ತದೆ.
ಸಾಕ್ಸ್ ಜೊತೆ ಬೂಟು ಧರಿಸಿದ್ರೆ ಏನಾಗುತ್ತದೆ?
ಸಾಕ್ಸ್ ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಹಲವು ರೀತಿಯ ಬ್ಯಾಕ್ಟೀರಿಯಾಗಳಿಂದ ಸಾಕ್ಸ್ ನಮ್ಮನ್ನು ರಕ್ಷಿಸುತ್ತದೆ. ಯಾವುದೇ ಫಂಗಲ್ ಇನ್ಫೆಕ್ಷನ್ ಆಗಲ್ಲ. ಸಾಕ್ಸ್ ಬೇಸಿಗೆಯಲ್ಲಿ ಬೆವರುವಿಕೆಯನ್ನು ತಡೆಯುತ್ತದೆ. ಬೇಸಿಗೆಕಾಲ, ಚಳಿಗಾಲಕ್ಕೂ ಒಳ್ಳೆಯದು. ಚಳಿಗಾಲದಲ್ಲಿ ಸಾಕ್ಸ್ ಧರಿಸುವುದರಿಂದ ಶೀತದಿಂದ ಮುಕ್ತಿ ಸಿಗುತ್ತದೆ. ನಿಮ್ಮ ಪಾದಗಳನ್ನು ಬೆಚ್ಚಗೆ ಇಡುತ್ತದೆ.
ಸಾಕ್ಸ್ ಧರಿಸದೇ ಬೂಟುಗಳನ್ನು ಧರಿಸುವವರಿಗೆ ಅಲರ್ಜಿ ಸಮಸ್ಯೆ ಉಂಟಾಗಬಹುದು. ಕೆಲವರು ತುಂಬಾ ಸೂಕ್ಷ್ಮ ಚರ್ಮ ಹೊಂದಿರುತ್ತಾರೆ. ಕೆಲವರಿಗೆ ಸಾಕ್ಸ್ ಇಲ್ಲದೇ ಶೂ ಧರಿಸುವುದರಿಂದ ಗುಳ್ಳೆಗಳು ಆಗುತ್ತದೆ. ಇಂತಹ ಸಮಸ್ಯೆಯಿಂದ ಪಾರಾಗಲು ಶೂ ಧರಿಸುವವರು ಸಾಕ್ಸ್ ಧರಿಸಬೇಕು.
ಇದನ್ನೂ ಓದಿ:Mutton Sambar: ಇವನು ಮಗನೇ ಅಲ್ಲ.. ಮಟನ್ ಸಾಂಬಾರಿಗಾಗಿ ಹೆತ್ತಪ್ಪನನ್ನೇ ಮುಗಿಸಿಬಿಟ್ಟ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ