ಮರಣ ಘೋಷಿಸಿದ 24 ವರ್ಷದ ಟಿಕ್ಟಾಕ್ ಸ್ಟಾರ್
ನಾನು ಸತ್ತಿದ್ದೇನೆ ಎಂದು ಘೋಷಿಸಿದ ಬೆಲ್ಲಾ ಬ್ರಾಡ್ಪೋರ್ಡ್
ಹನ್ನೊಂದು ನಿಮಿಷಗಳ ವಿಡಿಯೋದಲ್ಲಿ ಏನಿದೆ? ಇಲ್ಲಿದೆ ಮಾಹಿತಿ
ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಸಾವು ನಿಶ್ಚಿತ. ಇಂದು ಜನಿಸಿದವನು ನಾಳೆ ಸಾಯಲೇಬೇಕು. ಆದರೆ ಕೆಲವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ತಿಳಿದಿರುತ್ತದೆ. ಹೀಗಾಗಿ ಭಯವಿಲ್ಲದೆ ಮರಣ ಹೊಂದುತ್ತಾರೆ. ಅದರಂತೆಯೇ ಆಸ್ಟ್ರೇಲಿಯಾ ಮೂಲಕ ಟಿಕ್ಟಾಕ್ ತಾರೆಯಾದ ಬೆಲ್ಲಾ ಬ್ರಾಡ್ಪೋರ್ಡ್ ಸಾವಿನ ಘೋಷಣೆಯ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವಂತೆ ಮಾಡಿದ್ದಾರೆ.
ಬೆಲ್ಲಾ ಬ್ರಾಡ್ಪೋರ್ಡ್ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿದ್ದರು. ಆದರೆ ಅಚ್ಚರಿಯ ವಿಚಾರವೆಂದರೆ ಸಾಯುವುದಕ್ಕೂ ಮುನ್ನ ತನ್ನ ಮರಣ ಘೋಷಣೆಯ ವಿಡಿಯೋ ಮಾಡಿದ್ದು, ವಿಡಿಯೋದ ಪ್ರಕಾರ ಸತ್ತ ಕೆಲ ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದೆ.
24 ವರ್ಷದ ಬೆಲ್ಲಾ ಬ್ರಾಡ್ಪೋರ್ಡ್ ರಾಬ್ಡೋಮಿಯೋಸಾರ್ಕೋಮಾ ಎಂಬ ಅಪರೂಪದ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದಳು. ಅದಕ್ಕೂ ಮುನ್ನ ತನ್ನ ಸಾವಿನ ಕುರಿತ ‘ಗೆಟ್ ರೆಡಿ ವಿತ್ ಮಿ’ ಎಂಬ ಘೋಷಣೆಯ ವಿಡಿಯೋ ಮಾಡಿದ್ದಾಳೆ.
ಇದನ್ನೂ ಓದಿ: VIDEO: ಚಿಕ್ಕಮ್ಮ ರೀಲ್ಸ್ ಮಾಡೋದರಲ್ಲೇ ಬ್ಯುಸಿ.. ಕಣ್ಮೆದುರೇ ಕೊಚ್ಚಿಕೊಂಡು ಹೋದಳು ಪುಟ್ಟ ಬಾಲಕಿ!
ಅಕ್ಟೋಬರ್ 15ರಂದು ರಾಬ್ಡೋಮಿಯೋಸಾರ್ಕೋಮಾ ಕಾಯಿಲೆಗೆ ತುತ್ತಾಗಿ ಬೆಲ್ಲಾ ಕೊನೆಯುಸಿರೆಳೆಯುತ್ತಾಳೆ ಎಂದು ವಿಡಿಯೋದ ಟೈಟಲ್ ಹೇಳಿದೆ. ಬೆಲ್ಲಾ ಸಾವನ್ನಪ್ಪಿದ ಬಳಿಕ ಅಂದರೆ ಅಕ್ಟೋಬರ್ 31ರಂದು ಆಕೆಯ ವಿಡಿಯೋ ಅಪ್ಲೋಡ್ ಆಗಿದೆ.
ಬೆಲ್ಲಾ ಬ್ರಾಡ್ಪೋರ್ಡ್, ಹನ್ನೊಂದು ನಿಮಿಷಗಳ ವಿಡಿಯೋದಲ್ಲಿ ತನ್ನ ನಿಧನದ ಬಗ್ಗೆ ತಾನೇ ಘೋಷಿಸಿದ್ದಾಳೆ. ಜೊತೆಗೆ ಟಿಕ್ ಟಾಕ್ ಪ್ರಯಾಣದ ಬಗ್ಗೆ ಮಾತನಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಮತ್ತು ಫಾಲೋವರ್ಸ್ಗಳಿಂದ ಸಿಕ್ಕಿದ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಬಗ್ಗೆ ಬಿಗ್ಬಾಸ್ ಮಾಜಿ ಸ್ಪರ್ಧಿ ಕಣ್ಣೀರು.. ವಿಡಿಯೋದಲ್ಲಿ ಅಳುತ್ತಲೇ ನಟಿ ಹೇಳಿದ್ದು ಏನು?
ವಿಡಿಯೋದಲ್ಲಿ ‘‘ನನಗೆ ಟರ್ಮಿನಲ್ ಕ್ಯಾನ್ಸರ್ ಇದೆ. ನನ್ನ ಜೀವನ ಕೊನೆಗೊಂಡಿದೆ. ನಾನು ನಿಧನಹೊಂದಿದ್ದೇನೆ. ಹಾಗಾಗಿ ನಾನು ‘ಗೆಡ್ ರೆಡಿ ವಿತ್ ಮಿ’ ಎಂದು ಹೇಳಲು ಬಯಸುತ್ತೇನೆ. ನಾನು ನನ್ನ ಫ್ಯಾಷನನ್ನು ಪ್ರೀತಿಸುತ್ತೇನೆ. ನನ್ನನ್ನು ಫಾಲೋ ಮಾಡಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ವಿಡಿಯೋಗಳನ್ನು ಮತ್ತೆ ಮತ್ತೆ ನೋಡುತ್ತಿರಿ’’ ಎಂದು ಹೇಳಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ