ಕರ್ನಾಟಕದ ಬಿಜೆಪಿ ಮುಖಂಡ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಾವು

author-image
Bheemappa
Updated On
ಕರ್ನಾಟಕದ ಬಿಜೆಪಿ ಮುಖಂಡ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಾವು
Advertisment
  • ಭಾಲ್ಕಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖಂಡ
  • ಟಿಕೆಟ್‌ ಆಧರಿಸಿ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ ಪೊಲೀಸ್ರು
  • ಬಿಜೆಪಿ ಮುಖಂಡನ ಸಾವಿನ ಸುತ್ತ ಹಲವಾರು ಅನುಮಾನಗಳು

ಬೀದರ್: ಕರ್ನಾಟಕದ ಭಾಲ್ಕಿ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರ ಮೃತದೇಹ ಮಹಾರಾಷ್ಟ್ರ ಗಡಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಉಂಟು ಮಾಡಿದೆ. ಮುಖದ ಮೇಲೆ ಗಂಭೀರ ಸ್ವರೂಪದ ಗಾಯಗಳು ಆಗಿರುವ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

ಬಿಜೆಪಿ ಮುಖಂಡ ಹಾಗೂ ಯೋಗ ಶಿಕ್ಷಕ ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದ ಧೋಂಡಿರಾಮ ಚಾಂದಿವಾಲೆ ಮೃತ ವ್ಯಕ್ತಿ. ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ಉಮರ್ಗಾ ಬಳಿಯ ಹೆದ್ದಾರಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚಾಂದಿವಾಲೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳು ವ್ಯಕ್ತವಾಗಿವೆ. ಮೃತನ ಜೇಬಿನಲ್ಲಿ ದೊರೆತ ಬಸ್‌ ಟಿಕೆಟ್‌ ಆಧರಿಸಿ, ಮಹಾರಾಷ್ಟ್ರ ಪೊಲೀಸರು ಮಾಹಿತಿಯನ್ನು ಮೃತನ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?

publive-image

ಕೆಲ ವರ್ಷಗಳಿಂದ ನಗರದ ಬರೀದ್‌ ಷಾಹಿ ಉದ್ಯಾನದಲ್ಲಿ ಉಚಿತ ಯೋಗ ಶಿಬಿರ ನಡೆಸಿಕೊಡುತ್ತಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫಲವಾಗಿದ್ದರು. ಸದ್ಯ ಇವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಮ್ಮರ್ಗಾ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲು ಮಾಡಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment