newsfirstkannada.com

ಗೂಗಲ್‌ ಮ್ಯಾಪ್‌ ನಂಬಿ ಕಾರಿನಲ್ಲಿ ಹೋದವರು ನೀರಿನಲ್ಲಿ ಮುಳುಗಡೆ; ಅಯ್ಯೋ ಏನಾಯ್ತು ಗೊತ್ತಾ?

Share :

Published May 25, 2024 at 6:00pm

Update May 25, 2024 at 6:19pm

  ಗೂಗಲ್ ಮ್ಯಾಪ್ ನಂಬಿದ್ರೆ ಅಪಾಯ ಎದುರಾಗೋದು ಗ್ಯಾರಂಟಿ ನೋಡಿ

  ಗೂಗಲಮ್ಮನ ಮಾತು ಕೇಳಿಕೊಂಡ ಹೋದ ಯುವಕರಿಗೆ ಕಾದಿತ್ತು ದೊಡ್ಡ ಶಾಕ್​!

  ಮ್ಯಾಪ್ ಸೂಚಿಸಿದ ದಿಕ್ಕಿನಲ್ಲೇ ಕಾರು ಚಲಾಯಿಸಿ ಚಾಲಕ ಮಾಡಿದ ಯಡವಟ್ಟು

ತಿರುವನಂತಪುರಂ: ಈಗಂತೂ ಮನುಷ್ಯನ ಜೀವನ ಹೇಗಾಗಿದೆ ಅಂದ್ರೆ, ಪ್ರತಿಯೊಂದಕ್ಕೆ ಗೂಗಲ್​ ಮೇಲೆ ಡಿಪೆಂಡ್​ ಆಗುವ ಹಾಗಿದೆ. ಹಾಕೋ ಬಟ್ಟೆ, ತಿನ್ನೋ ಊಟ, ಹೋಗೋ ಜಾಗ ಎಲ್ಲವೂ ಗೂಗಲ್​ನಲ್ಲೇ ಹುಡುಕಿ ಬಳಸುವಂತೆ ಆಗಿ ಹೋಗಿದೆ. ಎಲ್ಲಾದರೂ ಹೊಸ ಜಾಗದಲ್ಲಿ ಓಡಾಡಬೇಕು ಅಂದ್ರು ಕೂಡ ಯಾರನ್ನೂ ವಿಳಾಸ​ ಕೇಳೋಕೆ ಹೋಗಲ್ಲ ಈಗಿನ ಜನ. ಗೂಗಲ್ ಮ್ಯಾಪ್​ ಹಾಕ್ಕೊಂಡು ಹಿಂದೆ ಮುಂದೆ ನೋಡದೆ ಸ್ಟ್ರೈಟ್​​ ಆಗಿ ಹೋಗಿ ಬಿಡುತ್ತಾರೆ. ಗೊತ್ತಿಲ್ಲದ ಊರಿಗೆ ಅಥವಾ ಪ್ರವಾಸಕ್ಕೆ ಹೋದಾಗ ಗೂಗಲ್ ಮ್ಯಾಪ್‌ ಬಳಸೋದು ಕಾಮನ್. ಆದರೆ ಅದೇ ಗೂಗಲ್ ಮ್ಯಾಪ್‌ ಕೆಲವೊಂದು ಬಾರಿ ತಪ್ಪು ದಾರಿ ತೋರಿಸಿ ಯಡವಟ್ಟು ಮಾಡಿದ ಅನೇಕ ಘಟನೆಗಳು ನಡೆದಿದೆ. ಇದೇ ಸಾಲಿಗೆ ಈಗ ಮತ್ತೊಂದು ಅಂತಹದೇ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಹೀಗೆ ಫೋರ್ಡ್ ಎಂಡೋವರ್ ಕಾರಿನಲ್ಲಿ ಹೋಗಿದ್ದ ನಾಲ್ವರು ಗೂಗಲ್‌ನಲ್ಲಿ ರೂಟ್ ಮ್ಯಾಪ್‌ ಅನ್ನ ನೋಡಿಕೊಂಡು ಫಜೀತಿ ಅನುಭವಿಸಿದ್ದಾರೆ. ಹೌದು, ಇಂದು ಕೇರಳದ ಅಳಪ್ಪುಳಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಹೈದರಾಬಾದ್‌ನ ನಾಲ್ವರು, ಗೂಗಲ್ ಮ್ಯಾಪ್ ಹೇಳಿದಂತೆ ತೆರಳಿ ಸೀದಾ ಹಳ್ಳವೊಂದಕ್ಕೆ ಕಾರು ಇಳಿಸಿರೋ ಘಟನೆಯೊಂದು ನಡೆದು ಹೋಗಿದೆ.

ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿ ಸೇರಿಕೊಂಡು ಅಳಪ್ಪುಳದ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗೂಗಲ್ ಮ್ಯಾಪ್ ಎಡಭಾಗಕ್ಕೆ ತಿರುವು ತೆಗೆದುಕೊಳ್ಳುವಂತೆ ಹೇಳಿದ್ದರಿಂದ ಎಡಭಾಗಕ್ಕೆ ತಿರುವು ತೆಗೆದುಕೊಂಡಾಗ ಏಕಾಏಕಿ ಕಾರು ಹಳ್ಳಕ್ಕೆ ಬಿದ್ದಿದೆ. ತಕ್ಷಣವೇ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಹೊರಬಂದು ಸ್ಥಳೀಯರಿಗೆ ಸಹಾಯ ಮಾಡುವಂತೆ ಕೋರಿದ್ದಾರೆ. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು ಅವರ ರಕ್ಷಣೆ ಧಾವಿಸಿದ್ದರು. ಹಳ್ಳದಲ್ಲಿ ಬಿದ್ದಿದ್ದ ನಾಲ್ವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಳ್ಳದಲ್ಲಿ ಬಿದ್ದಿದ್ದ ಕಾರನ್ನು ಹೊರತೆಗೆದಿದ್ದಾರೆ.  ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬದುಕಿಗೆ ಟೆಕ್ನಾಲಜಿ ಬೇಕು. ಹಾಗಂತ ಟೆಕ್ನಾಲಜಿಯಲ್ಲೇ ಬದುಕು ಅಂತ ಮುಳುಗೋಗಬಾರದು. ತಂತ್ರಜ್ಞಾನವನ್ನ ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಅದೇ ತಂತ್ರಜ್ಞಾನದಿಂದ ತಮ್ಮ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಅನ್ನೋದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಇದನ್ನೂ ಓದಿ: BREAKING: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕರ್ನಾಟಕ ಮೂಲದ ಮೂವರು ದಾರುಣ ಸಾವು

ಈ ಹಿಂದೆ ಇದೇ ಗೂಗಲ್ ಮ್ಯಾಪ್ ಇಬ್ಬರು ಯುವಕರ ಜೀವ ಬಲಿ ಪಡೆದುಕೊಂಡಿತ್ತು. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಯುಎಸ್​ನಲ್ಲಿ ಓರ್ವ ವ್ಯಕ್ತಿ ಗೂಗಲ್​ ಮ್ಯಾಪ್​ನ ನಂಬಿಕೊಂಡು ಹೋಗಿ ಬ್ರಿಡ್ಜ್‌ನಿಂದ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಅದಾದ ಬಳಿಕ ನೆರೆರಾಜ್ಯ ಕೇರಳದಲ್ಲಿ ಗೂಗಲ್​ ಮ್ಯಾಪ್​ನ ಫಾಲೋ ಮಾಡ್ಕೊಂಡು ಹೋಗಿ ಇಬ್ಬರು ವಿದ್ಯಾವಂತ ಯುವಕರು ಜಲಸಮಾಧಿ ಆಗಿದ್ದರು. ಸ್ನೇಹಿತರ ಜೊತೆ ಬರ್ತ್​ಡೇ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಗೂಗಲ್ ಮ್ಯಾಪ್​ ಹಿಂದೆ ಹೋಗಿ ಜಲಸಮಾಧಿಯಾಗಿದ್ದರು. ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿದ್ದರು. ಆ ಇಬ್ಬರಿಗೂ 29 ವರ್ಷ ವಯಸ್ಸಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್​ಗಳಾಗಿ ಕೆಲಸ ಮಾಡ್ತಿದ್ದವ್ರು ಗೂಗಲ್ ಮ್ಯಾಪ್​ ಹೇಳಿದಂತೆ ಹೋಗಿ ತಮ್ಮ ಜೀವನವನ್ನ ಅಂತ್ಯಗೊಳಿಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೂಗಲ್‌ ಮ್ಯಾಪ್‌ ನಂಬಿ ಕಾರಿನಲ್ಲಿ ಹೋದವರು ನೀರಿನಲ್ಲಿ ಮುಳುಗಡೆ; ಅಯ್ಯೋ ಏನಾಯ್ತು ಗೊತ್ತಾ?

https://newsfirstlive.com/wp-content/uploads/2024/05/google-maps.jpg

Load More