ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ
ಮುಂಬೈನಿಂದ ಹಿಟ್ಮ್ಯಾನ್ ಹೊರ ಬಂದ್ರೆ 3 ತಂಡ ಕಾದು ಕುಳಿತಿವೆ
ಆರ್ಸಿಬಿ ಜತೆ ಪೈಪೋಟಿ ಬೀಳುವ ಇನ್ನೆರಡು ತಂಡಗಳು ಯಾವುವು?
ರೋಹಿತ್ ಶರ್ಮಾ ಸ್ಟಾರ್ ಪ್ಲೇಯರ್. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಹಿಟ್ಮ್ಯಾನ್ಗೆ 2024ರ ಟೂರ್ನಿಯಲ್ಲಿ ಮುಂಬೈ ಫ್ರಾಂಚೈಸಿ ಬಿಗ್ ಶಾಕ್ ನೀಡಿತ್ತು. ಏಕಾಏಕಿ ನಾಯಕ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನ ತಂದು ಕೂರಿಸಿತ್ತು. ಇದರಿಂದ ರೋಹಿತ್ ಶರ್ಮಾ ಮನದಲ್ಲೇ ನೊಂದಿದ್ದರು. ಹೀಗಾಗಿ ಅವಾಗಿನಿಂದ ಮುಂಬೈ ಫ್ರಾಂಚೈಸಿ ಜೊತೆ ರೋಹಿತ್ ಒಳ್ಳೆಯ ಸಂಬಂಧ ಹೊಂದಿಲ್ಲ ಎನ್ನಲಾಗಿದೆ. ಹೀಗಾಗಿ ಮುಂಬೈನಿಂದ ಹಿಟ್ಮ್ಯಾನ್ ಹೊರ ಬಂದರೆ 3 ಐಪಿಎಲ್ ಫ್ರಾಂಚೈಸಿಗಳು ಖರೀದಿ ಮಾಡಲು ಕಾದು ಕುಳಿತಿವೆ.
ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಸಹ ಆಟಗಾರರು, ಹಾಗೂ ಫ್ಯಾನ್ಸ್ ವಲಯದಿಂದ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಅಲ್ಲದೇ 2024ರ ಟೂರ್ನಿಯಲ್ಲಿ ಮುಂಬೈ ಹೀನಾಯ ಪ್ರದರ್ಶನ ನೀಡಿತ್ತು. ಕಳೆದ ವರ್ಷ ಏನೇ ಆಗಲಿ 2025ರ ಐಪಿಎಲ್ನಲ್ಲಿ ಮುಂಬೈ ಟೀಮ್ನಲ್ಲಿ ಆಡುತ್ತಾರೆ, ಇಲ್ವಾ ಎನ್ನುವುದು ಈವೆರೆಗೂ ಕನ್ಫರ್ಮ್ ಇಲ್ಲ. ಇದರ ಜೊತೆ ಇಂದು ಮುಂಬೈ ತಂಡ ರಿಟೈನ್ ಮಾಡಿಕೊಳ್ಳುವವರ ಹೆಸರು ಘೋಷಣೆ ಮಾಡಬೇಕಿದೆ. ಒಂದು ವೇಳೆ ರೋಹಿತ್ರನ್ನ ಆಕ್ಷನ್ಗೆ ಬಿಟ್ಟರೇ ಈ ಮೂರು ತಂಡ ಖರೀದಿಗೆ ಪೈಪೋಟಿ ಬೀಳಲಿವೆ.
ಇದನ್ನೂ ಓದಿ: ಫ್ಯಾನ್ಸ್ ತಲೆಗೆ ಕೆಲಸ ಕೊಟ್ಟ RCB.. ರಿಟೈನ್ ಪ್ಲೇಯರ್ಸ್ ಹೆಸರು ಅಭಿಮಾನಿಗಳು ಹೇಳಬೇಕಾ?
ಆ ಮೂರು ಫ್ರಾಂಚೈಸಿಗಳು ಇವೆ!
ಆರ್ಸಿಬಿಗೆ ಸದ್ಯ ಕಪ್ ಗೆದ್ದು ಕೊಡುವ ದಕ್ಷ ಆಟಗಾರನ ಕನವರಿಕೆಯಲ್ಲಿದೆ. ಹೀಗಾಗಿ ರೋಹಿತ್ರನ್ನ ಖರೀದಿ ಮಾಡಿದರೆ ಆ ಟ್ರೋಫಿ ಬರ ನೀಗಬಹುದು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಂದೇ ಟೀಮ್ ಆಡಬೇಕು ಎನ್ನುವುದು ಕೂಡ ಫ್ಯಾನ್ಸ್ ಆಶಯವಾಗಿದೆ.
ಪಂಜಾಬ್ ಟೀಮ್ ಕೂಡ ಆರ್ಸಿಬಿ ಹಾದಿಯಲ್ಲೇ ಇದ್ದು ಟ್ರೋಫಿ ಗೆದ್ದುಕೊಡುವ ಚಾಣಕ್ಷ ಪ್ಲೇಯರ್ ಬೇಕೆಂದು ಕಾಯುತ್ತಿದೆ. ಮುಂಬೈಗೆ 5 ಟ್ರೋಫಿ ಗೆದ್ದುಕೊಟ್ಟಿರುವ ರೋಹಿತ್ ಪಂಜಾಬ್ ಆಸೆ ನೀಗಿಸಬಹುದು. ಪಂಜಾಬ್ ಫ್ರಾಂಚೈಸಿ ಕೂಡ ರೋಹಿತ್ ಖರೀದಿಗೆ ಕಣ್ಣಾಕಿ ಕುಳಿತಿದೆ.
ಸದ್ಯದ ಮಾಹಿತಿ ಪ್ರಕಾರ ರಿಷಬ್ ಪಂತ್ ಡೆಲ್ಲಿ ಫ್ರಾಂಚೈಸಿಯಲ್ಲಿ ಆಡುವುದಿಲ್ಲ ಎಂದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ. ಈ ಸ್ಥಾನ ತುಂಬಲು ರೋಹಿತ್ ಸರಿಯಾದ ಆಯ್ಕೆ ಎಂದು ಡೆಲ್ಲಿಯವರು ಕಾಯುತ್ತಿದ್ದಾರೆ. ಹಿರಿಯ ಆಟಗಾರ ಆಗಿದ್ದರಿಂದ ತಂಡದ ಆಗ-ಹೋಗುಗಳನ್ನ ಗಮನಿಸಬಲ್ಲ ಎಂದು ಡೆಲ್ಲಿ ಐಡಿಯಾ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ