ಈ ಇಬ್ಬರು ಎಷ್ಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಗೊತ್ತಾ..?
ಇಲ್ಲಿನ ಸಂಪ್ರದಾಯದಂತೆ ಮದುವೆ ಆಗುವುದು ಯುವತಿಯ ಆಸೆ
ಮೊದಲು ಕ್ರಿಶ್ಚಿಯನ್ನಂತೆ, ಈಗ ನಮ್ಮ ಸಂಸ್ಕೃತಿಯಂತೆ ಮದುವೆ
ಚೆನ್ನೈ: ತಮಿಳುನಾಡಿನ ಯುವಕನೊಬ್ಬ ಉನ್ನತ ವ್ಯಾಸಂಗಕ್ಕಾಗಿ ಫ್ರಾನ್ಸ್ ಹೋಗಿ ಅಲ್ಲಿನ ಯುವತಿಯನ್ನ ಪ್ರೀತಿಸಿ, ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ತಮಿಳುನಾಡಿನ ತೇನಿ ಜಿಲ್ಲೆಯ ಮುತ್ತುದೇವನೆಪಟ್ಟಿ ಹಳ್ಳಿಗೆ ಸೇರಿದ ಭೋಜನ್ ಹಾಗೂ ಕಾಳಿಯಮ್ಮ ಎನ್ನುವರ ಮಗ ಕಳೈರಾಜನ್ ಎನ್ನುವ ಯುವಕ ಸದ್ಯ ಫ್ರಾನ್ಸ್ ಯುವತಿಯನ್ನ ವಿವಾಹವಾಗಿದ್ದಾರೆ. ಕಳೈರಾಜನ್ ಅವರಿಗೆ ತಂದೆ ಇಲ್ಲ, ಆದರೂ ಉನ್ನತ ವ್ಯಾಸಂಗ ಮಾಡುವುದಕ್ಕಾಗಿ 2017ರಲ್ಲಿ ಫ್ರಾನ್ಸ್ಗೆ ಹೋಗಿದ್ದರು. ಅಲ್ಲಿ ಪ್ರೆಂಚ್ ಯುವತಿ ಮ್ಯಾರಿಯನ್ ಎನ್ನುವ ಯುವತಿ ಜೊತೆ ಸ್ನೇಹ ಬೆಳೆದು ನಂತರ ಪ್ರೀತಿಯಾಗಿ ಮಾರ್ಪಟ್ಟಿದೆ.
ಈ ಬಗ್ಗೆ ಎರಡು ಕುಟುಂಬಕ್ಕೆ ವಿಷಯ ಗೊತ್ತಾಗಿ ಕಳೆದ ಮೇನಲ್ಲಿ ಫ್ರಾನ್ಸ್ನಲ್ಲೇ ಕ್ರಿಶ್ಚಿಯನ್ ಪದ್ಧತಿಯಂತೆ ಮದುವೆ ಮಾಡಲಾಗಿತ್ತು. ಆದರೆ ಭಾರತದ ಸಂಪ್ರದಾಯದಂತೆ ಮದುವೆಯಾಗಬೇಕು ಎನ್ನುವುದು ಯುವತಿಯ ಆಸೆ ಆಗಿತ್ತು. ಅದರಂತೆ ತಮಿಳುನಾಡಿನ ತೇನಿ ಜಿಲ್ಲೆಯ ಸಮೀಪದ ವಿರಪಾಂಡಿಯಲ್ಲಿ ತಮಿಳು ಸಂಪ್ರದಾಯದಂತೆ ಮದುವೆಯಾಗಿ ಖುಷಿ ಪಟ್ಟಿದ್ದಾರೆ. ಈ ವೇಳೆ ಯುವತಿಯ ಕುಟುಂಬಸ್ಥರೆಲ್ಲ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಸದ್ಯ ಈ ಸಂಬಂಧ ನವ ವಧು ಮ್ಯಾರಿಯನ್ ಮಾತನಾಡಿ, ನಾವಿಬ್ಬರು ಪ್ರೀತಿ ಮಾಡಲು ಪ್ರಾರಂಭಿಸಿ 10 ವರ್ಷಗಳು ಕಳೆದಿವೆ. ಫ್ರಾನ್ಸ್ನಲ್ಲೇ ನಮ್ಮಿಬ್ಬರ ಮಧ್ಯೆ ಪ್ರೀತಿ ಹುಟ್ಟಿತ್ತು. ಭಾರತದ ಸಂಪ್ರದಾಯದಂತೆ ಮದುವೆ ಆಗಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಎಲ್ಲರನ್ನೂ ಭೇಟಿ ಮಾಡಿದೆ. ನನ್ನ ಕುಟುಂಬದಂತೆ ಅನಿಸಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಾಣ! ಪರೋಪಕಾರಿ ಅಮ್ಮನ ಬಾಲ್ಯದ ಕನಸು ನನಸಾಗುವ ಸಂಭ್ರಮ
ಕಳೈರಾಜನ್ ಮಾತನಾಡಿ, ಫ್ರಾನ್ಸ್ಗೆ ಓದುವುದಕ್ಕೆ ಹೋಗಿದ್ದಾಗ ಮ್ಯಾರಿಯನ್ ಪರಿಚಿತರಾದರು. ಮೊದ ಮೊದಲು ಇಬ್ಬರಿಗೂ ಭಯ ಇತ್ತು. ಆದರೆ ಹೋಗುತ್ತಾ ಎಲ್ಲ ಸಾಮಾನ್ಯ ಆಯಿತು. ಫ್ರಾನ್ಸ್ನಲ್ಲಿ ಈಗಾಗಲೇ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದೆ. ಆದರೆ ಇಲ್ಲಿನ ಸಂಪ್ರದಾಯದಂತೆ ಮದುವೆ ಆಗುವುದು ಇವರಿಗೆ ಇಷ್ಟವಿದ್ದ ಕಾರಣ ಇದೀಗ ನಮ್ಮ ಸಂಸ್ಕೃತಿಯಂತೆ ಮದುವೆ ನೆರವೇರಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ