newsfirstkannada.com

×

ಟೀಮ್​ ಇಂಡಿಯಾದಿಂದ ರೋಹಿತ್​ ಔಟ್​​; ಆಸ್ಟ್ರೇಲಿಯಾ ಟೆಸ್ಟ್​​ ಸೀರೀಸ್​ಗೆ ಕೊಹ್ಲಿ ಕ್ಯಾಪ್ಟನ್​​?

Share :

Published November 5, 2024 at 6:22pm

    ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ

    ಸರಣಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ

    ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ

ಇದೇ ತಿಂಗಳು ನವೆಂಬರ್ 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್​ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಎಷ್ಟೇ ಕಷ್ಟ ಆದ್ರೂ ಪರ್ವಾಗಿಲ್ಲ ಆಸೀಸ್ ಸರಣಿ ಗೆಲ್ಲಲೇಬೇಕು ಎಂದು ಸಜ್ಜಾಗಿರೋ ಬಿಸಿಸಿಐ ಟೀಮ್​ ಇಂಡಿಯಾ ಆಟಗಾರರನ್ನು ರೆಡಿ ಮಾಡುತ್ತಿದೆ.

ಸುಮಾರು 24 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್​​ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್​ವಾಶ್​ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳು ಸೋತಿರುವುದು ಇದೇ ಮೊದಲು.

ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಅಧ್ಯಕ್ಷ ಅಜಿತ್​ ಅಗರ್ಕರ್​​​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಮುಖ್ಯ ಕೋಚ್​​ ಗೌತಮ್​ ಗಂಭೀರ್​​​ ಸಭೆ ನಡೆಸಿ ​ಸುದೀರ್ಘ ಚರ್ಚೆ ಮಾಡಿದ್ರು. ಹೇಗಾದ್ರೂ ಮಾಡಿ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಂ ಇಂಡಿಯಾ ಅರ್ಹತೆ ಪಡೆಯಬೇಕು ಎಂದು ಚರ್ಚಿಸಿದ್ರು. ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್​​ ಪಂದ್ಯಗಳ ಸರಣಿ ಗೆಲ್ಲಲೇಬೇಕು. ಅದರಲ್ಲೂ 4 ಪಂದ್ಯ ಗೆದ್ರೆ ಮಾತ್ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶ ಸಿಗಲಿದೆ. ಈ ಹೊತ್ತಲ್ಲೇ ಟೀಮ್​ ಇಂಡಿಯಾಗೆ ಶಾಕಿಂಗ್​ ನ್ಯೂಸ್​ ಒಂದಿದೆ.

ತಂಡದಿಂದ ರೋಹಿತ್​ ಶರ್ಮಾ ಔಟ್​​

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಭಾರೀ ಬದಲಾವಣೆ ಆಗಲಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಟೆಸ್ಟ್​ಗೆ ತಮ್ಮ ಅಲಭ್ಯತೆ ಬಗ್ಗೆ ಹಿಟ್​ಮ್ಯಾನ್ ಹಿಂಟ್​ ನೀಡಿದ್ದಾರೆ.

ರೋಹಿತ್​ ಜಾಗಕ್ಕೆ ಯಾರು?

ಭಾರತದ ಆಸ್ಟ್ರೇಲಿಯಾ ಪ್ರವಾಸ ನವೆಂಬರ್ 22 ರಿಂದ ಪರ್ತ್​ನಲ್ಲಿ ಶುರುವಾಗಲಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಟೆಸ್ಟ್​ನಲ್ಲಿ ಆಡುವುದಿಲ್ಲ ಎನ್ನಲಾಗುತ್ತಿದೆ. ಯಶಸ್ವಿ ಜೈಸ್ವಾಲ್ ಬದಲಿಗೆ ಅಭಿಮನ್ಯು ಈಶ್ವರನ್ ಇನ್ನಿಂಗ್ಸ್ ಆರಂಭಿಸಬಹುದು. ಶುಭ್ಮನ್​​ ಗಿಲ್​ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ತಿಳಿದು ಬಂದಿದೆ. ರೋಹಿತ್​​ ಅಲಭ್ಯತೆಯಲ್ಲಿ ಟೀಮ್​ ಇಂಡಿಯಾವನ್ನು ಬುಮ್ರಾ ಅಥವಾ ಕೊಹ್ಲಿ ಮುನ್ನಡೆಸಬಹುದು ಎಂದು ಹೇಳಲಾಗುತ್ತಿದೆ.

ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾ ಹೀಗಿದೆ..!

ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ಸಿ), ಆಕಾಶ್ ದೀಪ್.

ಇದನ್ನೂ ಓದಿ: ಆಸ್ಟ್ರೇಲಿಯಾ ಟೆಸ್ಟ್​ ಸರಣಿ; ಟೀಮ್​ ಇಂಡಿಯಾದಿಂದ ಸರ್ಫರಾಜ್​ ಔಟ್​​; ಕೊಹ್ಲಿ ಆಪ್ತನಿಗೆ ಸ್ಥಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾದಿಂದ ರೋಹಿತ್​ ಔಟ್​​; ಆಸ್ಟ್ರೇಲಿಯಾ ಟೆಸ್ಟ್​​ ಸೀರೀಸ್​ಗೆ ಕೊಹ್ಲಿ ಕ್ಯಾಪ್ಟನ್​​?

https://newsfirstlive.com/wp-content/uploads/2024/11/Kohli_Rohi-Sharma.jpg

Load More