Advertisment

ಘೋರ ದುರಂತ.. ಆಟವಾಡುತ್ತಿದ್ದಾಗ ವಿಸಿ ನಾಲೆಗೆ ಬಿದ್ದ 4 ವರ್ಷದ ಮಗು; ತೀವ್ರ ಹುಡುಕಾಟ

author-image
admin
Updated On
ಘೋರ ದುರಂತ.. ಆಟವಾಡುತ್ತಿದ್ದಾಗ ವಿಸಿ ನಾಲೆಗೆ ಬಿದ್ದ 4 ವರ್ಷದ ಮಗು; ತೀವ್ರ ಹುಡುಕಾಟ
Advertisment
  • ಮನೆ ಪಕ್ಕದಲ್ಲೇ ಇರುವ ವಿಸಿ ನಾಲೆ ಬಳಿ ಮಗುವಿನ ಚಪ್ಪಲಿ ಪತ್ತೆ
  • ಆಟವಾಡಲು ಹೋಗಿ ಮಗು ನಾಲೆಯಲ್ಲಿ ಕೊಚ್ಚಿ ಹೋದ ಶಂಕೆ
  • ನಿನ್ನೆಯಷ್ಟೇ ವಿಸಿ ನಾಲೆಗೆ KRS ಜಲಾಶಯದಿಂದ ಹರಿದ ನೀರು

ಮಂಡ್ಯ ಜಿಲ್ಲೆಯ ಹೊನಗಾನಹಳ್ಳಿಮಠ ಗ್ರಾಮದಲ್ಲಿ ಘೋರ ದುರಂತವೊಂದು ನಡೆದಿದೆ. ಆಟವಾಡುವ ವೇಳೆ ಮಗು ವಿಸಿ ನಾಲೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. KRS ಜಲಾಶಯದಿಂದ ವಿಸಿ ನಾಲೆಗೆ ಹರಿಯುತ್ತಿರುವ ಭಾರೀ ಪ್ರಮಾಣದ ನೀರು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

Advertisment

4 ವರ್ಷದ ಸಬಿನ್ ರಾಜ್ ವಿಸಿ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿರುವ ನತದೃಷ್ಟ ಮಗು. ಹೊನಗಾನಹಳ್ಳಿಮಠ ಗ್ರಾಮದ ರಾಜು ಹಾಗೂ ಕಸ್ತೂರಿ ದಂಪತಿಯ ಪುತ್ರ. ಸಬಿನ್‌ ರಾಜ್ ಇಂದು ಮಧ್ಯಾಹ್ನ ಅಂಗನವಾಡಿಯಿಂದ ಬಂದು ಮನೆ ಬಳಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

publive-image

ದುರಂತ ಆಗಿದ್ದು ಹೇಗೆ?
ಮನೆ ಪಕ್ಕದಲ್ಲೇ ಇರುವ ವಿಸಿ ನಾಲೆ ಬಳಿ ಮಗುವಿನ ಚಪ್ಪಲಿ ಪತ್ತೆಯಾಗಿದೆ. ಆಗ ಸ್ಥಳೀಯರು, ಕುಟುಂಬಸ್ಥರು ಮಗುವಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಮಧ್ಯಾಹ್ನ 2:30ರ ಸಮಯಕ್ಕೆ ಆಟವಾಡುವ ವೇಳೆ ಮಗು ನಾಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ನಿತ್ಯ ಸಂಜೆ 4 ಗಂಟೆಗೆ ಮಕ್ಕಳನ್ನು ಅಂಗನವಾಡಿ ಸಿಬ್ಬಂದಿ ಬಿಡುತ್ತಿದ್ದರು. ಇಂದು ಮೀಟಿಂಗ್ ನೆಪವೊಡ್ಡಿ ಮಧ್ಯಾಹ್ನ 2.30ಕ್ಕೆ ಅಂಗನವಾಡಿ ಬಂದ್ ಮಾಡಲಾಗಿದೆ. ಈ ವೇಳೆ ಆಟವಾಡಲು ಹೋಗಿ ಮಗು ನಾಲೆಯಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ. ಮಕ್ಕಳನ್ನ ಮನೆಗೆ ಬಿಡದೆ ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯ ಮಾಡಿದ ಆರೋಪ ಕೇಳಿ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

Advertisment

ಇದನ್ನೂ ಓದಿ: ವರುಣನ ರುದ್ರನರ್ತನ.. ಧಾರಾಕಾರ ಮಳೆಗೆ ಜನಜೀವನ ತತ್ತರ; ಸಿಡಿಲು ಬಡಿದು 15 ಮಂದಿ ದಾರುಣ ಸಾವು 

ಅಗ್ನಿಶಾಮಕ ದಳದಿಂದ ಶೋಧ ಕಾರ್ಯ
ನಿನ್ನೆಯಷ್ಟೇ ವಿಸಿ ನಾಲೆಗೆ KRS ಜಲಾಶಯದಿಂದ ನೀರು ಹರಿಸಲಾಗಿತ್ತು. ಇಂದು ನಾಲೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ಮಗು ಕೊಚ್ಚಿ ಹೋಗಿರುವ ಶಂಕೆ ಇದೆ. ಸಬಿನ್ ರಾಜ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ‘ಬಾಸ್​​​ನ ಮೀಟ್​ ಮಾಡ್ಬೇಕು ಅಂದ್ರೆ ಶೆಡ್​​ಗೆ ಬಾ’- ಗೂಗಲ್‌ ರಿವ್ಯೂನಲ್ಲೂ ದರ್ಶನ್​ ಫ್ಯಾನ್ಸ್​​ ಹುಚ್ಚಾಟ! 

Advertisment

ವಿಸಿ ನಾಲೆಯಲ್ಲಿ ಕೊಚ್ಚಿ ಹೋದ ಬಾಲಕನ ಪತ್ತೆಗಾಗಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ. ಗ್ರಾಮಸ್ಥರು, ಕುಟುಂಬಸ್ಥರು ಮಗುವಿನ ಹುಡುಕಾಟಕ್ಕಾಗಿ ನಾಲೆ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಆದರೆ ನೀರಾವರಿ ನಿಗಮದ ಅಧಿಕಾರಿಗಳು ನಾಲೆ ನೀರು ನಿಲ್ಲಿಸಿಲ್ಲ. ನೀರಿನ ರಭಸದಿಂದ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ತಕ್ಷಣ ನೀರು ನಿಲ್ಲಿಸುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಮಗುವಿನ ಹುಡುಕಾಟದ ಕಾರ್ಯಾಚರಣೆಯನ್ನು ಅಗ್ನಿಶಾಮಕದಳ ಸಿಬ್ಬಂದಿ ಸ್ಥಗಿತಗೊಳಿಸಿದ್ದಾರೆ. ನಾಳೆ ಬೆಳಗ್ಗೆ 7.30ಕ್ಕೆ ಮತ್ತೆ ಕಾರ್ಯಾಚರಣೆ ಆರಂಭಿಸಲು ನಿರ್ಧಾರ ಮಾಡಿದ್ದಾರೆ. ನಾಲೆ ನೀರು ನಿಲ್ಲಿಸುವಂತೆ ನೀರಾವರಿ ಅಧಿಕಾರಿಗಳಿಗೆ ಮಂಡ್ಯ ಶಾಸಕ ಗಣಿಗ ರವಿಕುಮಾರ್, ಗ್ರಾಮಸ್ಥರು ಮನವಿ ಮಾಡಿದ್ದಾರೆ. ಬೆಳಗ್ಗೆ ವೇಳೆಗೆ ನಾಲೆ ನೀರು ನಿಲ್ಲುವ ಸಾಧ್ಯತೆ ಇದೆ. ಆಮೇಲೆ ಮಗುವಿನ ಸುಳಿವು ಸಿಗುತ್ತಾ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment