newsfirstkannada.com

×

BBK11: ಹನುಮಂತ ಉರುಳಿಸಿದ ದಾಳಕ್ಕೆ ಈ ವಾರ ಬಲಿಷ್ಠ ಸ್ಪರ್ಧಿಗಳೇ ನಾಮಿನೇಟ್‌; ಯಾರವರು?

Share :

Published November 5, 2024 at 4:22pm

    ಚೈತ್ರಾ, ಧರ್ಮ, ಅನುಷಾ ಹಾಗೂ ಭವ್ಯಾ ಆಚೆ ಬರೋದ್ಯಾರು?

    ಬಿಗ್​ಬಾಸ್​ ಮನೆಯಿಂದ ಆಚೆ ಬಂದ 4 ಸ್ಪರ್ಧಿಗಳು ಯಾರು?

    ಗೌತಮಿ, ಮೋಕ್ಷಿತಾ, ಉಗ್ರಂ ಮಂಜು, ಗೋಲ್ಡ್​ ಸೇಫ್​ ಆಗಿದ್ದೇಗೆ?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್​ಬಾಸ್. ಸೀಸನ್​ 11 ಶುರುವಾಗಿ ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಬಿಗ್​ಬಾಸ್​ ಮನೆಯಿಂದ 4 ಸ್ಪರ್ಧಿಗಳು ಆಚೆ ಬಂದಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್​​ನಿಂದ ನರಳಾಟ; ನೋವು ತಾಳಲಾರದೆ ವಿಡಿಯೋ ಮಾಡಿ ಸತ್ತಿದ್ದೇನೆ ಎಂದ ಟಿಕ್​ಟಾಕ್​​ ಸ್ಟಾರ್​​

ಮೊದಲನೇ ವಾರದಲ್ಲಿ ಯಮುನಾ ಶ್ರೀನಿಧಿ ಆಚೆ ಬಂದಿದ್ದರು. ಇದಾದ ಬಳಿಕ ಮನೆಯಲ್ಲಿ ಗಲಾಟೆ ಮಾಡಿಕೊಂಡ ಕಾರಣಕ್ಕೆ ಲಾಯರ್ ಜಗದೀಶ್​ ಹಾಗೂ ರಂಜಿತ್ ಆಚೆ ಬಂದಿದ್ದರು. ಇನ್ನೂ ಕಳೆದ ಎಪಿಸೋಡ್​ನಲ್ಲಿ ಮಾನಸ ತುಕಾಲಿ ಎಲಿಮಿನೇಟ್​ ಆಗಿದ್ದರು.​ ಈ ಪ್ರಕ್ರಿಯೆ ಮೂಗಿದ ಕೂಡಲೇ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಐದು ಬಲಿಷ್ಠ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಹೌದು, ಈ ಬಾರಿ ನಾಮಿನೇಷನ್​ ಪ್ರಕ್ರಿಯೆಗೆ ಬಿಗ್‌ಬಾಸ್‌ ಲೋಡೋ ಆಟ ಕೊಟ್ಟಿದ್ದರು. ಹೀಗಾಗಿ 4 ಟೀಂಗಳನ್ನು ಮಾಡಿ, ನಾಲ್ಕು ನಾಯಕರನ್ನು ಮಾಡಿದ್ದರು. ಶಿಶಿರ್‌‌ ಟೀಂನಲ್ಲಿ ಧನರಾಜ್‌, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್‌ ಮತ್ತು ಅನುಷಾ ಇದ್ದರು. ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ ಕೀರ್ತಿ ಇದ್ದರು. ಮಂಜು ಅವರ ಟೀಂನಲ್ಲಿ ಭವ್ಯಾ, ಸುರೇಶ್‌ ಇದ್ದರು. ಮನೆಯ ಕ್ಯಾಪ್ಟನ್‌ ಹನುಮಂತು ದಾಳವನ್ನು ಉರುಳಿಸಿದ್ದರು.

ದಾಳ ಉರಳಿಸುವ ಗೇಮ್‌ನಲ್ಲಿ ಮೊದಲಿಗೆ ಚೈತ್ರಾ ಅವರ ಟೀಂ ಎದುರಾಳಿ ತಂಡದ ಒಬ್ಬರನ್ನು ಉಳಿಸಿಬೇಕಿತ್ತು. ಅವರು ಗೌತಮಿ ಅವರನ್ನು ಉಳಿಸಿದರು. ಬಳಿಕ ಮಂಜು ಅವರ ಟೀಂನಿಂದ ಭವ್ಯಾ. ಚೈತ್ರಾ ಟೀಂನಿಂದ ಧರ್ಮ ಅವರು ನಾಮಿನೇಟ್‌ ಆದರು. ಬಳಿಕ ಗೌತಮಿ ಅವರ ಟೀಂ ನಿಂದ ತ್ರಿವಿಕ್ರಮ್‌ ಮತ್ತು ಅನುಷಾ ಅವರು ಒಮ್ಮತದ ನಿರ್ಧಾರದ ಮೇಲೆ ಮೋಕ್ಷಿತಾ ಅವರನ್ನು ಸೇವ್‌ ಮಾಡಿದರು. ಬಳಿಕ ಕೊನೆಯಲ್ಲಿ ದಾಳ ಉರುಳಿಸಿ ಉಗ್ರಂ ಮಂಜು, ಸುರೇಶ್‌, ಐಶ್ವರ್ಯಾ, ಶಿಶಿರ್‌ ಅವರು ಸೇಫ್‌ ಆದರು.

ಇದನ್ನೂ ಓದಿ: BBK11: ಗೌತಮಿ, ಮೋಕ್ಷಿತಾ, ಮಂಜು ಈಗ ದೂರ, ದೂರ.. ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಿಂದ ಸ್ನೇಹಿತರಲ್ಲಿ ಬಿರುಕು; ಆಗಿದ್ದೇನು?

ಆದರೆ ಕೊನೆಗೆ ಚೈತ್ರಾ, ಧರ್ಮ, ಅನುಷಾ, ಭವ್ಯಾ ಹಾಗೂ ತ್ರಿವಿಕ್ರಮ್‌ ಉಳಿದಿದ್ದರು. ಹೀಗಾಗಿ ಬಿಗ್​ಬಾಸ್​ ಈ ವಾರ ಬಿಗ್​ಬಾಸ್​ ಮನೆಯಿಂದ ನಾಮಿನೇಟ್​ ಆದ ಸ್ಪರ್ಧಿಗಳು ಯಾರೆಂದು ಘೋಷಣೆ ಮಾಡಿದ್ದಾರೆ. ಅಂದ್ರೆ ಈ ವಾರ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರು ಬಿಗ್​ಬಾಸ್​ ಮನೆಯಿಂದ ಹೊರಹೋಗಲು ಖಚಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಹನುಮಂತ ಉರುಳಿಸಿದ ದಾಳಕ್ಕೆ ಈ ವಾರ ಬಲಿಷ್ಠ ಸ್ಪರ್ಧಿಗಳೇ ನಾಮಿನೇಟ್‌; ಯಾರವರು?

https://newsfirstlive.com/wp-content/uploads/2024/11/bbk111.jpg

Load More