newsfirstkannada.com

ಮಂಡ್ಯದಲ್ಲಿ ಮಾವಿನ ಮರ ಹತ್ತಿದ್ದ 16 ವರ್ಷದ ಬಾಲಕ ಹಠಾತ್ ಸಾವು; ಆಗಿದ್ದೇನು?

Share :

Published May 25, 2024 at 6:42pm

Update May 25, 2024 at 6:37pm

  ಮಾವಿನ ಕಾಯಿ ಕೀಳಲು ಹೋಗಿದ್ದಾಗ ಸಂಭವಿಸಿದ ದುರಂತ

  SSLC ಮುಗಿಸಿ ಕಾಲೇಜಿಗೆ ಹೋಗಬೇಕಿದ್ದ ಬಾಲಕ ಸಾವಿನ ಮನೆ ಸೇರಿದ

  ಘಟನಾ ಸ್ಥಳದಲ್ಲಿ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ

ಮಂಡ್ಯ: ಮಾವಿನ ಕಾಯಿ ಕೀಳಲು ಹೋಗಿದ್ದ ಬಾಲಕ ಮರದ ಮೇಲೆಯೇ ಸಾವನ್ನಪ್ಪಿರೋ ದಾರುಣ ಘಟನೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ. ಮಾರಗೌಡನಹಳ್ಳಿಯ ಸಂಜಯ್(16) ಮೃತ ಬಾಲಕ.

16 ವರ್ಷದ ಸಂಜಯ್ ಮರದ ಮೇಲೆ ಇದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ. ವಿದ್ಯುತ್ ತಂತಿ ತಗುಲಿ ಬಾಲಕ ಮರದ ಮೇಲೆಯೇ ಸಾವನ್ನಪ್ಪಿದ್ದಾನೆ.

ಸಂಜಯ್ ಇತ್ತೀಚೆಗೆ SSLC ಪರೀಕ್ಷೆಯಲ್ಲಿ ಪಾಸ್ ಆಗಿದ್ದ. ಕಾಲೇಜಿಗೆ ಹೋಗಬೇಕಿದ್ದ ಬಾಲಕ ಮಾವಿನ ಮರದ ಮೇಲೆ ಕರೆಂಟ್ ಶಾಕ್‌ ಮೃತಪಟ್ಟಿದ್ದಾನೆ. ಘಟನಾ ಸ್ಥಳದಲ್ಲಿ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಗೂಗಲ್‌ ಮ್ಯಾಪ್‌ ನಂಬಿ ಕಾರಿನಲ್ಲಿ ಹೋದವರು ನೀರಿನಲ್ಲಿ ಮುಳುಗಡೆ; ಅಯ್ಯೋ ಏನಾಯ್ತು ಗೊತ್ತಾ?  

ಮಾವಿನ ಮರದ ಮೇಲೆಯೇ ವಿದ್ಯುತ್ ತಂತಿ ಹಾದು ಹೋಗಿದ್ದು, ದುರಂತಕ್ಕೆ ಕಾರಣವಾಗಿದೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಮಾವಿನ ಮರ ಹತ್ತಿದ್ದ 16 ವರ್ಷದ ಬಾಲಕ ಹಠಾತ್ ಸಾವು; ಆಗಿದ್ದೇನು?

https://newsfirstlive.com/wp-content/uploads/2024/05/Mandya-Boy-Death.jpg

Load More