newsfirstkannada.com

×

ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

Share :

Published October 29, 2024 at 4:40pm

    ಒಂದೇ ಕಾಲಿನಲ್ಲಿ ನಿಂತು ಸಮತೋಲನ ಕಾಪಾಡುವ ವಿದ್ಯೆ ಕಲಿಯಿರಿ

    ಒಂದೇ ಕಾಲಿನಲ್ಲಿ ಬಹಳ ಹೊತ್ತು ನಿಲ್ಲುವುದರಿಂದ ವಯಸ್ಸಿನಲ್ಲಿ ಇಳಿಕೆ

    ಹೊಸ ಅಧ್ಯಯನವೊಂದು ತೆರೆದಿಟ್ಟಿದೆ ಅಚ್ಚರಿಪಡುವಂತಹ ಮಾಹಿತಿ

ಸಮತೋಲನ ಎಲ್ಲದರಲ್ಲಿಯೂ ಕೂಡ ಬೇಕು. ಬದುಕಿನ್ನು ಪ್ರಮುಖವಾಗಿ ನಿರ್ಧರಿಸುವುದೇ ಈ ಸಮತೋಲನ. ಮಾತಿನಲ್ಲಿ, ನಡತೆಯಲ್ಲಿ, ಸಿಟ್ಟಿನಲ್ಲಿ ಪ್ರೀತಿಯಲ್ಲಿ ಎಲ್ಲದರಲ್ಲೂ ಸಮತೋಲನ ಕಾಯ್ದುಕೊಳ್ಳಬೇಕು. ಈ ಸಮತೋಲನವೇ ನಮ್ಮ ದೀರ್ಘಕಾಲದ ಬದುಕಿಗೆ ಸಹಾಯವಾಗುತ್ತದೆ. ಇದು ಕೇವಲ ಮಾತು ನಡತೆಗಾಯಿತು ವ್ಯಾಯಾಮಯದಲ್ಲಿಯೂ ಒಂದು ಸಮತೋಲನ ಕಾಯ್ದುಕೊಳ್ಳುವುದು ಬರುತ್ತದೆ. ಅದು ನಿಮ್ಮ ಆಯುಷ್ಯವನ್ನು ನಿರ್ಧರಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ನೀವು ನಿತ್ಯ ಸೂರ್ಯನಮಸ್ಕಾರ ಇಲ್ಲವೇ ದೈಹಿಕ ವ್ಯಾಯಾಮ ಮಾಡುವವರನ್ನು ನೋಡಿ. ಅವರು ಒಂದೇ ಕಾಲಿನಲ್ಲಿ ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತಿರುತ್ತಾರೆ. ಇದು ನಮ್ಮ ಆಯುಷ್ಯದ ಗುಟ್ಟನ್ನು ತೆರೆದಿಡುತ್ತದೆ ಎಂದು ದಿ ಕ್ರಾಸ್ ಸೆಕ್ಷನಲ್ ಎಂಬ ಅಧ್ಯಯನವೊಂದು ತೆರೆದಿಟ್ಟಿದೆ. ಮಯೋ ಕ್ಲಿನಿಕ್​ನಲ್ಲಾದ ಈ ಒಂದು ಸಂಶೋಧನೆ ಅನೇಕ ಸತ್ಯಗಳನ್ನು ತೆರೆದಿಟ್ಟಿದೆ. ಒಂದೇ ಕಾಲಿನಲ್ಲಿ ನಿಂತು ಸಮತೋಲನ ಕಾಪಾಡಿಕೊಳ್ಳುವುದು ವಯಸ್ಸಿನ ಇಳಿಕೆಯನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಮಾನಗಳಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ನಿರ್ಬಂಧವೇಕೆ? ಇಲ್ಲಿವೆ ಕಾರಣಗಳು

ಈ ಒಂದು ಅಧ್ಯಯನದಲ್ಲಿ ಒಟ್ಟು 40 ಜನರು ಪಾಲ್ಗೊಂಡಿದ್ದಾರೆ. ಉತ್ತಮ ಆರೋಗ್ಯದಲ್ಲಿರುವ ಯಾವುದೇ ರೀತಿಯ ನರಕ್ಕೆ ಸಂಬಂಧಿಸಿದ ಸಮಸ್ಯೆಯಿಲ್ಲದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಒಂದೇ ಕಾಲಿನಲ್ಲಿ ಅಂದ್ರೆ ಬಲಗಾಲು ಹಾಗೂ ಎಡಗಾಲಿನಲ್ಲಿ ನಿಂತು ಆಸನ ಮಾಡುವವರ ವಯಸ್ಸಿನಲ್ಲಿ ವಿಚಿತ್ರ ಇಳಿಕೆ ಕಂಡು ಬಂದಿದ್ದು ಆಗಿದೆ. ಈಗೀರುವ ವಯಸ್ಸಿಗಿಂತ ಕಡಿಮೆ ವಯಸ್ಸಿನ ಗುಣಗಳು ಅವರ ದೇಹದಲ್ಲಿ ಕಂಡು ಬಂದಿದ್ದರ ಬಗ್ಗೆ ಸ್ಪಷ್ಟನೆ ಬಂದಿದೆ.

ಅವರನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಿ ನೋಡಿದಾಗ ಬಲಗಾಲಿನ ಮೇಲೆ ನಿಲ್ಲುವವರ ವಯಸ್ಸು ಹತ್ತು ವರ್ಷಕ್ಕೆ 2.2 ಸೆಕೆಂಡ್ ಎಡಗಾಲಿನ ಮೇಲೆ ನಿಲ್ಲುವವರ ವಯಸ್ಸು ಒಂದು ದಶಕಕ್ಕೆ 1.7 ಸೆಕೆಂಡ್ ಇಳಿಕೆಯಾದ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಇದನ್ನೂ ಓದಿ: ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

ಈ ರೀತಿಯಾಗಿ ಒಂಟಿ ಕಾಲಿನ ಭಂಗಿಯಲ್ಲಿ ನಿರಂತರವಾಗಿ ನಿಲ್ಲುವುದು ನಮ್ಮ ಒಟ್ಟಾರೆ ಆರೋಗ್ಯದ ವ್ಯವಸ್ಥೆಯ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ರೀತಿಯ ಅಭ್ಯಾಸಗಳು ನಮ್ಮ ನಿತ್ಯ ಜೀವನದಲ್ಲಿ ಯಾವುದೇ ರೀತಿಯ ಭಯವಿಲ್ಲದೇ ವೈಫಲ್ಯವಿಲ್ಲದೇ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಸಹಾಯಕವಾಗುತ್ತವೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಒಂದೇ ಕಾಲಿನಲ್ಲಿ ನಿಂತು ಸಮತೋಲನವನ್ನು ಕಾಪಾಡಿಕೊಳ್ಳುವ ವಿದ್ಯೆಯಿಂದ ನೀವು ನಿಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳಬಹುದು. ದೀರ್ಘಾಯುಷಿಯಾಗಿ ಬದುಕಬಹುದು ಎಂದು ಅಧ್ಯಯನದ ಲೇಖಕ ಮಯೊ ಕ್ಲಿನಿಕ್​ನ ವೈದ್ಯ ಡಾ. ಕೆಂಟಾನ್ ಕೌಫ್​ಮ್ಯಾನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

https://newsfirstlive.com/wp-content/uploads/2024/10/Stand-On-One-Leg-1.jpg

Load More