ಮಂಡ್ಯದ ಪಾಂಡವಪುರ ಅರ್ಚಕನಿಗೆ ತೆಲಂಗಾಣದ ಮಹಿಳೆಯ ಮೋಸ?
ಯುವತಿಗೆ ಆನ್‌ಲೈನ್‌ನಲ್ಲಿ ಹಣ ಕಳುಹಿಸಿ ಲಕ್ಷ, ಲಕ್ಷ ಕಳೆದುಕೊಂಡ ಅರ್ಚಕ
ಹಲವು ಬಾರಿ ಸಿಗುವುದಾಗಿ ಹೇಳಿ ಮೋಸ ಮಾಡಿರುವ ಯುವತಿ ವಿರುದ್ಧ ದೂರು
ಮಂಡ್ಯ: 60ರ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರೋ ಆರೋಪ ಕೇಳಿ ಬಂದಿದೆ. ಯುವತಿ ಆನ್ಲೈನ್ನಲ್ಲೇ ಅಜ್ಜನಿಗೆ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ಮಂಡ್ಯದ ಪಾಂಡವಪುರ ಮೂಲದ ಅರ್ಚಕ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಪಾಂಡವಪುರದ ಅರ್ಚಕನಿಗೆ ತೆಲಂಗಾಣದ ಮಹಿಳೆಯ ಫೋಟೋ ಬಳಸಿ ಮೋಸ ಮಾಡಲಾಗಿದೆ. ತೆಲಂಗಾಣ ಮೂಲದ ಸಿರಿ ಶ್ರೇಷಾ ಸರಿತಾ ಅನ್ನೋ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಲಾಗಿದೆ. ಅದರಲ್ಲಿ 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿ ಮೋಸ ಮಾಡಿದೆ ಎಂದು ದೂರು ನೀಡಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಗಂಡ, ಹೆಂಡತಿ ದುರಂತ ಅಂತ್ಯ.. ಒಂದು ವರ್ಷದ ಹೆಣ್ಣು ಮಗು ಅನಾಥ; ಅಸಲಿಗೆ ಆಗಿದ್ದೇನು?
60 ವರ್ಷದ ವೃದ್ಧನ ಜೊತೆ 20 ವರ್ಷದ ಯುವತಿ ವಾಟ್ಸಾಆ್ಯಪ್‌ನಲ್ಲಿ ಚಾಟಿಂಗ್ ಮಾಡಿದ್ದಾರೆ. ಯುವತಿ ಮಾತು ನಂಬಿದ ಅರ್ಚಕರು ಆನ್‌ಲೈನ್‌ನಲ್ಲಿ ಹಣ ಕಳುಹಿಸಿ ಲಕ್ಷ, ಲಕ್ಷ ಹಣ ಕಳೆದುಕೊಂಡಿದ್ದಾರೆ.
ಅರ್ಚಕನಿಗೆ ಬಲೆ ಬೀಸಿದ್ದು ಹೇಗೆ?
ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದ ವಿಜಯಕುಮಾರ್ ಹಣ ಕಳೆದುಕೊಂಡಿರುವವರು. ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್‌ಗೆ ಫೇಸ್ ಬುಕ್‌ನಲ್ಲಿ ಯುವತಿ ಪರಿಚಯ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಳಿಕ ಇಬ್ಬರ ನಡುವೆ ಆತ್ಮೀಯ ಸಂಭಾಷಣೆ ನಡೆದಿದೆ. ಯುವತಿಯು ಹಲವು ಕಾರಣ ಹೇಳಿ ಆಗಾಗ ಹಣ ಕೇಳುತ್ತಿದ್ದರಂತೆ. ಯುವತಿಯ ಮಾತು ನಂಬಿ ಅರ್ಚಕರು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ: ಎಗ್ ಪಫ್ಗಾಗಿ ₹3.60 ಕೋಟಿ ಹಣ ಖರ್ಚು ಮಾಡಿದ್ರಾ? ಮಾಜಿ ಸಿಎಂ ಜಗನ್ ವೆಚ್ಚಕ್ಕೆ ಆಂಧ್ರ ಜನ ಶಾಕ್!
ಅರ್ಚಕ ವಿಜಯ್ ಕುಮಾರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿ ಹಲವು ಬಾರಿ ಸಿಗುವುದಾಗಿ ಹೇಳಿ ವಂಚಿಸಿದ್ದಾರೆ. ಯುವತಿಯು ಸಿಗದೇ, ಹಣ ವಾಪಸ್ ಬರದೇ 60 ವರ್ಷದ ವೃದ್ಧ ಈಗ ಕಂಗಾಲಾಗಿದ್ದಾರೆ. ಫೇಕ್ ಐಡಿ ಬಳಸಿ, ನಂಬಿಸಿ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ