ಮಂಗಳವಾರ ವೋಟ್ ಮಾಡಬೇಕೆಂದು ಯಾರದ್ರು ಹೇಳಿದ್ದಾರಾ?
ಡೊನಾಲ್ಡ್ ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ನೆಕ್ ಟು ನೆಕ್ ಫೈಟ್
USನವರು ಮಂಗಳವಾರವೇ ಮತದಾನ ಮಾಡುವುದರ ಇತಿಹಾಸ?
ಅಮೆರಿಕದ ಚುನಾವಣೆ ಎಂದರೆ ವಿಶ್ವದ ಇತರ ರಾಷ್ಟ್ರಗಳ ಕಿವಿ ಚುರುಕಾಗುತ್ತವೆ. ಈ ಬಾರಿ ಯಾರು ಗೆಲ್ಲಬಹುದು ಎಂದು ನೂರೆಂಟು ಲೆಕ್ಕ ಹಾಕುತ್ತಾರೆ. ಅಲ್ಲಿನ ಮತದಾನ ಪ್ರಭುಗಳು ಕೂಡ ತಮಗೆ ಸೂಕ್ತ ಎನಿಸುವ ಅಭ್ಯರ್ಥಿಯನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ಇದೆಲ್ಲದಿಕ್ಕಿಂತ ಅಮೆರಿಕದ ಪ್ರಜೆಗಳು ಪ್ರತಿ ಚುನಾವಣೆಗೂ ಮಂಗಳವಾರದಂದೇ ವೋಟ್ ಹಾಕುವುದು ಯಾಕೆ?. ಈ ಮಂಗಳವಾರವನ್ನೇ ಆಯ್ಕೆ ಮಾಡಿದರ ಹಿಂದಿನ ಇತಿಹಾಸವೇನು ಎಂಬು ಮಾಹಿತಿ ಇಲ್ಲಿದೆ.
ಅಮೆರಿಕದ ಪ್ರಜೆಗಳು ತಮ್ಮ 47ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಈಗಾಗಲೇ ಮತದಾನ ಆರಂಭ ಮಾಡಿದ್ದಾರೆ. ಇಂದು ಮಂಗಳವಾರ ಆಗಿದ್ದರಿಂದ ಜನರು ಯಾವುದೇ ತೊಡಕಿಗೆ ಒಳಗಾಗದೇ ಮತ ಹಾಕುವುದು ಶುರು ಮಾಡಿದ್ದಾರೆ. ಈಗಾಗಲೇ ಅನೇಕರು ಅಂಚೆ ಮತದಾನ ವ್ಯವಸ್ಥೆ ಮೂಲಕ ಮುಂಚಿತವಾಗಿ ಮತ ಚಲಾಯಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಮಧ್ಯೆ ನೆಕ್ ಟು ನೆಕ್ ಫೈಟ್ ಇದೆ.
ಇದನ್ನೂ ಓದಿ: US Elections; ಇಂದು ಅಮೆರಿಕದಲ್ಲಿ ಮತದಾನ.. ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಫೈಟ್, ಗೆಲ್ಲುವುದು ಯಾರು?
ಅಮೆರಿಕದ ಸಂವಿಧಾನದಲ್ಲಿ ಈ ರೀತಿ ಉಲ್ಲೇಖ
ಪ್ರತಿ 4 ವರ್ಷಗಳಿಗೆ ಒಮ್ಮೆ ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಎಲೆಕ್ಷನ್ ನಡೆಯುತ್ತದೆ. ಆದರೆ ಈ ಚುನಾವಣೆ ದಿನಾಂಕದ ಹಿಂದೆ ಹಾಗೂ ಮಂಗಳವಾರ ಮತದಾನ ಮಾಡುವುದರ ಹಿಂದೆ ಕುತೂಹಲಕಾರಿ ಸಂಗತಿ ಇದೆ. ಇದಕ್ಕೆ ಕಾರಣ ಅಮೆರಿಕದ ಸಂವಿಧಾನದಲ್ಲಿ ಈ ರೀತಿ ಉಲ್ಲೇಖ ಮಾಡಲಾಗಿದೆ. ನವೆಂಬರ್ ಮೊದಲ ವಾರದ ಮಂಗಳವಾರ ದಿನ ಎಲೆಕ್ಷನ್ ನಡೆಯುತ್ತೆ. ಈ ಸಂಪ್ರದಾಯ ಏಕೆ, ಹೇಗೆ ಆರಂಭ ಆಯಿತು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಅಲ್ಲಿನ ಇತಿಹಾಸಕಾರರ ಪ್ರಕಾರ ಇದು ಯುಎಸ್ ರೈತರಿಗೆ ಸಂಬಂಧಿಸಿದ್ದು ಆಗಿದೆ.
1,800ರ ದಶಕದ ಮಧ್ಯೆಭಾಗದವರೆಗೆ, ಚುನಾವಣೆ ದಿನಾಂಕ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿತ್ತು. ಉದಾಹರಣೆಗೆ, 1844ರಲ್ಲಿ, ಅಧ್ಯಕ್ಷೀಯ ಚುನಾವಣೆ ನವೆಂಬರ್ ಆರಂಭ ಮತ್ತು ಡಿಸೆಂಬರ್ ಆರಂಭದ ನಡುವೆ 1 ತಿಂಗಳ ಅವಧಿಯಲ್ಲಿ ನಡೆಯಿತು. ಒಂದೊಂದು ರಾಜ್ಯದಲ್ಲಿ ಒಂದೊಂದು ದಿನ ಮತದಾನ ನಡೆಯುವುದರಿಂದ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರು.
ಈ ದಿನ ಮತದಾನ 180 ವರ್ಷಗಳ ಹಿಂದಿನ ಸಂಪ್ರದಾಯ
ನವೆಂಬರ್ ಮೊದಲ ವಾರದ ಮಂಗಳವಾರ ಮತದಾನ 180 ವರ್ಷಗಳ ಹಿಂದಿನ ಸಂಪ್ರದಾಯವಾಗಿದೆ. ಈ ಹಿಂದೆ, ರಾಜ್ಯಗಳು ನಾಗರಿಕರಿಗೆ ಮತ ಚಲಾಯಿಸಲು 34 ದಿನಗಳ ಅವಧಿ ಹೊಂದಿದ್ದವು. ಡಿಸೆಂಬರ್‌ನಲ್ಲಿ ಮೊದಲ ಬುಧವಾರದ ಒಳಗೆ ವೋಟ್ ಮಾಡಬೇಕಿತ್ತು. ಇದರಿಂದ ಸಮಸ್ಯೆಗಳು ಎದುರಾದವು. ಅಂದರೆ ಮೊದಲೇ ಮತದಾನ ನಡೆಸಿದ ರಾಜ್ಯಗಳು ಹಾಗೂ ನಂತರ ಮತ ಚಲಾಯಿಸಿದ ರಾಜ್ಯಗಳ ಮೇಲೆ ಪ್ರಭಾವ ಬೀರಬಹುದು ಎಂಬ ವಾದ ಶುರುವಾಯಿತು. ಹೀಗಾಗಿ 1845 ರಲ್ಲಿ ಇಡೀ ದೇಶಕ್ಕೆ ಒಂದೇ ಚುನಾವಣಾ ದಿನ ನಿಗದಿಪಡಿಸಲು ಕಾನೂನನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ: IPL 2025; ಮೆಗಾ ಆಕ್ಷನ್ ನಡೆಯುವ ದಿನಾಂಕ, ಸ್ಥಳ ಕನ್ಫರ್ಮ್..?
ನವೆಂಬರ್ ತಿಂಗಳ ಮೊದಲ ಸೋಮವಾರದ ನಂತರ ಬರುವ ಮಂಗಳವಾರ ದಿನವೇ ಮತದಾನ ನಡೆಸಬೇಕು ಎಂದು ಸಂವಿಧಾನದ ಕಾಯ್ದೆಯಲ್ಲಿದೆ. ಅಂದರೆ, ಮಂಗಳವಾರ ನ.2 ಕ್ಕಿಂತ ಹಿಂದಿನದು ಮತ್ತು ನ.8 ರ ನಂತರದ ಮಂಗಳವಾರ ದಿನ ಆಗಿರಲ್ಲ. ಹೀಗಾಗಿ ನವೆಂಬರ್‌ನ ಮೊದಲ ವಾರದ ಮಂಗಳವಾರದಂದು ಪ್ರಜೆಗಳು ಮತದಾನ ಮಾಡುತ್ತಾರೆ.
ಅಮೆರಿಕನ್ನರು ಮಂಗಳವಾರ ಏಕೆ ಮತ ಚಲಾಯಿಸುತ್ತಾರೆ ?
ರೈತರು ಅಥವಾ ಗ್ರಾಮೀಣ ಜನರು ಮತದಾನದ ಸ್ಥಳಗಳಿಂದ ದೂರದಲ್ಲಿ ವಾಸಿಸುತ್ತಿದ್ದರೇ, ಅವರು ವೋಟಿಂಗ್ ಮಾಡಲು ಪ್ರಯಾಣದ ದಿನ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಹೆಚ್ಚಿನ ಅಮೆರಿಕನ್ನರು ಭಾನುವಾರದಂದು ಚರ್ಚ್‌ಗೆ ಭೇಟಿ ನೀಡುವುದರಿಂದ ವಾರಾಂತ್ಯ ಚುನಾವಣೆ ನಡೆಸಲು ಆಗಲ್ಲ. ಅಮೆರಿಕದಲ್ಲಿ ರೈತರಿಗೆ ಬುಧವಾರ ಮಾರುಕಟ್ಟೆ ದಿನ. ಹೀಗಾಗಿ ಮಂಗಳವಾರದಂದೇ ಮತದಾನಕ್ಕೆ ದಿನಾಂಕ ಫಿಕ್ಸ್ ಮಾಡಲಾಯಿತು. ಇದು ಸೋಮವಾರದಂದು ಜನರು ಪ್ರಯಾಣಿಸಿ ನಿಗದಿತ ಸ್ಥಳ ತಲುಪಲು ಅನುಕೂಲ. ಹೀಗಾಗಿ 1845ರಿಂದ ನವೆಂಬರ್‌ನ ಮೊದಲ ವಾರದ ಮಂಗಳವಾರ ದಿನವನ್ನ ಚುನಾವಣೆಯ ಮತದಾನ ದಿನವನ್ನಾಗಿ ಅಮೆರಿಕನ್ನರು ಆಯ್ಕೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ