ತಮಾಷೆ ಮಾಡುತ್ತಲೇ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಾನಸ
ವೀಕ್ಷಕರು ಅತಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದ ಸ್ಪರ್ಧಿ ಮನೆಯಿಂದ ಆಚೆಗೆ
ಸೋಷಿಯಲ್ ಮೀಡಿಯಾದಲ್ಲಿ ಇಷ್ಟೋಂದು ಫೇಮಸ್ ಆಗೋದಕ್ಕೆ ಮಾನಸ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಐದನೇ ವಾರಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ವೀಕ್ಷಕರು ಅತಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
ಇದನ್ನೂ ಓದಿ: ಸಂಧ್ಯಾ ಸಾವಿನ ಕೇಸ್ಗೆ ಹೊಸ ಟ್ವಿಸ್ಟ್.. CCTV ಸಿಕ್ಕಿಲ್ಲ, ಡ್ಯಾಶ್ ಬೋರ್ಡ್ ಕ್ಯಾಮೆರಾನೂ ಇಲ್ವಾ? ಪತಿ ಭಾವುಕ!
ಹೌದು, ಬಿಗ್ಬಾಸ್ ಮನೆಯಿಂದ ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಮಾನಸ 4ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ತಮಾಷೆ ಮಾಡುತ್ತಲೇ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಾನಸ 4ನೇ ಸ್ಪರ್ಧಿಯಾಗಿ ಆಚೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಪಕ್ಕಾ ಹಳ್ಳಿ ಹುಡುಗಿ. ಬಿಗ್ಬಾಸ್ ಮನೆಯಲ್ಲೂ ಹಳ್ಳಿ ಭಾಷೆಯಲ್ಲೇ ಮಾತಾಡುತ್ತಿದ್ದರು. ಹೀಗಾಗಿ ಸಾಕಷ್ಟು ವೀಕ್ಷಕರಲ್ಲಿ ಕೆಲವರಿಗೆ ಮಾನಸ ಮಾತನಾಡುವ ಶೈಲಿ ಮತ್ತು ಡ್ರೆಸ್ಸಿಂಗ್ ಬಗ್ಗೆ ಕೊಂಕು ಮಾತಾಡಿದ್ದರು. ಅಲ್ಲದೇ ನನ್ನ ಮಾತಿನಿಂದ ಬೇಸರ ಆಗಿದ್ದರೇ ಕ್ಷಮಿಸಿ ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಹೊರಗಡೆ ಟ್ರೋಲಿಗರು ಅದನ್ನು ಫೋಕಸ್ ಮಾಡಿ ಅವರನ್ನು ಕೇಳ ಮಟ್ಟದಲ್ಲಿ ಟ್ರೋಲ್ ಮಾಡಿದ್ದರು.
ಬೇರೆ ಬೇರೆ ಪ್ರಾಣಿಗಳ ಪಕ್ಕ ಮಾನಸ ಅವರ ಫೋಟೋವನ್ನು ಹಾಕಿ ಟ್ರೋಲ್ ಮಾಡಿದ್ದರು. ಆ ಟ್ರೋಲ್ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದ್ದವು. ಇದೇ ವಿಚಾರವಾಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದ ಮೇಲೆ ಬೇಸರ ಹೊರ ಹಾಕಿದ್ದಾರೆ.
ಇನ್ನೂ ಈ ಬಗ್ಗೆ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಮಾತಾಡಿದ ಅವರು, ಒಂದು ಕಡೆ ಹಂದಿ ಫೋಟೋ ಹಾಕಿ, ಮತ್ತೊಂದು ಕಡೆ ನನ್ನ ಫೋಟೋ ಹಾಕಿದ್ದರು. ನನಗೆ ಬೇಸರ ಆಗಿಲ್ಲ. ಆದ್ರೆ ನನಗಾಗಿ ಟೈಮ್ ಕೊಟ್ಟು ಫೋಟೋ ಹಾಕಿದ್ದಾರೆ. ಮೊದ ಮೊದಲು ನನಗೆ ಫೋಟೋ ನೋಡಿ ಜಿಗುಪ್ಸೆ ಬಂತು. ಅದನ್ನೂ ನೋಡಿ ಅಳ್ತಾ ಇದ್ದೆ. ಆಮೇಲೆ ಸಂತು ನನಗೆ ಸಮಧಾನ ಮಾಡಿದ್ದರು. ಆದರೆ ಕೆಲವರು ತುಂಬಾ ಅಸಹ್ಯವಾಗಿ ಟ್ರೋಲ್ ಮಾಡಿದವರ ಮನೆಯವರು ಸುಂದರವಾಗಿ ಇದ್ದಾರಾ? ಪ್ರಪಂಚದಲ್ಲಿ ಚೆನ್ನಾಗಿ ಇಲ್ಲದೇ ಇರೋರು ಕೂಡ ಇರ್ತಾರೆ ಅಲ್ವಾ ಅದಕ್ಕಾಗಿ ನಾನು ಅತ್ತಿದ್ದೆ.
ಇದೇ ವಿಚಾರದ ಬಗ್ಗೆ ಮಾನಸ ಪತಿ, ನನ್ನ ಹೆಂಡತಿ ಸೋಷಿಯಲ್ ಮೀಡಿಯಾದಲ್ಲಿ ಇಷ್ಟೋಂದು ಫೇಮಸ್ ಆಗೋದಕ್ಕೆ ಟ್ರೋಲರ್ಸ್ಗಳೇ ಕಾರಣ. ಅವರು ಆ ತರ ಮಾಡಿದ್ದರಿಂದ ನಾವು ಎಚ್ಚರವಾಗಿ ಇರಲು ಸಾಧ್ಯ. ನಮಗೆ ಯಾರಾದರೂ ದೇವರು ಅಂತ ಇದ್ರೆ ಅದು ಟ್ರೋಲರ್ಸ್ ಹಾಗೂ ಸೋಷಿಯಲ್ ಮೀಡಿಯಾ ಅಂತ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ