newsfirstkannada.com

ಬಾಲಕನ ಮೇಲೆಯೇ ಹರಿದ ಎಲೆಕ್ಟ್ರಿಕ್​​ ವೆಹಿಕಲ್​​.. ಪೋಷಕರು ಓದಲೇಬೇಕಾದ ಸ್ಟೋರಿ!

Share :

Published February 2, 2024 at 6:05am

    ರಸ್ತೆಗೆ ಗಾಡಿ ಬರುತ್ತಿದ್ದಂತೆ ಏಕಾಏಕಿ ನುಗ್ಗಿಬಿಟ್ಟ ಬಾಲಕ

    ಬಿಜಾಪುರ ಮೂಲದ ಬಾಲಕ ತ್ರಿಧರ್​ಗೆ ಗಂಭೀರ ಗಾಯ

    ಮಕ್ಕಳನ್ನ ಹೊರಗೆ ಕರೆದೊಯ್ದಾಗ ಇರಲಿ ಎಚ್ಚರ ಎಚ್ಚರ

ಬೆಂಗಳೂರು: ಮಕ್ಕಳನ್ನ ಹೊರಗಡೆ ಕರೆದುಕೊಂಡು ಹೋದಾಗ ಮೈಯೆಲ್ಲಾ ಕಣ್ಣಾಗಿದ್ರು ಕಷ್ಟ. ಎಷ್ಟು ಜಾಗೂರುಕರಾಗಿದ್ರು ಕೂಡ ಮಕ್ಕಳು ಕಣ್ಣುಮುಚ್ಚಿ ಬಿಡೋವಷ್ಟರಲ್ಲೇ ಎಲ್ಲೋ ಹೋಗಿರುತ್ತಾರೆ. ಕೆಲವು ಬಾರಿ ಪೋಷಕರು ಎಷ್ಟೇ ಗಮನ ಹರಿಸಿದ್ರು ಆಗೋ ಅವಘಡ ಹೇಗಾದ್ರೂ ಆಗಿಬಿಡುತ್ತೆ. ಇಲ್ಲೂ ಅದೇ ಆಗಿದೆ. ಪುಟ್ಟ ಕಂದ ಕೆಲ ಸೆಕೆಂಡಿಗೂ ಮೊದಲು ರಸ್ತೆ ದಾಟಿ ತಾಯಿಯನ್ನು ತಬ್ಬಿಕೊಂಡು ನಿಂತಿದ್ದ.

ಅದೇ ಮಗು ಮರು ಕ್ಷಣದಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ನಡೆದಿದ್ದು, ಹೊರವಲಯದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್​ನಲ್ಲಿ. ಬಿಜಾಪುರ ಮೂಲದ ತ್ರಿಧರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಗು. ಜನವರಿ 27ನೇ ತಾರೀಖು ದೂರದ ಬಿಜಾಪುರದಿಂದ ಸಂಬಂಧಿಕರ ಮನೆಗೆ ಅಪ್ಪ-ಅಮ್ಮ ಮತ್ತು ದೊಡ್ಡಮ್ಮನೊಂದಿಗೆ ಬಂದಿದ್ದ ತ್ರಿಧರ್ ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಣೆಗೆ ಕುಟುಂಬದ ಜೊತೆ ತೆರಳಿದ್ದ. ಇದೇ ವೇಳೆ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇದನ್ನು ಓದಿ: 11 ದಿನಕ್ಕೆ 25 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ; ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಕೋಟಿ?

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಉದ್ಯಾನವನದ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಶ್ಟವಶಾತ್​ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಝೂ, ಚಿಟ್ಟೆಪಾರ್ಕ್ ಮತ್ತು ಸಫಾರಿ ಏರಿಯಾದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದ್ರೆ ಝೂ ಏರಿಯಾದಲ್ಲಿ ಪ್ರವಾಸಿಗರಿಗಾಗಿ ಬ್ಯಾಟರಿ ಚಾಲಿತ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಬ್ಯಾಟರಿ ಚಾಲಿತ ವಾಹನ ಡಿಕ್ಕಿಯಾಗಿ ಮಗು ಗಾಯಗೊಂಡಿದ್ದು, ಪ್ರವಾಸಿಗರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿದೆ.

ಇನ್ನೂ, ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಉದ್ಯಾನವನ ಆಡಳಿತ ಮಂಡಳಿ ಭರಿಸಲಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಮಗುವಿನ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣಿಸುತ್ತೆ. ಕೂಡಲೇ ಮಗವಿಗೆ ಸೂಕ್ತ ಚಿಕಿತ್ಸೆ ದೊರೆತ್ತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ. ಇನ್ಮುಂದೆ ಉದ್ಯಾನವನ ಮತ್ತಷ್ಟು ಎಚ್ಚರಿಕೆ ವಹಿಸಿಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕನ ಮೇಲೆಯೇ ಹರಿದ ಎಲೆಕ್ಟ್ರಿಕ್​​ ವೆಹಿಕಲ್​​.. ಪೋಷಕರು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/02/accident-2024-02-01T211446.316.jpg

Load More