ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾಗೆ ಸೋಲು
ಒಂದರ ಮೇಲೆ ಒಂದರಂತೆ ಸರಣಿ ಸೋತ ಟೀಮ್ ಇಂಡಿಯಾ!
ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ಗಂಭೀರ್ ಔಟ್?
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆದ ದಿನದಿಂದಲೂ ಭಾರೀ ಸುದ್ದಿಯಲ್ಲೇ ಇದ್ದಾರೆ. ಹಲವು ಕಂಡೀಷನ್ ಹಾಕಿ ಕೋಚ್ ಆಗಿದ್ದ ಗಂಭೀರ್ ಇಡೀ ಕೋಚಿಂಗ್ ಸ್ಟ್ಯಾಫ್ ಅನ್ನೇ ಬದಲಿಸಿದ್ರು. ಆದರೀಗ, ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಸರಣಿ ಸೋಲುತ್ತಿದ್ದು, ಗಂಭೀರ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ಆಯ್ಕೆಯಾಗಿ ಇನ್ನೂ 4 ತಿಂಗಳು. ಇವ್ರು ಕೋಚ್ ಆದ 4 ತಿಂಗಳಲ್ಲೇ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆಲುವು ಹೊರತುಪಡಿಸಿ ಮತ್ತೆಲ್ಲಾ ಸೀರೀಸ್ನಲ್ಲೂ ಬಹುತೇಕ ಸೋಲಾಗಿದೆ.
ಬರೋಬ್ಬರಿ 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ಸರಣಿ ಸೋತಿತ್ತು. ಇದಾದ ಬೆನ್ನಲ್ಲೇ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3 ಪಂದ್ಯ ಸೋತಿದೆ.
ಸುಮಾರು 24 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್ವಾಶ್ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಸೋತಿರುವುದು ಇದೇ ಮೊದಲು. ಹೀಗಾಗಿ ಗಂಭೀರ್ ವಿರುದ್ಧ ಬಿಸಿಸಿಐ ಕಠಿಣಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ತಮಗೆ ಬೇಕಾದ ಆಟಗಾರರಿ ಮಣೆ
ಬಿಸಿಸಿಐ ಹಲವು ನಿಯಮಗಳನ್ನು ಗಾಳಿಗೆ ತೂರಿ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ಮಾಡಿತು. ತಂಡದ ಆಯ್ಕೆ ಸಭೆಗಳಲ್ಲಿ ಮುಖ್ಯ ಕೋಚ್ ಭಾಗಿಯಾಗಬಾರದು. ಅದಕ್ಕೂ ಬಿಸಿಸಿಐ ಗಂಭೀರ್ ಅವರಿಗೆ ಅವಕಾಶ ನೀಡಿತು. ಹಾಗಾಗಿ ಎಲ್ಲಾ ಸರಣಿಗೂ ತಮಗೆ ಬೇಕಾದ ಆಟಗಾರರನೇ ಆಯ್ಕೆ ಮಾಡಿಕೊಂಡರು. ಇದುವೇ ಗಂಭೀರ್ಗೆ ಮುಳುವಾಗುವ ಸಾಧ್ಯತೆ ಇದೆ. ಕಾರಣ ಅವರು ಆಯ್ಕೆ ಮಾಡಿದ ಆಟಗಾರರು ಯಾರು ಉತ್ತಮ ಪ್ರದರ್ಶನ ನೀಡಲಿಲ್ಲ.
ಕೋಚ್ ಸ್ಥಾನದಿಂದ ಗಂಭೀರ್ಗೆ ಕೊಕ್
ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲು ಕಂಡ ಕಾರಣ ಈಗಾಗಲೇ ಗಂಭೀರ್ ಅವರಿಗೆ ನೀಡಲಾಗಿದ್ದ ಹಲವು ಅಧಿಕಾರಿಗಳನ್ನು ಕಸಿದುಕೊಳ್ಳಲಾಗಿದೆ. ವಿಶ್ವಟೆಸ್ಟ್ ಚಾಂಪಿಯನ್ಶೀಪ್ ಫೈನಲ್ಗೆ ಹೋಗಲು ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಗೆಲ್ಲಲೇಬೇಕು. ಒಂದು ವೇಳೆ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತರೆ ಕೋಚ್ ಸ್ಥಾನದಿಂದ ಗಂಭೀರ್ ಔಟ್ ಆಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ರೋಹಿತ್ ಔಟ್; ಆಸ್ಟ್ರೇಲಿಯಾ ಟೆಸ್ಟ್ ಸೀರೀಸ್ಗೆ ಕೊಹ್ಲಿ ಕ್ಯಾಪ್ಟನ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ