ರಿಟೈನ್ಶನ್ ಟೆನ್ಶನ್ ಅಂತ್ಯ.. ಈಗ ಏನುದ್ರು ಮೆಗಾ ಹರಾಜು
ಆಕ್ಷನ್ನಲ್ಲಿ ಯಾರಿಗೆ ಮಣೆ ಹಾಕಬೇಕು ಅನ್ನೋ ಲೆಕ್ಕಾಚಾರ
ರಾಹುಲ್ ಕರೆತರುವಲ್ಲಿ ಮುಂಬೈ ಟೀಮ್ ಲೆಕ್ಕಾಚಾರ ಹೀಗಿದೆ
ಐಪಿಎಲ್ನ ರಿಟೈನ್ಶನ್ ಮುಗಿದಿದೆ. ಇದೀಗ ಎಲ್ಲರ ಕಣ್ಣು ಮೆಗಾ ಹರಾಜಿನ ಮೇಲೆ ಬಿದ್ದಿದೆ. ಸ್ಟಾರ್ ಆಟಗಾರರ ದಂಡನ್ನೇ ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್, ಈ ಮೆಗಾ ಹರಾಜಿನಲ್ಲಿ ಕೆ.ಎಲ್.ರಾಹುಲ್ಗೆ ಮಣೆ ಹಾಕುವ ಲೆಕ್ಕಾಚಾರಾದಲ್ಲಿದೆ. ಬೆಂಗಳೂರು ಬಿಟ್ಟು ರಾಹುಲ್ ಮುಂಬೈ ಸೇರ್ತಾರಾ?.
ಕೆ.ಎಲ್.ರಾಹುಲ್ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು
ಐಪಿಎಲ್ನ ರಿಟೈನ್ಶನ್ನ ಟೆನ್ಶನ್ ಮುಗಿದಿದೆ. ಅಳೆದು ತೂಗಿ, ಲೆಕ್ಕಾಚಾರ ಹಾಕಿ ಬೇಕಾದ ಆಟಗಾರರನ್ನ ಉಳಿಸಿಕೊಂಡಿರುವ ಫ್ರಾಂಚೈಸಿಗಳು, ಈಗ ಮೆಗಾ ಹರಾಜಿನಲ್ಲಿ ಯಾರಿಗೆ ಮಣೆ ಹಾಕಬೇಕು.? ಅನ್ನೋ ಸ್ಟ್ರಾಟರ್ಜಿಯಲ್ಲಿ ಬ್ಯೂಸಿಯಾಗಿವೆ. ತಂಡಕ್ಕೆ ಫಿಟ್ ಆಗುವಂತ ಆಟಗಾರರ ಲಿಸ್ಟ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಮೆಗಾ ಹರಾಜಿನಲ್ಲಿ ಹಣದ ಹೊಳೆ ಹರಿಸಲು ಪ್ಲಾನ್ ರೂಪಿಸುತ್ತಿವೆ. ಚಾಂಪಿಯನ್ ಟೀಮ್ ಮುಂಬೈ ಇಂಡಿಯನ್ಸ್ ಕೂಡ ಇದ್ರಿಂದ ಹೊರತಾಗಿಲ್ಲ.
ಇದನ್ನೂ ಓದಿ: 147 ರನ್ ಟಾರ್ಗೆಟ್ ಮುಟ್ಟಲಾಗದ ಟೀಮ್ ಇಂಡಿಯಾ.. ಸ್ವಲ್ಪ ಮಾನ ಉಳಿಸಿದ ರಿಷಬ್ ಪಂತ್!
ರಿಟೈನ್ಶನ್ನಲ್ಲಿ ಸ್ಟಾರ್ ಆಟಗಾರರನ್ನ ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್, ಮೆಗಾ ಹರಾಜಿನತ್ತ ದೃಷ್ಟಿ ನೆಟ್ಟಿದೆ. ಈ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ನ ಖರೀದಿಸುವ ಲೆಕ್ಕಾಚಾರದಲ್ಲಿದೆ. ಇದರ ಹಿಂದೆ ನಾನಾ.. ಸ್ಟ್ರಾಟರ್ಜಿಗಳು, ತಂತ್ರಗಳು ಅಡಗಿವೆ.
ಕನ್ನಡಿಗನ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು ಯಾಕೆ?
ಸ್ಟಾರ್ ಆಟಗಾರರ ದಂಡನ್ನೇ ಉಳಿಸಿಕೊಂಡಿರುವ ಮುಂಬೈ, ಹರಾಜಿನಲ್ಲಿ ಕೆ.ಎಲ್.ರಾಹುಲ್ನ ಖರೀದಿಸುತ್ತಾ ಎಂಬ ಪ್ರಶ್ನೆ ನಿಮ್ಮನ್ನ ಕಾಡಬಹುದು. ಆದ್ರೆ, ಇದಕ್ಕೆ ಪ್ರಮುಖ ಕಾರಣ ಒಂದಿದೆ. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯುವುದು ಮುಂಬೈ ಪ್ಲಾನ್,! ರಿಟೈನ್ಶನ್ನಲ್ಲಿ ಇಶಾನ್ ಕಿಶನ್ನ ಕೈಬಿಟ್ಟಿರುವ ಮುಂಬೈ, ವಿಕೆಟ್ ಕೀಪರ್ ಆ್ಯಂಡ್ ಓಪನರ್ ಬ್ಯಾಟರ್ನ ಹುಡುಕಾಟದಲ್ಲಿದೆ. ಹೀಗಾಗಿ ವಿಕೆಟ್ ಕೀಪಿಂಗ್ ಜೊತೆಗೆ ಆರಂಭಿಕನಾಗಿ ಅಬ್ಬರಿಸಬಲ್ಲ ಕೆ.ಎಲ್ ರಾಹುಲ್ ತಂಡಕ್ಕೆ ಕರೆತರುವ ಲೆಕ್ಕಾಚಾರ ಹಾಕಿದೆ.
ಇಶಾನ್ ಮಿಸ್ಸಾದರೆ ಕನ್ನಡಿಗನೇ ಮುಂಬೈ ಟಾರ್ಗೆಟ್..!
ಮುಂಬೈ ಇಂಡಿಯನ್ಸ್ ಕೋರ್ ಟೀಮ್ ಬಗ್ಗೆ ಹೆಚ್ಚು ಒಲವು ಹೊಂದಿದೆ. ಹೀಗಾಗಿ ಇಶಾನ್ ಕಿಶನ್ರನ್ನ ರೈಟ್ ಟು ಮ್ಯಾಚ್ ಕಾರ್ಡ್ ಅಡಿ ಖರೀದಿಸೋದು ಫಸ್ಟ್ ಅಜೆಂಡಾವಾಗಿದೆ. ಆದ್ರೆ, ಈ ಕಿಶನ್, ಮೆಗಾ ಹರಾಜಿನಲ್ಲಿ ಬಿಗ್ ಅಮೌಂಟ್ಗೆ ಸೇಲ್ ಆಗೋ ಚಾನ್ಸ್ ಹೆಚ್ಚಿದೆ. ಮುಂಬೈ ಪರ್ಸ್ನಲ್ಲಿ ಕೇವಲ 45 ಕೋಟಿ ಮಾತ್ರ ಉಳಿದಿದೆ. ಹೀಗಾಗಿ ಇಶಾನ್ ಖರೀದಿಗೆ ಕನಿಷ್ಠ 15ರಿಂದ 16 ಕೋಟಿ ಹಣ ಬೇಕಾಗುತ್ತೆ. ಹೀಗಾಗಿ ಮೆಗಾ ಹರಾಜಿನಲ್ಲಿ ಕಿಶನ್ ಕೈಗೆಟುಕದಿದ್ರೆ, ಆಗ ಕೆ.ಎಲ್ ರಾಹುಲ್ ಟಾರ್ಗೆಟ್ ಮಾಡುವುದು ಮುಂಬೈ ಇಂಡಿಯನ್ಸ್ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: IND vs NZ; ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಪ್ರಮುಖ 5 ಕಾರಣ ಇಲ್ಲಿವೆ!
ಒಂದು ಕಡೆ ಆರ್ಟಿಎಮ್ ಅಸ್ತ್ರದಿಂದ ಕಿಶನ್ನ ತಂಡಕ್ಕೆ ಕರೆತರುವ ಹಂಬಲದಲ್ಲಿರುವ ಮುಂಬೈ, ಮತ್ತೊಂದು ಕಡೆ ಕನ್ನಡಿಗನ ಮೇಲೂ ಕಣ್ಣಿಟ್ಟಿದೆ. ಆದ್ರೆ, ಈ ಇಬ್ಬರಲ್ಲಿ ಯಾರು ಮುಂಬೈ ಸೇರ್ತಾರೆ ಅನ್ನೋದಕ್ಕೆ ಮೆಗಾ ಹರಾಜಿನಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ