newsfirstkannada.com

ಮೊಬೈಲ್ ನೋಡುತ್ತಿದ್ದಾಗ 16 ವರ್ಷದ ಬಾಲಕ ದಿಢೀರ್ ಸಾವು; ವೈದ್ಯರಿಂದ ಶಾಕಿಂಗ್‌ ರಿಪೋರ್ಟ್‌; ಆಗಿದ್ದೇನು?

Share :

Published April 23, 2024 at 12:02pm

    ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಕುಸಿದು ಬಿದ್ದ

    ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಾವು ಖಚಿತ ಪಡಿಸಿದ ಡಾಕ್ಟರ್

    ಮನೆಯಲ್ಲಿ ಮೊಬೈಲ್ ನೋಡುವಾಗ 16 ವರ್ಷದ ಬಾಲಕನ ದಾರುಣ

ಸಾವು ಹೇಗೆ, ಎಲ್ಲಿ ಬೇಕಾದರೂ ಬರಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. 16 ವರ್ಷದ ಬಾಲಕ ಮೊಬೈಲ್ ಫೋನ್ ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಈ ದುರಂತ ನಡೆದಿದೆ.

16 ವರ್ಷದ ಅಮನ್ ಖುರೇಷಿ ಮೃತ ದುರ್ದೈವಿ. ಖುರೇಷಿ ಮೊಬೈಲ್ ಫೋನ್ ನೋಡುತ್ತಿದ್ದಾಗ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಮನ್ ಖುರೇಷಿ ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಅಮನ್ ಖುರೇಷಿ ಸಾವನ್ನಪ್ಪಿದ್ದನ್ನು ವೈದ್ಯರು ಖಚಿತ ಪಡಿಸಿದ್ದು, ಹಾರ್ಟ್ ಅಟ್ಯಾಕ್‌ನಿಂದ ಪ್ರಾಣ ಬಿಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತಪಟ್ಟ ಬಾಲಕ ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಈ ದುರಂತ ನಡೆದಿದೆ.

ಇದನ್ನೂ ಓದಿ: ಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video 

ಇತ್ತೀಚೆಗೆ ದೇಶಾದ್ಯಾಂತ ಹೃದಯಾಘಾತಕ್ಕೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹದಿ ಹರಿಯದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರೋದು ನಿಜಕ್ಕೂ ಶಾಕಿಂಗ್‌ ಘಟನೆಯಾಗಿದೆ.

ಹೃದಯಾಘಾತಕ್ಕೆ ಕಾರಣಗಳೇನು?
ಹೃದಯಾಘಾತವು ವ್ಯಕ್ತಿಯ ಮಾನಸಿಕ ಒತ್ತಡ ಮತ್ತು ದೈಹಿಕ ಪರಿಶ್ರಮದಿಂದ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೈನಂದಿನ ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವುದರಿಂದ ಹೃದಯದ ಮೇಲೆ ಒತ್ತಡವೂ ಹೆಚ್ಚಾಗುತ್ತದೆ.
ಪ್ರಮುಖವಾಗಿ ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮಗಳು ಸಣ್ಣ ವಯಸ್ಸಿನವರಿಂದ ವಯಸ್ಸಾದವರಿಗೂ ಹೃದಯಾಘಾತ ಆಗಲು ಕಾರಣವಾಗಿದೆ. ನ್ಯುಮೋನಿಯದಂತಹ ತೀವ್ರ ಸೋಂಕು ಹೃದಯ ಸ್ನಾಯುವಿನ ಊತಕವೂ ಸಾವನ್ನು ಉಂಟುಮಾಡಬಹುದು. ರಕ್ತನಾಳದಲ್ಲಿ ಬೇಗ ರಕ್ತು ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದಿಂದ ಪಾರಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊಬೈಲ್ ನೋಡುತ್ತಿದ್ದಾಗ 16 ವರ್ಷದ ಬಾಲಕ ದಿಢೀರ್ ಸಾವು; ವೈದ್ಯರಿಂದ ಶಾಕಿಂಗ್‌ ರಿಪೋರ್ಟ್‌; ಆಗಿದ್ದೇನು?

https://newsfirstlive.com/wp-content/uploads/2024/04/UP-Boy-Death.jpg

Load More