ವಿರಾಟ್ ಕೊಹ್ಲಿ ಫ್ಯಾನ್ಸ್ ಫುಲ್ ಖುಷ್ ಆಗೋದು ಗ್ಯಾರಂಟಿ
ಕನ್ನಡಿಗ KL ರಾಹುಲ್ ಖರೀದಿಗೆ ಫ್ರಾಂಚೈಸಿ ಮುಂದಾಗಿದೆಯಾ?
ಕೊಹ್ಲಿಗೆ ಭಾರೀ ಹಣದ ಜೊತೆಗೆ ಈ ಜವಾಬ್ದಾರಿ ನೀಡ್ತಾರಾ?
ಐಪಿಎಲ್ನ ಲೋಕದಲ್ಲಿ ರಿಟೈನ್-ರಿಲೀಸ್ ಗದ್ದಲ ಜೋರಾಗಿದೆ. ಒಂದರ ಮೇಲೊಂದರಂತೆ ಬಿಗ್ ಅಪ್ಡೇಟ್ ಹೊರ ಬೀಳುತ್ತಿವೆ. ಕೆಲವು ಶಾಕ್ ನೀಡಿದ್ರೆ, ಕೆಲವು ಫ್ಯಾನ್ಸ್ನ ಖುಷ್ ಮಾಡುತ್ತಿವೆ. ಇದೀಗ ಆರ್ಸಿಬಿ ಪಾಳಯದಿಂದ ಮೆಗಾ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಅಭಿಮಾನಿಗಳಂತೂ ಈ ಸುದ್ದಿ ಕೇಳಿದ್ರೆ, ಫುಲ್ ಖುಷ್ ಆಗೋದು ಗ್ಯಾರಂಟಿ. ಆ ಗುಡ್ನ್ಯೂಸ್ ಏನು?.
ಇಂಡಿಯನ್ ಪ್ರೀಮಿಯರ್ ಲೀಗ್ ರಿಟೈನ್ಶನ್ ಡೆಡ್ಲೈನ್ ಸಮೀಪಿಸಿದೆ. ರಿಟೈನ್ ಮಾಡಿಕೊಂಡ ಆಟಗಾರರ ಪಟ್ಟಿ ಸಲ್ಲಿಸಲು ಒಂದೇ ಒಂದು ದಿನ ಮಾತ್ರ ಬಾಕಿ. ನಾಳೆ ಸಂಜೆಯೊಳಗೆ ಫೈನಲ್ ಲಿಸ್ಟ್ ಅನೌನ್ಸ್ ಮಾಡಬೇಕಿದ್ದು, ಫ್ರಾಂಚೈಸಿಗಳಲ್ಲಿ ತಂಡಗಳಲ್ಲಿ ರಿಟೈನ್-ರಿಲೀಸ್ ಲೆಕ್ಕಾಚಾರ ಜೋರಾಗಿದೆ. ಅಳೆದುತೂಗಿ ಲೆಕ್ಕಾಚಾರ ಹಾಕಿ ಆರ್ಸಿಬಿ ಕೂಡ ರಿಟೈನ್ ಪಟ್ಟಿಯನ್ನ ಫೈನಲ್ ಮಾಡಿದೆ.
ಇದನ್ನೂ ಓದಿ: ಕೊಹ್ಲಿ, ಶರ್ಮಾ, ಅಶ್ವಿನ್, ಜಡೇಜಾಗೆ ಇದು ತವರಿನ ಕೊನೆಯ ಟೆಸ್ಟ್ -ಶಾಕಿಂಗ್ ನ್ಯೂಸ್ ಕೊಟ್ಟ ಮಾಜಿ ಕೋಚ್
ನೋ ಡೌಟ್.. ಕೊಹ್ಲಿಯೇ ಆರ್ಸಿಬಿಯ ಮೊದಲ ಆಯ್ಕೆ.!
ಐಪಿಎಲ್ ರಿಟೈನ್ಶನ್ ಅಂತೆ-ಕಂತೆಗಳ ಸುದ್ದಿಯ ನಡುವೆ ಕನ್ಫರ್ಮ್, ಇದು ಆಗೇ ಆಗುತ್ತೆ ಅನ್ನೋ ಸುದ್ದಿ ಏನಾದ್ರೂ ಇದ್ರೆ ಅದು ವಿರಾಟ್ ಕೊಹ್ಲಿಯದ್ದು ಮಾತ್ರ. ನನ್ನ ಕೊನೆ ಐಪಿಎಲ್ ಪಂದ್ಯವನ್ನೂ ನಾನು ಆಡೋದು ಆರ್ಸಿಬಿಗೆ ಮಾತ್ರ, ಈ ಜೀವ ಎಂದಿಗೂ ಎಂದೆದಿಗೂ ಆರ್ಸಿಬಿಗೆ ಅಂತಾ ಕೊಹ್ಲಿ ಬಹಿರಂಗವಾಗಿ 2 ವರ್ಷದ ಹಿಂದೆ ಘೋಷಿಸಿದ್ದಾಗಿದೆ. ಆರ್ಸಿಬಿ ಫ್ರಾಂಚೈಸಿ ಕೊಹ್ಲಿಯನ್ನ ಬಿಡಲ್ಲ. ಬಿಡೋಕೆ ಸಾಧ್ಯ ಇಲ್ಲ. ಯಾಕಂದ್ರೆ, ಕೊಹ್ಲಿ ಆರ್ಸಿಬಿಯ ಜೀವ. ಈ ಸೀಸನ್ ಮೆಗಾ ಆಕ್ಷನ್ಗೂ ಮುನ್ನ ಕೂಡ ಕೊಹ್ಲಿ ಆರ್ಸಿಬಿ ಫಸ್ಟ್ ಚಾಯ್ಸ್ ರಿಟೈನ್ಶನ್ ಆಗಿದ್ದಾರೆ.
18 ಕೋಟಿಯ ಹಿಂದೆ ಫ್ರಾಂಚೈಸಿಯ ದೊಡ್ಡ ಲೆಕ್ಕಾಚಾರ.!
ಸದ್ಯ ಕೊಹ್ಲಿಯನ್ನ ಫಸ್ಟ್ ಚಾಯ್ಸ್ ಪ್ಲೇಯರ್ ಆಗಿ ರಿಟೈನ್ ಮಾಡಿಕೊಳ್ಳಲು ಸಜ್ಜಾಗಿರುವ ಆರ್ಸಿಬಿ 18ರ ಜೆರ್ಸಿ ನಂಬರ್ ವೀರನಿಗೆ 18 ಕೋಟಿಯನ್ನ ನೀಡಲು ನಿರ್ಧರಿಸಿದೆ. ಆದ್ರೆ, ಈ ರಿಟೈನ್ ಹಿಂದೆ ಒಂದು ದೊಡ್ಡ ಲೆಕ್ಕಾಚಾರವಿದೆ. ನಾಯಕನನ್ನ ಬದಲಾವಣೆ ಮಾಡಲು ಮುಂದಾಗಿರುವ ಆರ್ಸಿಬಿ ಫ್ರಾಂಚೈಸಿ, ಕೊಹ್ಲಿಗೆ ಮತ್ತೆ ಪಟ್ಟಕಟ್ಟೋ ಪ್ಲಾನ್ ಹಾಕಿಕೊಂಡಿದೆ.
ಫ್ಲಾಫ್ ಶೋ ನೀಡಿದ ಡುಪ್ಲೆಸಿಗೆ ಗೇಟ್ ಪಾಸ್..?
ಹಾಲಿ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಗೆ ವಯಸ್ಸು ಹಾಗೂ ಫಾರ್ಮ್ ಎರಡೂ ವಿಲನ್ಗಳಾಗಿವೆ. ಭಾರೀ ನಿರೀಕ್ಷೆಯಿಟ್ಟು 2022ರಲ್ಲಿ ಡುಪ್ಲೆಸಿಯನ್ನ ಆರ್ಸಿಬಿಗೆ ಕರೆತಂದು ನಾಯಕನ ಪಟ್ಟ ಕಟ್ಟಲಾಯಿತು. ಆದ್ರೆ, 2 ಸೀಸನ್ಗಳಲ್ಲಿ ನಾಯಕ ಡುಪ್ಲೆಸಿಯ ಪರ್ಫಾಮೆನ್ಸ್ ಅಷ್ಟಕಷ್ಟೇ. ಎರಡೂ ಸೀಸನ್ಗಳಲ್ಲಿ ಫ್ಲೇ ಆಫ್ ಹಂತದಲ್ಲಿ ತಂಡ ನಿರ್ಗಮಿಸಿದೆ. ಬ್ಯಾಟ್ಸ್ಮನ್ ಆಗಿಯೂ ಡುಪ್ಲೆಸಿ ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಹೀಗಾಗಿ ಡುಪ್ಲೆಸಿಗೆ ಗೇಟ್ಪಾಸ್ ನೀಡಲು ಫ್ರಾಂಚೈಸಿ ನಿರ್ಧರಿಸಿದೆ.
ಭಾರತೀಯ ಕ್ರಿಕೆಟಿಗರ ಮೇಲೆ ಫ್ರಾಂಚೈಸಿ ಕಣ್ಣು.!
ಸೌತ್ ಆಫ್ರಿಕಾದ ಡುಪ್ಲೆಸಿಗೆ ಗೇಟ್ಪಾಸ್ ನೀಡುವ ಲೆಕ್ಕಾಚಾರದಲ್ಲಿರೋ ಆರ್ಸಿಬಿ ಫ್ರಾಂಚೈಸಿ, ಭಾರತದ ಆಟಗಾರರ ಮೇಲೆ ಕಣ್ಣಿಟ್ಟಿದೆ. ಹರಾಜಿನ ಕಣಕ್ಕೆ ಬರಲು ನಿರ್ಧರಿಸಿರೋ ಪಂತ್, ಕೆ.ಎಲ್ ರಾಹುಲ್ ಇಬ್ಬರನ್ನ ಟಾರ್ಗೆಟ್ ಮಾಡಿದೆ. ಒಂದು ವೇಳೆ ಈ ಇಬ್ಬರ ಮೇಲೆ ನಿರೀಕ್ಷೆಗೂ ಮೀರಿದ ಬಿಡ್ಡಿಂಗ್ ನಡೆದು, ಹರಾಜಿನಲ್ಲಿ ಕೈ ತಪ್ಪಿದ್ರೆ, ಆಗ ಪ್ಲಾನ್ ಬಿ ವರ್ಕೌಟ್ ಮಾಡಲು ಆರ್ಸಿಬಿ ಚಿಂತಿಸಿದೆ. ಆ ಪ್ಲಾನ್ ಬಿ ಏನು ಅಂದರೆ ಕೊಹ್ಲಿಗೆ ಆರ್ಸಿಬಿ ಪಟ್ಟಾಭಿಶೇಕ.
ಕೊಹ್ಲಿಗಿಂತ ಬೆಸ್ಟ್ ಚಾಯ್ಸ್ ಬೇರೆ ಯಾರಿದ್ದಾರೆ.?
ಯಾರು ಸಿಗಲಿ, ಬಿಡಲಿ ಆರ್ಸಿಬಿ ತಂಡವನ್ನ ಮುನ್ನಡೆಸಲು ಕೊಹ್ಲಿಗಿಂತ ಬೆಸ್ಟ್ ಚಾಯ್ಸ್ ಮತ್ತೊಬ್ಬರಿಲ್ಲ. ಕೊಹ್ಲಿ ತಂಡವನ್ನ ಮುನ್ನಡೆಸಿದ್ರೆ, ಮಾರ್ಕೆಟಿಂಗ್ ಲೆಕ್ಕಾಚಾರದಲ್ಲಂತೂ ಆರ್ಸಿಬಿಗೆ ಅಡ್ವಾಂಟೇಜೆ ಜಾಸ್ತಿ. ಇನ್ನು, ಆನ್ಫೀಲ್ಡ್ ಆಟಕ್ಕೆ ಬಂದ್ರೆ, ಆರ್ಸಿಬಿಯನ್ನ ಸುದೀರ್ಘ ಕಾಲ ಮುನ್ನಡೆಸಿದ ಏಕೈಕ ನಾಯಕ ಕೊಹ್ಲಿ. ಆರಂಭದಿಂದ ಈವರೆಗೆ 7 ಮಂದಿ ಆರ್ಸಿಬಿಯನ್ನ ಮುನ್ನಡೆಸಿದ್ದಾರೆ. ಈ ಪೈಕಿ ನಾಯಕನಾಗಿ 50 ಪಂದ್ಯಗಳ ಗಡಿ ದಾಟಿರೋದು ಕೊಹ್ಲಿ ಒಬ್ಬರೇ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ RCB
ನಾಯಕನಾಗಿ ಆರ್ಸಿಬಿ ತಂಡವನ್ನ 143 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮುನ್ನಡೆಸಿದ್ದಾರೆ. ಈ ಪೈಕಿ 66 ಪಂದ್ಯಗಳಲ್ಲಿ ಗೆಲುವು, 70 ಪಂದ್ಯಗಳಲ್ಲಿ ಸೋಲು ಕಂಡಿದ್ದು, 3 ಪಂದ್ಯ ಟೈ, 4 ಪಂದ್ಯಗಳು ರದ್ದಾಗಿವೆ.
ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ 4 ಬಾರಿ ಫ್ಲೇ ಆಫ್ಗೆ ಪ್ರವೇಶಿಸಿದ್ರೆ, ಒಂದು ಬಾರಿ ಕಪ್ ಗೆಲ್ಲೋ ಹಂತಕ್ಕೆ ಬಂದು ಎಡವಿದೆ. 2016 ಐಪಿಎಲ್ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಸಕ್ಸಸ್ ಕಡೆಗೆ ತಂಡವನ್ನ ಮುನ್ನಡೆಸೋದ್ರ ಜೊತೆಗೆ ಡ್ರೆಸ್ಸಿಂಗ್ ರೂಮ್ ವಾತಾವರಣವನ್ನ ತಿಳಿಯಾಗಿಸಿಕೊಳ್ಳೋ, ಭಾರತ ಹಾಗೂ ವಿದೇಶಿ ಆಟಗಾರರನ್ನ ಹ್ಯಾಂಡಲ್ ಮಾಡಬಲ್ಲ ಸಾಮರ್ಥ್ಯ ಕೊಹ್ಲಿಗಿದೆ.
18 ಕೋಟಿ ನೀಡಿ ಕೊಹ್ಲಿಯನ್ನ ರಿಟೈನ್ ಮಾಡಲು ಹೊರಟಿರೋ ಆರ್ಸಿಬಿ ಬಹುದೊಡ್ಡ ಲೆಕ್ಕಾಚಾರ ಹಾಕಿದೆ. ಫ್ರಾಂಚೈಸಿಯ ಹಿತ ದೃಷ್ಟಿಯಿಂದ ಈ ಲೆಕ್ಕಾಚಾರ ನೂರಕ್ಕೆ ನೂರರಷ್ಟು ಒಳ್ಳೆಯದು. ಆದ್ರೆ, ಮ್ಯಾನೇಜ್ಮೆಂಟ್ನ ಈ ಆಫರ್ ಕೊಹ್ಲಿ ಒಪ್ತಾರಾ ಅನ್ನೋದೆ ಕುತೂಹಲ ಮೂಡಿಸಿದೆ. ಇದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ