ಇತಿಹಾಸದಲ್ಲೇ ಮೊದಲ ಬಾರಿಗೆ ತವರಲ್ಲಿ ಭಾರತ ವೈಟ್ವಾಶ್
ಭಾರತದಲ್ಲಿ ಸರಣಿ ಗೆದ್ದ ಮೊದಲ ವಿದೇಶಿ ತಂಡ ಯಾವುದು?
ಪಂದ್ಯದಲ್ಲಿ ರೋಹಿತ್ ಪಡೆಯ ಪೆವಿಲಿಯನ್ ಪರೇಡ್ ಹೇಗಿತ್ತು?
ಯಾವ ಮೈದಾನದಲ್ಲಿ ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿತ್ತೋ, ಅದೇ ಮೈದಾನದಲ್ಲಿ ಹಿಂದೆಂದೂ ಕಾಣದಂತಹ ಮುಖಭಂಗ ಅನುಭವಿಸಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವೈಟ್ವಾಶ್ ಮುಖಭಂಗ ಅನುಭವಿಸಿದೆ. ಗೆದ್ದ ನ್ಯೂಜಿಲೆಂಡ್ ಇತಿಹಾಸ ಸೃಷ್ಟಿಸಿದೆ. ವಾಂಖೆಡೆ ಅಂಗಳದಲ್ಲಿ ಸಾಧಾರಣ ಟಾರ್ಗೆಟ್ ಬೆನ್ನತ್ತುವಲ್ಲಿ ಟೀಮ್ ಇಂಡಿಯಾ ಎಡವಿದೆ.
ತವರಿನಲ್ಲಿ ಹೀನಾಯ ಮುಖಭಂಗ.!
ಮುಂಬೈ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯ ಬಳಿಕ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಒಂದು ಸಮಾಧಾನ ಮೂಡಿತ್ತು. ಮೊದಲ 2 ಟೆಸ್ಟ್ ಸೋತರೂ ಕನಿಷ್ಠ ಪಕ್ಷ ವೈಟ್ವಾಶ್ ಮುಖಭಂಗದಿಂದ ಪಾರಾಗೋ ಸಮಾಧಾನ ಮೂಡಿತ್ತು. ಆದ್ರೆ, 3ನೇ ದಿನದ ಆಟದಲ್ಲಿ ಆಗಿದ್ದು ಹೀನಾಯ ಮುಖಭಂಗ. 3ನೇ ದಿನದಾಟದ ಆರಂಭದಲ್ಲೇ ನ್ಯೂಜಿಲೆಂಡ್ನ ಅಜಾಜ್ ಪಟೇಲ್ ಜಡೇಜಾ ಸ್ಪಿನ್ ಬಲೆಗೆ ಬಿದ್ದರು. 174 ರನ್ಗಳಿಗೆ ಆಲೌಟ್ ಆದ ಕಿವೀಸ್ ಪಡೆ ಭಾರತದ ಗೆಲುವಿಗೆ 147 ರನ್ಗಳ ಸಾಧಾರಣ ಟಾರ್ಗೆಟ್ ನೀಡಿತು.
ಇದನ್ನೂ ಓದಿ: ಪವನ್ ಕಲ್ಯಾಣ್ಗಾಗಿ 487 km ಸೈಕಲ್ನಲ್ಲಿ ಮಹಿಳೆ ಪ್ರಯಾಣ.. ಇದಕ್ಕೆ ಡಿಸಿಎಂ ಹೇಳಿದ್ದು ಏನು?
147 ರನ್ ಬಿಗ್ ಟಾರ್ಗೆಟ್ ಏನಾಗಿರಲಿಲ್ಲ
ಹೋಮ್ಗ್ರೌಂಡ್ನಲ್ಲಿ, ವಿಶ್ವ ಶ್ರೇಷ್ಟ ಬ್ಯಾಟ್ಸ್ಮನ್ಗಳ ದಂಡನ್ನೆ ಹೊಂದಿದ್ದ ಟೀಮ್ ಇಂಡಿಯಾಗೆ 147 ರನ್ ಬಿಗ್ ಟಾರ್ಗೆಟ್ ಏನಾಗಿರಲಿಲ್ಲ. ಆದ್ರೆ, ಈ ಸೋ ಕಾಲ್ಡ್ ವರ್ಲ್ಡ್ ಕ್ಲಾಸ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿಬಿಟ್ಟರು. ಪೆವಿಲಿಯನ್ ಪರೇಡ್ಗೆ ಮುನ್ನುಡಿ ಬರೆದಿದ್ದೇ ಕ್ಯಾಪ್ಟನ್ ರೋಹಿತ್ ಶರ್ಮಾ. ರೋಹಿತ್ ಶರ್ಮಾ 11 ರನ್ ಗಳಿಸಿ ಔಟಾದ್ರೆ, ಪ್ರಿನ್ಸ್ ಶುಭ್ಮನ್ ಗಿಲ್, ಕಿಂಗ್ ವಿರಾಟ್ ಕೊಹ್ಲಿ ಒಂದು ರನ್ಗಳಿಸುವಷ್ಟರಲ್ಲೇ ಸುಸ್ತಾದರು. ಇವರ ಹಿಂದೆ ಯಶಸ್ವಿ ಜೈಸ್ವಾಲ್ ಕೂಡ ಡಗೌಟ್ಗೆ ದೌಡಾಯಿಸಿದರು.
ಇನ್ನು ಹೋಮ್ಗ್ರೌಂಡ್ ವಾಂಖೆಡೆಯಲ್ಲಿ ಮನೆ ಮಗ ಸರ್ಫರಾಜ್ ಖಾನ್ ಕೂಡ 1 ರನ್ಗಳಿಸಿ ನಿರ್ಗಮಿಸಿದರು. ಆಲ್ರೌಂಡರ್ ರವೀಂದ್ರ ಜಡೇಜಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ಮಾನ ಉಳಿಸಿದ ‘ಫೈಟರ್’ ರಿಷಬ್ ಪಂತ್.!
ಹೀನಾಯ ಸೋಲಿನ ನಡುವೆ ಸ್ವಲ್ಪ ಮಟ್ಟಿಗೆ ಮಾನ ಉಳಿದಿದೆ ಅಂದ್ರೆ ಅದಕ್ಕೆ ಕಾರಣ ರಿಷಬ್ ಪಂತ್. 28 ರನ್ಗೆ 4 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಕಣಕ್ಕಿಳಿದ ಫೈಟರ್ ಪಂತ್, ಹೋರಾಟ ನಡೆಸಿದರು. ನ್ಯೂಜಿಲೆಂಡ್ ಬೌಲರ್ಗಳ ದಾಳಿಗೆ ಕೌಂಟರ್ ಅಟ್ಯಾಕ್ ನಡೆಸಿದ ಪಂತ್ 9 ಬೌಂಡರಿ, 1 ಸಿಕ್ಸರ್ ಸಿಡಿಸಿ ಹಾಫ್ ಸೆಂಚುರಿ ಪೂರೈಸಿದರು. 64 ರನ್ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದ ಪಂತ್, ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇದ್ರೊಂದಿಗೆ ಗೆಲುವಿನ ಕನಸೂ ನುಚ್ಚು ನೂರಾಯಿತು.
ಅಶ್ವಿನ್ ಆಟ 8 ರನ್ಗಳಿಗೆ ಅಂತ್ಯವಾದ್ರೆ, ಆಕಾಶ್ ದೀಪ್ ಮೊದಲ ಎಸೆತದಲ್ಲೇ ಕ್ಲೀನ್ಬೋಲ್ಡ್ ಆದ್ರು. ಸುಂದರ್ 12 ರನ್ಗಳಿಸಿ ಔಟಾಗೋದ್ರೊಂದಿಗೆ ಟೀಮ್ ಇಂಡಿಯಾ ಆಲೌಟ್ ಆಯಿತು.
ವಿಶ್ವ ಶ್ರೇಷ್ಠ ಆಟಗಾರರನ್ನ ಹೊಂದಿರೋ ವಿಶ್ವ ಶ್ರೇಷ್ಠ ತಂಡ ಕೇವಲ 147 ರನ್ಗಳ ಗುರಿ ಬೆನ್ನತ್ತಲಾಗದೇ ಆಲೌಟ್ ಆಗಿ 25 ರನ್ ಅಂತರದಲ್ಲಿ ಸೋಲಿಗೆ ಶರಣಾಯಿತು. ಇತಿಹಾಸದಲ್ಲೇ ಮೊದಲ ಬಾರಿ ತವರಿನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಮುಖಭಂಗ ಅನುಭವಿಸಿದ ಅಪಖ್ಯಾತಿಗೆ ರೋಹಿತ್ ಪಡೆ ಗುರಿಯಾಯಿತು. 3-0 ಅಂತರದಲ್ಲಿ ಸರಣಿ ಗೆದ್ದ ನ್ಯೂಜಿಲೆಂಡ್, ಭಾರತದ ನೆಲದಲ್ಲಿ ಸರಣಿ ಗೆದ್ದ ಮೊದಲ ವಿದೇಶಿ ತಂಡ ಅನ್ನೋ ದಾಖಲೆ ಬರೆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ