ಐದು ಸ್ಟಾರ್ಗಳಿಗೆ ಬಂಪರ್ ಜಾಕ್ಪಾಟ್ ಗ್ಯಾರಂಟಿ
ಕನ್ನಡಿಗ ರಾಹುಲ್ಗೂ ಇದೇ ಸಖತ್ ಬೇಡಿಕೆ..!
ದಾಖಲೆ ಮೊತ್ತಕ್ಕೆ ಯಾವ ಆಟಗಾರ ಸೇಲ್ ಆಗ್ತಾರೆ..?
ಐಪಿಎಲ್ ರಿಟೈನ್ಶನ್ ಅನೌನ್ಸ್ಮೆಂಟ್ಗೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ನಾಳೆ ಸಂಜೆಯೊಳಗೆ ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡ ಆಟಗಾರರ ಲಿಸ್ಟ್ ಅನೌನ್ಸ್ ಮಾಡಬೇಕಿದೆ. ಈ ಲಿಸ್ಟ್ ಅನೌನ್ಸ್ಮೆಂಟ್ಗೂ ಮುನ್ನ ಮೆಗಾ ಹರಾಜಿನ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಒಂದಲ್ಲ.. ಎರಡಲ್ಲ.. ಕೋಟಿ-ಕೋಟಿಯ ಲೆಕ್ಕಾಚಾರ ನಡೀತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ರಿಟೈನ್ಶನ್ ಡೆಡ್ಲೈನ್ ಬಂದೇ ಬಿಡ್ತು. ಇನ್ನೊಂದೇ ದಿನ. ನಾಳೆ ಸಂಜೆಯೊಳಗೆ ಐಪಿಎಲ್ ಫ್ರಾಂಚೈಸಿಗಳು ರಿಟೈನ್ಶನ್ ಲಿಸ್ಟ್ ಅನೌನ್ಸ್ ಮಾಡಬೇಕಿದೆ. ಎಲ್ಲಾ ರೀತಿಯಲ್ಲೂ ಲೆಕ್ಕಾಚಾರ ಹಾಕಿರೋ ತಂಡಗಳು ತಾವು ರಿಟೈನ್ ಮಾಡಿಕೊಳ್ಳೋ ಆಟಗಾರರ ಲಿಸ್ಟ್ನ ಬಹುತೇಕ ರೆಡಿ ಮಾಡಿವೆ. ಅದರ ಜೊತೆಗೆ ತಂಡದಿಂದ ಹೊರ ಬೀಳುವ ಆಟಗಾರರ ಯಾರು ಅನ್ನೋದು ಬಹುತೇಕ ರಿವೀಲ್ ಆಗಿದೆ. ಇದೀಗ ರಿಟೈನ್ಶನ್ಗಿಂತ ಹೆಚ್ಚಾಗಿ ಮೆಗಾ ಆಕ್ಷನ್ನತ್ತ ಕುತೂಹಲ ಮೂಡಿದೆ. ಯಾರಿಗೆ ಬಂಪರ್ ಜಾಕ್ಪಾಟ್ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.
ಇದನ್ನೂ ಓದಿ:18 ಕೋಟಿಗೆ ಡೀಲ್! LSG ಉಳಿಸಿಕೊಂಡ ಮೊದಲ ಸ್ಟಾರ್ ಹೆಸರು ರಿವೀಲ್, ರಾಹುಲ್ ಅಲ್ಲ..!
ರಿಷಭ್ ಪಂತ್ ಮೇಲಿದೆ ಎಲ್ಲರ ಕಣ್ಣು
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲು ನಿರ್ಧರಿಸಿರೋ ಪಂತ್ ಹರಾಜಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಸುದ್ದಿ ಕೇಳಿ ಹಲವು ಫ್ರಾಂಚೈಸಿಗಳು ಪಂತ್ ಮೇಲೆ ಕಣ್ಣಿಟ್ಟಿವೆ. ನಾಯಕ + ವಿಕೆಟ್ ಕೀಪರ್.. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಹಲವು ಫ್ರಾಂಚೈಸಿಗಳು ಸಜ್ಜಾಗಿವೆ. ಪಂತ್ ಯಾವುದೇ ತಂಡ ಸೇರಿದ್ರೂ ಆ ತಂಡದ ಬ್ರ್ಯಾಂಡ್ವ್ಯಾಲ್ಯೂ ಕೂಡ ಹೆಚ್ಚಾಗಲಿದೆ. ಹೀಗಾಗಿ ಪಂತ್ ಖರೀದಿಗೆ ಅತಿ ಹೆಚ್ಚು ಪೈಪೋಟಿ ನಡೆಯಲಿದೆ.
ಗ್ರೀನ್ಗೆ ಕೋಟಿ-ಕೋಟಿ ಖುಲಾಯಿಸುತ್ತಾ?
18.5 ಕೋಟಿಯ ಮೊತ್ತಕ್ಕೆ ಆರ್ಸಿಬಿ ಸೇರಿದ್ದ ಆಸಿಸ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅದಕ್ಕಿಂತ ಕಡಿಮೆ ಮೊತ್ತಕ್ಕೆ ರಿಟೈನ್ ಆಗೋದು ಅನುಮಾನವೇ. ಆಕ್ಷನ್ಗೆ ಬರೋ ಸಾಧ್ಯತೆ ದಟ್ಟವಾಗಿದ್ದು, ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಬಲ್ಲ ಗ್ರೀನ್ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣಿದೆ. ಹೀಗಾಗಿ ಆಕ್ಷನ್ನಲ್ಲಿ ಕೋಟಿ-ಕೋಟಿಯ ಸುರಿಮಳೆಯಾಗೋದು ಪಕ್ಕಾ.
ಇದನ್ನೂ ಓದಿ:ದೀಪಾವಳಿಗೆ ಊರಿಗೆ ಹೊರಟ್ಟಿದ್ದೀರಾ? KSRTC ಕಡೆಯಿಂದ ಇಲ್ಲಿದೆ ಸಿಹಿ ಸುದ್ದಿ!
ತಮ್ಮದೇ ದಾಖಲೆ ಬ್ರೇಕ್ ಮಾಡ್ತಾರಾ ಮಿಚೆಲ್ ಸ್ಟಾರ್ಕ್?
ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರ ಎಂಬ ದಾಖಲೆ ಬರೆದಿರೋ ಮಿಚೆಲ್ ಸ್ಟಾರ್ಕ್ ತಮ್ಮದೇ ದಾಖಲೆ ಮುರಿದ್ರೂ ಅಚ್ಚರಿ ಪಡಬೇಕಿಲ್ಲ. 24.75 ಕೋಟಿಗೆ ಸ್ಟಾರ್ಕ್ನ ಕೆಕೆಆರ್ ಖರೀದಿಸಿತ್ತು. ಈಗ ಮತ್ತೆ ಬಿಗ್ ಅಮೌಂಟ್ ನೀಡಿ ರಿಟೈನ್ ಮಾಡಿಕೊಳ್ಳೋದು ಕೆಕೆಆರ್ ರೆಡಿಯಿಲ್ಲ. ಹೀಗಾಗಿ ಸ್ಟಾರ್ಕ್ ಹರಾಜಿನ ಕಣಕ್ಕೆ ಬರಲಿದ್ದಾರೆ. ಎಡಗೈ ವೇಗಿಯ ಖರೀದಿಗೂ ತಂಡಗಳು ಮುಗಿಬೀಳೋದು ಪಕ್ಕಾ.
ಯಂಗ್ಗನ್ ಇಶಾನ್ ಕಿಶನ್ ಹಲವರ ಟಾರ್ಗೆಟ್
ಬಿಗ್ಸ್ಟಾರ್ಗಳನ್ನ ತಂಡದಲ್ಲೇ ಉಳಿಸಿಕೊಳ್ಳೋ ಸರ್ಕಸ್ನಲ್ಲಿರೋ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಂಗ್ಸ್ಟರ್ ಇಶಾನ್ ಕಿಶನ್ನ ಕೈ ಬಿಡಲು ಸಜ್ಜಾಗಿದೆ. ಆಕ್ಷನ್ ಕಣಕ್ಕೆ ಇಶಾನ್ ಕಿಶನ್ ಎಂಟ್ರಿ ಖಚಿತವಾದ ಬೆನ್ನಲ್ಲೇ ಫೈರಿ ಬ್ಯಾಟರ್ ಖರೀದಿಗೆ ಫ್ರಾಂಚೈಸಿಗಳು ಸದ್ದಿಲ್ಲದೇ ಪ್ಲಾನ್ ನಡೆಸಿವೆ. ಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಇಶಾನ್ ಕಿಶನ್, ಚಾಣಾಕ್ಷ ವಿಕೆಟ್ ಕೀಪರ್ ಕೂಡ ಹೌದು. ಭವಿಷ್ಯದ ನಾಯಕನ್ನಾಗಿಯೂ ರೂಪಿಸಬಹುದು. ಹೀಗಾಗಿ ಇಶಾನ್ ಕಿಶನ್ ಖರೀದಿಗೆ ಟಫ್ ಫೈಟ್ ನಡೆಯೋದು ಪಕ್ಕಾ.!
ಕನ್ನಡಿಗ ರಾಹುಲ್ಗೂ ಇದೇ ಸಖತ್ ಬೇಡಿಕೆ
ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಯಕ ಕೆ.ಎಲ್ ರಾಹುಲ್ನ ರಿಲೀಸ್ ಆಗ್ತಿದ್ದಾರೆ. ಈ ಸುದ್ದಿ ಕನ್ಫರ್ಮ್ ಆದ ಬೆನ್ನಲ್ಲೇ ಕೆ.ಎಲ್ ಖರೀದಿಗೆ ಆರ್ಸಿಬಿಯೂ ಸೇರಿದಂತೆ ಕೆಲವು ಫ್ರಾಂಚೈಸಿಗಳ ವಲಯದಲ್ಲಿ ಚರ್ಚೆ ನಡೀತಿದೆ. ಭವಿಷ್ಯದ ನಾಯಕನ ಹುಡುಕಾಟದಲ್ಲಿರೋ ಎಲ್ಲಾ ತಂಡಗಳ ಪಾಲಿಗೆ ರಾಹುಲ್, ಬೆಸ್ಟ್ ಚಾಯ್ಸ್ ಆಗಿದ್ದಾರೆ. ಕನ್ನಡಿಗನಿಗೆ ಬೇಡಿಕೆ ಹೆಚ್ಚಿದ್ದು, ಕೋಟಿ ಕೋಟಿ ಖುಲಾಯಿಸೋ ಲಕ್ಷಣಗಳಿವೆ.
ರಾಹುಲ್ ಮಾತ್ರವಲ್ಲ, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ ರಿಲೀಸ್ ಆಗಿ ಹರಾಜಿನ ಕಣಕ್ಕೆ ಬರಲಿದ್ದಾರೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ನಿಂದ ಡಿಕಾಕ್ ಮಿಂಚಬಲ್ಲರು. ಹೀಗಾಗಿ ಡಿಕಾಕ್ ಕೂಡ ರೆಕಾರ್ಡ್ ಬ್ರೇಕಿಂಗ್ ಪ್ರೈಸ್ಗೆ ಸೇಲಾಗಬಲ್ಲರು. ಒಟ್ಟಿನಲ್ಲಿ, ಸ್ಟಾರ್ ಆಟಗಾರರು ತಂಡದಿಂದ ರಿಲೀಸ್ ಆಗಿರೋದ್ರಿಂದ ರಿಟೈನ್ಶನ್ ಲಿಸ್ಟ್ ಅನೌನ್ಸ್ಗೂ ಮೊದಲೇ ಆಕ್ಷನ್ನ ಕುತೂಹಲ ಹೆಚ್ಚಿರೋದಂತೂ ಸತ್ಯ.
ಇದನ್ನೂ ಓದಿ:MCA ಅಧಿಕಾರಿಗಳಿಂದ ಶಾಕಿಂಗ್ ಹೇಳಿಕೆ; ಗೊಂದಲದಲ್ಲಿ ಟೀಂ ಇಂಡಿಯಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್