newsfirstkannada.com

ಎಗ್​​ ಪಫ್​ಗಾಗಿ ₹3.60 ಕೋಟಿ ಹಣ ಖರ್ಚು ಮಾಡಿದ್ರಾ? ಮಾಜಿ ಸಿಎಂ ಜಗನ್ ವೆಚ್ಚಕ್ಕೆ ಆಂಧ್ರ ಜನ ಶಾಕ್!

Share :

Published August 21, 2024 at 1:11pm

Update August 21, 2024 at 1:28pm

    ತಮ್ಮ ಮನೆಯನ್ನೇ ಸಚಿವಾಲಯ ಮಾಡಿಕೊಂಡಿದ್ದ ಮಾಜಿ CM

    ಕೋಟಿ ಕೋಟಿ ರೂಪಾಯಿ ಲೆಕ್ಕ ತೋರಿಸಿದ್ದಕ್ಕೆ ಸರ್ಕಾರ ಶಾಕ್

    ಮಾಜಿ ಸಿಎಂ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾ ಈಗಿನ ಸರ್ಕಾರ?

‘ಎಗ್​​ ಪಫ್’​ ಎಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಸಿಕ್ಕರೇ ಸಾಕು ಹೊಟ್ಟೆ ತುಂಬಾ ತಿಂದುಬಿಡೋಣ ಅನಿಸುತ್ತೆ. ಕಾಲೇಜಿಗೆ ಹೋದಾಗ ಸ್ನಾಕ್ಸ್ ತಿನ್ನಬೇಕೆಂದು ಬೇಕರಿಗೆ ಹೋದಾಗ ಅಲ್ಲಿ ಎಗ್​​ ಪಫ್​ಗಾಗಿ ಸ್ನೇಹಿತರ ಜೊತೆ ಕಿತ್ತಾಡಿದ್ದು ಇರುತ್ತೆ. ಅಬ್ಬಬ್ಬಾ ಅಂದ್ರೆ ಎಗ್​ ಪಫ್​ ಎಷ್ಟು ತಿನ್ನುತ್ತೇವೆ 5 ಇಲ್ವೋ 10. ಆದರೆ ಆಂಧ್ರದ ಮಾಜಿ ಸಿಎಂ ಜಗನ್​ ಮೋಹನ್​ ರೆಡ್ಡಿ ಕೋಟಿ, ಕೋಟಿ ರೂಪಾಯಿ ಎಗ್​ ಪಫ್​ಗಳನ್ನ ತಿಂದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ.

ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್​​ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ? 

ಆಂಧ್ರ ಪ್ರದೇಶದ ಮಾಜಿ ಸಿಎಂ ಜಗನ್​ ಮೋಹನ್ ರೆಡ್ಡಿಯವರು ಕಳೆದ 5 ವರ್ಷ ಅಂದರೆ 2019ರಿಂದ 2024ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ವಿಜಯವಾಡ ಬಳಿ ಇರುವ ತಮ್ಮ ಸ್ವಂತ ನಿವಾಸ ತಾಡೆಪಲ್ಲಿ ಪ್ಯಾಲೇಸ್​ ಅನ್ನು ಮುಖ್ಯಮಂತ್ರಿ ಸಚಿವಾಲಯವಾಗಿ​ ಬಳಕೆ ಮಾಡಿಕೊಂಡಿದ್ದರು. ಈ ವೇಳೆ ನೂರಾರು ಅಧಿಕಾರಿ, ಸಿಬ್ಬಂದಿ ಕೆಲಸ ಮಾಡಿದ್ದಾರೆ. ಆದರೆ 5 ವರ್ಷದಲ್ಲಿ ಕೇವಲ ಎಗ್​ಪಫ್​ಗಾಗಿ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇಷ್ಟೊಂದು ಮೊತ್ತ ಖರ್ಚು ಆಗಿದ್ದು ತಿಳಿದು ರಾಜ್ಯದ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಟೀಚರ್ ಆಗೋ ಅಭ್ಯರ್ಥಿಗಳಿಗೆ ಗುಡ್​ ನ್ಯೂಸ್.. ಶಿಕ್ಷಕ ಹುದ್ದೆ ನೇಮಕಾತಿ ಬಗ್ಗೆ ಸಚಿವರು ಏನಂದ್ರು?

ಕೇವಲ ಎಗ್​ ಪಫ್​ಗಾಗಿ ಕಳೆದ ಸರ್ಕಾರ ಕೋಟಿ ಕೋಟಿ ರೂಪಾಯಿ ಲೆಕ್ಕ ತೋರಿಸಿರುವುದು ಈಗಿನ ಚಂದ್ರಬಾಬು ನಾಯ್ಡು ಸರ್ಕಾರವನ್ನ ಹಾಗೂ ಜನರ ಕಣ್ಣು ಕೆಂಪಾಗಿಸಿದೆ. ಐದು ವರ್ಷಕ್ಕೆ 3.60 ಕೋಟಿ ರೂ. ಎಗ್​ಪಫ್ ಎಂದರೆ ಒಂದು ವರ್ಷಕ್ಕೆ 71 ಲಕ್ಷ ರೂ. ಖರ್ಚು ಮಾಡಿದೆ. ಇದರ ಪ್ರಕಾರ ಒಂದು ದಿನಕ್ಕೆ 993 ಎಗ್​ಪಫ್ ಎಂದರೂ 20 ಸಾವಿರ ರೂ.ಗಳನ್ನು ವೆಚ್ಚ ಮಾಡಿದೆ. 5 ವರ್ಷದಲ್ಲಿ 18 ಲಕ್ಷ ಎಗ್​ ಪಫ್​ ತಿಂದಿದ್ದಾರಂತೆ. ಅಲ್ಲದೇ ಇದರ ಜೊತೆ ಕಾಫಿ, ಟೀಗಳಲ್ಲ ಲೆಕ್ಕ ಮಾಡಿದರೆ ಖರ್ಚು ಇನ್ನು ದುಪ್ಪಟ್ಟು ಆಗುತ್ತೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆದಿದೆ.

ಇದನ್ನೂ ಓದಿ: ಆ ವಿಚಾರಕ್ಕೆ ನೋ ಎಂದ ಪ್ರಿಯಕರ.. ಖಾಸಗಿ ಅಂಗದ ಮೇಲೆ ಚಾಕುವಿನಿಂದ ಪ್ರಿಯತಮೆ ಹಲ್ಲೆ!

ಕೇವಲ ಎಗ್​ ಪಫ್​ದೊಂದೇ ದುಂದುವೆಚ್ಚವಲ್ಲ, ಬದಲಿಗೆ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ವಿಶೇಷ ವಿಮಾನ, ಚಾಪರ್‌ಗಳ ವೆಚ್ಚ, ರುಷಿಕೊಂಡ ಅರಮನೆಯ ನಿರ್ಮಾಣ, ಅಗತ್ಯಕ್ಕಿಂತ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ, ವೈಯಕ್ತಿಕ ವಿಹಾರ ಜೊತೆ ಸಣ್ಣ ಪ್ರವಾಸಗಳ ದುಂದುವೆಚ್ಚಗಳ ಮಾಹಿತಿ ಬಹಿರಂಗಗೊಂಡಿದೆ. ಜಗನ್​ ಮೋಹನ್​ ರೆಡ್ಡಿ ಅಧಿಕಾರದಲ್ಲಿ ದುಂದುವೆಚ್ಚಗಳ ಕುರಿತು ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಕ್ರಮ ತೆಗೆದುಕೊಳ್ಳುವಾಗಲೇ ಇನ್ನಷ್ಟು ಅಕ್ರಮಗಳು ಬಯಲಿಗೆ ಬರುತ್ತಿವೆ ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಗ್​​ ಪಫ್​ಗಾಗಿ ₹3.60 ಕೋಟಿ ಹಣ ಖರ್ಚು ಮಾಡಿದ್ರಾ? ಮಾಜಿ ಸಿಎಂ ಜಗನ್ ವೆಚ್ಚಕ್ಕೆ ಆಂಧ್ರ ಜನ ಶಾಕ್!

https://newsfirstlive.com/wp-content/uploads/2024/08/JAGAN.jpg

Load More