ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಸರಣಿ
ದಿಗ್ಗಜರ ಟೆಸ್ಟ್ ಕ್ರಿಕೆಟ್ ಕರಿಯರ್ ಬಗ್ಗೆ ಹೇಳಿಕೆ
12 ವರ್ಷಗಳ ನಂತರ ತವರಿನ ಟೆಸ್ಟ್ ಸರಣಿ ಸೋತ ಭಾರತ
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಎರಡು ಪಂದ್ಯಗಳು ಪೂರ್ಣಗೊಂಡಿದ್ದು, ನ್ಯೂಜಿಲೆಂಡ್ ಸರಣಿಯನ್ನು ಗೆದ್ದಿದೆ. ಮೂರನೇ ಮತ್ತು ಕೊನೆಯ ಟೆಸ್ಟ್ ನವೆಂಬರ್ 01 ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಈ ಟೆಸ್ಟ್ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ಜಾನ್ ರೈಟ್ ಪ್ರತಿಕ್ರಿಯಿಸಿ.. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ಆಟಗಾರರಿಗೆ ಇದು ತವರಿನಲ್ಲಿ ನಡೆಯುವ ಕೊನೆಯ ಟೆಸ್ಟ್ ಆಗಿರಬಹುದು ಎಂದಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜಾನ್ ರೈಟ್.. ರೋಹಿತ್, ವಿರಾಟ್, ಜಡೇಜಾ ಮತ್ತು ಅಶ್ವಿನ್ ಬಗ್ಗೆ ಮಾತನಾಡಿದ್ದಾರೆ. ಈ ಎಲ್ಲಾ ದಿಗ್ಗಜರಿಗೆ ಮುಂಬೈನಲ್ಲಿ ಒಟ್ಟಿಗೆ ಆಡಿದ ಟೆಸ್ಟ್, ತವರಿನ ಕೊನೆಯ ಟೆಸ್ಟ್ ಆಗಿರಬಹುದು ಎಂದಿದ್ದಾರೆ.
ಬರೋಬ್ಬರಿ 12 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸೋತಿದೆ. ಕೊನೆಯದಾಗಿ 2012ರಲ್ಲಿ ತವರಿನಲ್ಲಿ ಟೆಸ್ಟ್ ಸರಣಿಯನ್ನು ಭಾರತ ಕಳೆದುಕೊಂಡಿತ್ತು. 2012 ರಿಂದ 2024 ರವರೆಗೆ ಟೀಮ್ ಇಂಡಿಯಾ ಸತತ 18 ತವರು ಟೆಸ್ಟ್ ಸರಣಿಗಳನ್ನು ಗೆದ್ದಿದೆ.
ಇದನ್ನೂ ಓದಿ:ಕೋಟಿ, ಕೋಟಿ ಲೆಕ್ಕಾಚಾರ.. ಆರ್ಸಿಬಿಯ ಈ ಸ್ಟಾರ್ಗೆ ಖುಲಾಯಿಸುತ್ತಾ ಅದೃಷ್ಟ?
Might be the last home test match starting Friday in Mumbai of the greats Rohit Virat Ashwin & Jadeja representing India together #INDvNZ
— John Wright (@johnwright15) October 29, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್