newsfirstkannada.com

×

ಬಾಹ್ಯಾಕಾಶದಿಂದಲೇ ಜೋ ಬೈಡನ್, ಕಮಲಾ ಹ್ಯಾರಿಸ್​ಗೆ ವಿಶೇಷ ಸಂದೇಶ ಕಳುಹಿಸಿದ ಸುನೀತಾ ವಿಲಿಯಮ್ಸ್: ಏನದು?

Share :

Published October 29, 2024 at 2:57pm

Update October 29, 2024 at 5:14pm

    ‘ನಮ್ಮ ಸಮುದಾಯದೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಸಂತಸ ತಂದಿದೆ‘

    ಜೋ ಬೈಡನ್, ಕಮಲಾ ಹ್ಯಾರಿಸ್​ಗೆ ಧನ್ಯವಾದ ತಿಳಿಸಿದ ಸುನೀತಾ ವಿಲಿಯಮ್ಸ್

    ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವಿಡಿಯೋ ಸಂದೇಶ ರವಾನೆ

ಕಳೆದ ಐದು ತಿಂಗಳಿಂದ ಬಾಹ್ಯಾಕಾಶದಲ್ಲಿಯೇ ಉಳಿದುಕೊಂಡಿರುವ ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಅಲ್ಲಿಂದಲೇ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಸುನೀತಾ ವಿಲಿಯಮ್ಸ್​ ದೀಪಾವಳಿ ಶುಭಾಶಯಗಳನ್ನು ಕೋರಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಿಂದ ವಿಡಿಯೋ ಸಂದೇಶ ಕಳುಹಿಸಿರುವ ಭಾರತೀಯ ಮೂಲಕ ಸುನೀತಾ ವಿಲಿಯಮ್ಸ್, ಈ ವರ್ಷ ನಾನು ಭೂಮಿಯಿಂದ 260 ಮೈಲಿ ದೂರದಿಂದ ಮೊದಲ ಬಾರಿ ದೀಪಾವಳಿಯನ್ನು ನೋಡುತ್ತಿದ್ದೇನೆ. ನನ್ನ ತಂದೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿಡು ನಿಟ್ಟಿನಲ್ಲಿ ನಮಗೆ ದೀಪಾವಳಿಯ ಮಹತ್ವ ಹೇಳಿದ್ದು ಈಗ ನೆನಪಾಗುತ್ತಿದೆ ಎಂದು ಸುನೀತಾ ವಿಲಿಯಮ್ಸ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅರಬ್ ಅಮೆರಿಕನ್ ಮತಗಳ ಮೇಲೆ ಕಣ್ಣು; ಮಿಚಿಗನ್​ನಲ್ಲಿ ಹ್ಯಾರಿಸ್, ಟ್ರಂಪ್ ಭರ್ಜರಿ ಕ್ಯಾಂಪೇನ್

ಇದರ ಜೊತೆಗೆ ಐಎಸ್​ಎಸ್​ನಿಂದಲೇ ದೀಪಾವಳಿ ಶುಭಾಶಯದ ಸಂದೇಶ ಹೇಳಿರುವ ಸುನೀತಾ ವಿಲಿಯಮ್ಸ್, ಇಂದು ಯಾರೆಲ್ಲಾ ದೀಪಾವಳಿಯನ್ನು ಆಚರಿಸುತ್ತಿದ್ದಾರೋ ಅವರಿಗೆ ನಾನು ದೀಪಾವಳಿಯ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಶ್ವೇತಭವನ ಸೇರಿದಂತೆ ಇಡೀ ವಿಶ್ವಕ್ಕೆ ನಾನು ಈ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ

ದೀಪಾವಳಿ ಎಂಬುದು ಸಂತಸದಿಂದ, ಒಳ್ಳೆಯ ಮನಸ್ಸಿನಿಂದ ಆಚರಿಸುವ ಹಬ್ಬ. ಈ ಒಂದು ಹಬ್ಬ ಭರವಸೆ ಹಾಗೂ ಹೊಸತನಕ್ಕೆ ತೆರೆದುಕೊಳ್ಳುವ ಸಂದೇಶ ನೀಡುತ್ತದೆ. ಈ ಬಾರಿ ನಮ್ಮ ಹಿಂದೂ ಸಮುದಾಯದೊಂದಿಗೆ ಹಬ್ಬವನ್ನು ಆಚರಿಸಲು ಸಜ್ಜಾಗಿರುವ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ನಾನು ತುಂಬಾ ಧನ್ಯವಾದಗಳನ್ನು ಹಾಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಹ್ಯಾಕಾಶದಿಂದಲೇ ಜೋ ಬೈಡನ್, ಕಮಲಾ ಹ್ಯಾರಿಸ್​ಗೆ ವಿಶೇಷ ಸಂದೇಶ ಕಳುಹಿಸಿದ ಸುನೀತಾ ವಿಲಿಯಮ್ಸ್: ಏನದು?

https://newsfirstlive.com/wp-content/uploads/2024/10/SUNITA-WILLIAMS.jpg

Load More