/newsfirstlive-kannada/media/media_files/2025/11/02/renuka-case-2025-11-02-21-30-37.jpg)
‘ಪ್ರೀತಿ’ ಎಲ್ಲಿ ಯಾವಾಗ ಯಾರ್​ ಮೇಲೆ ಹೇಗೆ ಹುಟ್ಟುತ್ತೆ ಅಂತ ಗೊತ್ತಾಗಲ್ಲ. ಅದಕ್ಕೆ ಹೇಳ್ತಾರೆ ಪ್ರೀತಿಗೆ ಕಣ್ಣಿಲ್ಲ ಅಂತ.. ಅದು ನಿಜ ಬಿಡಿ.. ಆದ್ರೆ ಪ್ರೀತಿಸುವವರು ಕರುಡಾಗ್ಬಾರದು ನೋಡಿ.. ಈ ಕಥೆಯಲ್ಲಿ ಪ್ರೀತಿ ಹಿಂದೆ ಹೋದವಳು ಹೆಣವಾಗಿದ್ದಾಳೆ.. ಮದುವೆಯಾಗೋಣ ಅಂದ್ರೆ ಒಂದಲ್ಲ ಎರಡಲ್ಲ 8 ಬಾರಿ ಚುಚ್ಚೇ ಕೊಂದು ಬಿಟ್ಟಿದ್ದಾನೆ..
ಪ್ರೀತಿಗೆ ಕಣ್ಣಿಲ್ಲ.. ಪ್ರೀತ್ಸೋರಿಗೆ ಕಣ್ಣು ಬೇಕಿಲ್ಲ.. ಅನ್ನುವಂತೆ ನಲವತ್ತರ ಲವ್​ ಸ್ಟೋರಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಇತ್ತ ಮಹಿಳೆಯ ಜೀವ ಹೋದ್ರೆ ಅಂಕಲ್​ ಜೈಲು ಮೆಟ್ಟಿಲೇರಿದ್ದಾನೆ. ವಯಸ್ಸು 40.. ಬೆಂಗಳೂರಿನ ಪಿಳ್ಳಣ್ಣ ಗಾರ್ಡನ್ ನಿವಾಸಿ.. ಕೊಲೆಗಾರ ಪ್ರೇಮಿ ಹೆಸ್ರು ಕುಟ್ಟಿ.. ವಯಸ್ಸು 43 ಕೆ.ಜಿ ಹಳ್ಳಿ ನಿವಾಸಿ..
ಅಂಕಲ್..​ ಆಂಟಿ ಪ್ರೀತಿ!
ಅಂದಹಾಗೇ ಇಬ್ರಿಗೂ ಮೊದಲೇ ಮದುವೆಯಾಗಿದೆ.. ಪ್ರೇಮಿ ಕುಟ್ಟಿ ಸಂಸರಾಸ್ಥನಾಗಿದ್ರೆ, ಕೊಲೆಯಾದ ಪ್ರೇಯಸಿ ರೇಣುಕಾಗೆ ಡಿವೋರ್ಸ್​ ಆಗಿದೆ.. ಇಬ್ರು ಬಹುತೇಕ ಒಂದೇ ಏರಿಯಾ ಆಗಿದ್ದರಿಂದ ಪರಿಚಯವಾಗಿತ್ತು.. ಫೈನಾನ್ಸ್ ಕೆಲಸ ಮಾಡಿಕೊಂಡಿದ್ದ ಕುಟ್ಟಿ, ಆಗಾಗ ರೇಣಕಾಳನ್ನ ಭೇಟಿ ಮಾಡ್ತಾ ಹತ್ತಿರವಾಗಿತ್ತು. ಇದೇ ಸಲುಗೆ ಆಮೇಲೆ ಪ್ರೀತಿಯಾಗಿದ್ದು, ನಂತರ ಜೋಡಿ ದೈಹಿಕವಾಗಿ ಸಂಪರ್ಕ ಹೊಂದಿದ್ರು ಎನ್ನಲಾಗಿದೆ.
ಇದನ್ನೂ ಓದಿ: ‘ಹೈಕಮಾಂಡ್ ಆಗು ಅಂದರೆ..’ ಉಪಮುಖ್ಯಮಂತ್ರಿ ಆಗುವ ಕನಸಿನ ಬಗ್ಗೆ ಜಮೀರ್ ಸ್ಫೋಟಕ ಹೇಳಿಕೆ
ದಿನ ಕಳೆದಂತೆ ರೇಣುಕಾ ಎಷ್ಟು ದಿನಾ ಹೀಗೇ ಇರೋದು ಟೈಮ್​ ಪಾಸ್​ ಪ್ರೀತಿ ಎಲ್ಲಾ ಬೇಡ ಮದುವೆಯಾಗೋಣ. ಹೀಗೆ ಕದ್ದು ಮುಚ್ಚಿ ಓಡಾಡೋದು ಬೇಡ ಎಂದಿದ್ಲಂತೆ.. ಆದ್ರೆ ಪ್ರೇಮಿ ಕುಟ್ಟಿ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ನಂತೆ.. ರೇಣುಕಾ ಪದೇ ಪದೇ ಲವ್​ ಬೇಡ ಮದ್ವೆ ಆಗೋಣ ಹೇಳ್ತಿದ್ದಕ್ಕೆ ಸಿಟ್ಟಿಗೆದಿದ್ದ.. ಅದ್ರಂತೆ ಅಕ್ಟೋಬರ್​ 31 ಶುಕ್ರವಾರದಂದು, ರೇಣುಕಾ ಕೆಲ್ಸ ಮುಗಿಸಿ ಮನೆಗೆ ಬರ್ತಿದ್ದಾಗ, ನಿನ್ನ ಬಳಿ ಮಾತನಾಡಬೇಕು ಅಂತೇಳಿ ಶುಕ್ರವಾರ ಪಿಳ್ಳಣ್ಣ ಗಾರ್ಡನಾ ಬಳಿಯ ಸರ್ಕಾರಿ ಶಾಲೆಯ ಬಳಿಗೆ ಕರೆದೋಯ್ದಿದ್ದ. ಬಳಿಕ ಇದೇ ವಿಚಾರವಾಗಿ ಇಬ್ರ ಮಧ್ಯೆ ಜಗಳ ಆಗಿದ್ದು, ಸಾರ್ವಜನಿಕವಾಗಿ ರೇಣುಕಾಳ ಮೇಲೆ ಹಲ್ಲೆ ನಡೆಸಿ, ಏಳೆಂಟು ಬಾರಿ ಇರಿದು ಕೊಂದೇ ಬಿಟ್ಟಿದ್ದಾನೆ. ಬಳಿಕ ಕೊಲೆ ಆರೋಪಿ ಕುಟ್ಟಿ ತಕ್ಷಣ ಅಲ್ಲಿಂದ ಎಸ್ಕೇಪ್ ಆಗಿದ್ದ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿದ್ದ ರೇಣುಕಾಳನ್ನ ಕೂಡಲೇ ರೇಣುಕಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ.. ಇತ್ತ ಮನೆ ಮಗಳನ್ನ ಕಳೆದುಕೊಂಡ ಕುಟುಂಬ, ರೇಣುಕಾ ಸಾವಿಗೆ ಕುಟ್ಟಿಯೇ ಕಾರಣ.. ಆತನಿಗೆ ಶಿಕ್ಷೆ ಆಗ್ಬೇಕು ನಮಗೆ ನ್ಯಾಯ ಬೇಕು ಅಂತ ಆಗ್ರಹಿಸಿದ್ದಾರೆ.. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಜಿ ಹಳ್ಳಿ ಪೊಲೀಸರು ಆರೋಪಿ ಕುಟ್ಟಿಯನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ನಭಕ್ಕೆ ಹಾರಿದ ‘ಬಾಹುಬಲಿ’ ರಾಕೆಟ್​.. ಇಸ್ರೋ ಮತ್ತೊಂದು ಮೈಲಿಗಲ್ಲು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us