newsfirstkannada.com

×

ಅಪಘಾತ ನಡೆದು 3 ದಿನ ಕಳೆದರೂ ಸ್ಥಳದಿಂದ ಕದಲದ ಹರಕೆ ಕೋಳಿ; ಗ್ರಾಮಸ್ಥರು ಫುಲ್​ ಶಾಕ್

Share :

Published November 5, 2024 at 6:57pm

Update November 5, 2024 at 7:05pm

    ಘಟನೆಯಲ್ಲಿ ನಜ್ಜು ಗುಜ್ಜಾದ ಸ್ಕೂಟಿ ಮೇಲೆಯೇ ಕಾದು ಕುಳಿತುಕೊಂಡ ಕೋಳಿ

    ಕೋಡಿಂಬಾಳ ಸಮೀಪದ ಪುಳಿಕುಕ್ಕು ಮುರಚೆಡವು ಬಳಿ ನಡೆದ ಅಚ್ಚರಿ ಘಟನೆ

    ಎಡಮಂಗಲದ ದೇವಸ್ಯ ನಿವಾಸಿ ಸೀತಾರಾಮ ಗೌಡ ಅಪಘಾತದಲ್ಲಿ ಸಾವು

ಮಂಗಳೂರು: ಮೂರು ದಿನಗಳ ಹಿಂದೆ ಕೋಡಿಂಬಾಳ ಸಮೀಪದ ಪುಳಿಕುಕ್ಕು ಮುರಚೆಡವು ಬಳಿ ಮರ ಬಿದ್ದು ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ. ವ್ಯಕ್ತಿ ಸಾವನ್ನಪ್ಪಿ ಮೂರು ದಿನ ಕಳೆದರೂ ಹರಕೆಯ ಕೋಳಿ ಸ್ಥಳ ಬಿಟ್ಟು ಕದಲಿಲ್ಲ. ಈ ಕೋಳಿಯನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್​​ನಿಂದ ನರಳಾಟ; ನೋವು ತಾಳಲಾರದೆ ವಿಡಿಯೋ ಮಾಡಿ ಸತ್ತಿದ್ದೇನೆ ಎಂದ ಟಿಕ್​ಟಾಕ್​​ ಸ್ಟಾರ್​​

ಹೌದು, ದೀಪಾವಳಿ ಹಬ್ಬದ ಕೊನೆ ದಿನ ದೇವರಿಗೆ ಹರಕೆ ನೀಡಲು ಸೀತಾರಾಮ ಗೌಡ ಕೋಳಿ ತರಲು ಹೋಗಿದ್ದರು. ಆದರೆ ಮನೆಗೆ ಹಿಂದಿರುಗುವಾಗ ರಸ್ತೆ ಬದಿಯಲ್ಲಿ ದೂಪದ ಮರ ಬಿದ್ದು ದೇವಸ್ಯ ನಿವಾಸಿ ಸೀತಾರಾಮ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಈ ಘಟನೆಯಲ್ಲಿ ಬದುಕುಳಿದಿದ್ದು ಮಾತ್ರ ಕೋಳಿ.

ಅಚ್ಚರಿ ಏನೆಂದರೆ ಘಟನೆ ನಡೆದ ದಿನ ಕೋಳಿ ಕಾಲಿಗೆ ಕಟ್ಟಿದ್ದ ಹಗ್ಗವನ್ನು ಗ್ರಾಮಸ್ಥರು ಬಿಚ್ಚಿದ್ದರು. ಆದರೆ ಸೀತಾರಾಮ ಗೌಡ ಮೃತಪಟ್ಟು ಮೂರು ದಿನ ಕಳೆದರೂ ಕೋಳಿ ಸ್ಥಳದಿಂದ ಎಲ್ಲೂ ಹೋಗಿಲ್ಲ. ಈಗ ಮತ್ತೆ ಘಟನೆ ನಡೆದ ಸ್ಥಳದಲ್ಲೇ ಓಡಾಡುತ್ತಿದೆ. ಇದನ್ನೇ ನೋಡಿದ ಗ್ರಾಮಸ್ಥರು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪಘಾತ ನಡೆದು 3 ದಿನ ಕಳೆದರೂ ಸ್ಥಳದಿಂದ ಕದಲದ ಹರಕೆ ಕೋಳಿ; ಗ್ರಾಮಸ್ಥರು ಫುಲ್​ ಶಾಕ್

https://newsfirstlive.com/wp-content/uploads/2024/11/mangaluru-1.jpg

Load More