ರಾಮನ ಊರಲ್ಲಿ ವಿಶ್ವ ದಾಖಲೆಯ ದೀಪೊತ್ಸವ!
500 ವರ್ಷಗಳ ಬಳಿಕ ಬಾಲರಾಮನ ಮುಂದೆ ಮೊದಲ ದೀಪೋತ್ಸವ
2 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದ ದೀಪೋತ್ಸವ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿನ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಮಮಂದಿರ ಉದ್ಘಾಟನೆ ಬಳಿಕ ಮೊದಲ ದೀಪಾವಳಿ ಇದಾಗಿದೆ. 500 ವರ್ಷಗಳ ನಂತರ ಬಾಲರಾಮನ ಮುಂದೆಯೇ ಅದ್ಧೂರಿಯಾಗಿ ಬೆಳಕಿನ ಹಬ್ಬ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಯ್ತು.
ಇದನ್ನೂ ಓದಿ:ದೀಪಾವಳಿ ಆಫರ್; ಬರೀ 699 ರೂಪಾಯಿಗೆಗೆ ಸಿಗುತ್ತಿದೆ ಇವೆರಡು ಫೋನ್!
ಉತ್ತರ ಪ್ರದೇಶದ ಅಯೋಧ್ಯಾ ನಗರಿ ದೀಪಾವಳಿ ಬೆಳಕಿನಲ್ಲಿ ರಾರಾಜಿಸಿತು. ಸರಯುವಿನ 55 ಘಾಟ್ಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಏಕಕಾಲದಲ್ಲಿ ಬೆಳಗಿಸಲಾಯಿತು. ಇದೇ ವೇಳೆ 1,121 ಮಂದಿ ವೇದಾಚಾರ್ಯರು ಸರಯೂ ನದಿಗೆ ಆರತಿ ಎತ್ತಿದರು. ಈ ದೃಶ್ಯ ಕಣ್ಣಿಗೆ ಹಬ್ಬದಂತೆ ರಮಣೀಯವಾಗಿ ಗೋಚರಿಸಿತು

ಇದೇ ವೇಳೆ ಎರಡು ಗಿನ್ನೆಸ್ ವಿಶ್ವದಾಖಲೆಗಳು ನಿರ್ಮಾಣವಾದವು. ಒಂದೆಡೆ ಅತಿ ಹೆಚ್ಚು ಜನರು ಆರತಿ ಬೆಳಗಿದ ದಾಖಲೆಯಾದರೆ ಮತ್ತೊಂದೆಡೆ, ವಿಶ್ವದಲ್ಲೇ ಅತಿ ಹೆಚ್ಚು ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಹಚ್ಚಿದ ದಾಖಲೆ ರಚನೆಯಾಯಿತು. ಸಿಎಂ ಯೋಗಿ ಆದಿತ್ಯನಾಥ್ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.
ದೀಪೋತ್ಸವದ ಹಿನ್ನೆಲೆ ರಾಮಾಯಣದ ಘಟನೆಗಳನ್ನು ಚಿತ್ರಿಸುವ ಲೇಸರ್ ಶೋ ಡ್ರೋನ್ ಪ್ರದರ್ಶನ ಕೂಡ ನಡೆಯಿತು. ಡ್ರೋನ್ನಲ್ಲಿ ಮೂಡಿದ ರಾಮ, ಸೀತಾ, ಲಕ್ಷ್ಮಣ, ಹನುಮಂತನ ಆಕೃತಿ ಮನಸೂರೆಗೊಳಿಸ್ತು. ಇನ್ನು ಆಗಸದಲ್ಲಿ ಪಟಾಕಿಗಳು ಚಿತ್ತಾರ ಬಿಡಿಸಿದವು.
ಒಟ್ಟಾರೆ ರಾಮಜನ್ಮ ಭೂಮಿಯಲ್ಲಿ 8ನೇ ದೀಪೋತ್ಸವ. 500 ವರ್ಷಗಳ ಬಳಿಕ ಬಾಲರಾಮನ ಮುಂದೆ ನಡೆದ ಮೊದಲ ದೀಪೋತ್ಸವ ಸ್ವರ್ಗವನ್ನೇ ಧರೆಗಿಳಿದಂತೆ ಕಂಗೊಳಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ