newsfirstkannada.com

×

ನ್ಯೂಜಿಲೆಂಡ್​ ವಿರುದ್ಧ ಹೀನಾಯ ಸೋಲು; ಬಿಸಿಸಿಐನಿಂದ ಕೆ.ಎಲ್​ ರಾಹುಲ್​ಗೆ ಮಹತ್ವದ ಸೂಚನೆ

Share :

Published November 5, 2024 at 12:11pm

    ನ್ಯೂಜಿಲೆಂಡ್​​ ವಿರುದ್ಧ ಭಾರತ ತಂಡಕ್ಕೆ ಹೀನಾಯ ಸೋಲು

    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸೀರೀಸ್​ ಭಾರತ ಗೆಲ್ಲಲೇಬೇಕು

    ಬಿಸಿಸಿಐನಿಂದ ಕೆ.ಎಲ್​ ರಾಹುಲ್​ಗೆ ಮಹತ್ವದ ಸೂಚನೆ..!

ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಟೆಸ್ಟ್​​ ಪಂದ್ಯದಲ್ಲಿ ನ್ಯೂಜಿಲೆಂಡ್​​ ವಿರುದ್ಧ ಟೀಮ್​ ಇಂಡಿಯಾ 25 ರನ್​ಗಳಿಂದ ಸೋತಿದೆ. ನ್ಯೂಜಿಲೆಂಡ್​ ನೀಡಿದ 147 ರನ್​​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 29.1 ಓವರ್​​ಗಳಲ್ಲಿ ಕೇವಲ 121 ರನ್​​ಗಳಿಗೆ ಆಲೌಟ್​​ ಆಗಿ ಸೋತಿರುವುದು ಭಾರೀ ಮುಖಭಂಗವಾಗಿದೆ.

ಇನ್ನು, ಟೀಮ್​ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್​ ವಿಕೆಟ್​ ಬ್ಯಾಟರ್​​ ರಿಷಬ್​ ಪಂತ್​​. ಬರೋಬ್ಬರಿ 64 ರನ್​ ಸಿಡಿಸಿ ಟೀಮ್​ ಇಂಡಿಯಾ ಪಡೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದ್ರು. ಆದರೆ, ಇವರು ಔಟ್​​ ಆದ ಕಾರಣ ಭಾರತ ಸೋಲಬೇಕಾಯ್ತು. ಭಾರತ ತಂಡದ ಬ್ಯಾಟರ್​​ಗಳು ನ್ಯೂಜಿಲೆಂಡ್​​ ಬೌಲರ್​​​ಗಳ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ರು.

ಬರೋಬ್ಬರಿ 24 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್​​ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್​ವಾಶ್​ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳು ಸೋತಿರುವುದು ಇದೇ ಮೊದಲು.

ಬಿಸಿಸಿಐ ಮಹತ್ವದ ಸಭೆ

ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಅಧ್ಯಕ್ಷ ಅಜಿತ್​ ಅಗರ್ಕರ್​​​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಮುಖ್ಯ ಕೋಚ್​​ ಗೌತಮ್​ ಗಂಭೀರ್​​​ ಸಭೆ ನಡೆಸಿ ​ಸುದೀರ್ಘ ಚರ್ಚೆ ಮಾಡಿದ್ರು. ಹೇಗಾದ್ರೂ ಮಾಡಿ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಂ ಇಂಡಿಯಾ ಅರ್ಹತೆ ಪಡೆಯಬೇಕು ಎಂದು ಚರ್ಚಿಸಿದ್ರು.

4 ಪಂದ್ಯ ಗೆದ್ರೆ ಮಾತ್ರ ಫೈನಲ್​ಗೆ!

ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್​​ ಪಂದ್ಯಗಳ ಸರಣಿ ಆಡಲಿದೆ. ಇದು ಬಾರ್ಡರ್ ಗವಾಸ್ಕರ್ ಟ್ರೋಫಿ ಆಗಿದ್ದು, ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 4 ಪಂದ್ಯ ಗೆಲ್ಲಲೇಬೇಕು.

ಕೆ.ಎಲ್​ ರಾಹುಲ್​ಗೆ ಮಹತ್ವದ ಸೂಚನೆ

ನವೆಂಬರ್ 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್​ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಹೀಗಾಗಿ ಬಿಸಿಸಿಐ ಕನ್ನಡಿಗ ಕೆ.ಎಲ್​ ರಾಹುಲ್​ಗೆ ಮಹತ್ವದ ಸೂಚನೆ ಕೊಟ್ಟಿದೆ. ಆಸೀಸ್ ಸರಣಿಗೆ ಆಟಗಾರರನ್ನು ಸಜ್ಜುಗೊಳಿಸಲು ಸಿದ್ಧತೆ ಆರಂಭಿಸಿರೋ ಬಿಸಿಸಿಐ ಕೆಎಲ್ ರಾಹುಲ್ ಅವರನ್ನು ಮೊದಲೇ ಆಸ್ಟ್ರೇಲಿಯಾಗೆ ಕಳಿಸಲು ಮುಂದಾಗಿದೆ.

ನಾಡಿದ್ದು ಎಂದರೆ ನವೆಂಬರ್ 7ನೇ ತಾರೀಕಿನಿಂದ ಆಸ್ಟ್ರೇಲಿಯಾ-ಎ ಹಾಗೂ ಭಾರತ-ಎ ನಡುವೆ 2ನೇ ಅನಧಿಕೃತ ಟೆಸ್ಟ್ ಆಡಲಿದೆ. ಈ ನಾಲ್ಕು ದಿನಗಳ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡಬೇಕು ಎಂದು ಬಿಸಿಸಿಐ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಜಿಲೆಂಡ್​ ವಿರುದ್ಧ ಹೀನಾಯ ಸೋಲು; ಬಿಸಿಸಿಐನಿಂದ ಕೆ.ಎಲ್​ ರಾಹುಲ್​ಗೆ ಮಹತ್ವದ ಸೂಚನೆ

https://newsfirstlive.com/wp-content/uploads/2024/09/KL_RAHUL_VIRAT.jpg

Load More