newsfirstkannada.com

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಬಂದ್ನಾ ಕಿರಾತಕ!?: ಸಿಸಿಟಿವಿಯಲ್ಲಿ ಸ್ಫೋಟಕ ದೃಶ್ಯಗಳು ಸೆರೆ

Share :

Published March 1, 2024 at 7:32pm

Update March 1, 2024 at 7:33pm

  ಸರಿಯಾಗಿ ಮಧ್ಯಾಹ್ನ 1 ಗಂಟೆಗೆ ರಾಮೇಶ್ವರಂ ಕೆಫೆಗೆ ಬಂದ ಕಿರಾತಕ

  ಹೋಟೆಲ್‌ನಲ್ಲಿ ತಿಂಡಿ ಸೇವಿಸಿ ಬಾಂಬ್ ಇಟ್ಟು ಹೋಗಿರುವ ಶಂಕೆ

  ಕೈ ತೊಳೆಯುವ ಜಾಗದಲ್ಲಿ ಸ್ಫೋಟಕ ಬ್ಯಾಗ್ ಇಟ್ಟು ಕಿರಾತಕ ಎಸ್ಕೇಪ್!

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರೋ ಬಾಂಬ್ ಸ್ಫೋಟ ಬೆಚ್ಚಿ ಬೀಳಿಸಿದೆ. ಸಿಸಿಟಿವಿಯಲ್ಲಿ ಬಾಂಬ್ ಸ್ಫೋಟದ ಭಯಾನಕ ದೃಶ್ಯಗಳು ಸೆರೆಯಾಗಿದ್ದು, ಒಂದೇ ಕ್ಷಣದಲ್ಲಿ ಸ್ಥಳದಲ್ಲಿದ್ದ ಜನರು ಚೆಲ್ಲಾಪಿಲ್ಲಿ ಆಗಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಂಬ್ ಸ್ಫೋಟ ಸಂಭವಿಸಿದೆ. ಸರಿಯಾಗಿ 1 ಗಂಟೆಗೆ 60-70 ಗ್ರಾಹಕರು ರಾಮೇಶ್ವರಂ ಕೆಫೆಯಲ್ಲಿದ್ದು, ಇದೇ ಸಮಯದಲ್ಲಿ ದುಷ್ಕರ್ಮಿಯ ಎಂಟ್ರಿಯಾಗಿದೆ. ಆ ಕಿರಾತಕ ಹೋಟೆಲ್‌ನಲ್ಲಿ ತಿಂಡಿ ಸೇವಿಸಿ ಬಾಂಬ್ ಇಟ್ಟು ಹೋಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ: VIDEO: ಹೋಟೆಲ್​ ಬ್ಲಾಸ್ಟ್​​ ವಿಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯ; ಮಾಸ್ಟರ್​ ಮೈಂಡ್​ ಯಾರು? ಆಗಿದ್ದೇನು?

ರಾಮೇಶ್ವರಂ ಕೆಫೆಗೆ ಬಂದಿರೋ ಅಪರಿಚಿತ ವ್ಯಕ್ತಿ ಕ್ಯಾಶಿಯರ್ ಬಳಿ ಟೋಕನ್ ಪಡೆದು ತಿಂಡಿ ಸೇವಿಸಿದ್ದಾನೆ. ನಂತರ ಕೈ ತೊಳೆಯುವ ಜಾಗದಲ್ಲಿ ಬ್ಯಾಗ್ ಇಟ್ಟು ಕಿರಾತಕ ಎಸ್ಕೇಪ್ ಆಗಿದ್ದಾನೆ. ಹ್ಯಾಂಡ್ ವಾಶ್‌ ಮಾಡುವ ಜಾಗದಲ್ಲಿಯೇ ಬ್ಯಾಗ್‌ ಇಟ್ಟು ಹೋಗಿದ್ದು, ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ 2 ಬಾರಿ ಸ್ಫೋಟ ಸಂಭವಿಸಿದೆ. ವ್ಯಕ್ತಿಯೊಬ್ಬ ಕೆಫೆಗೆ ಬಂದು ಬ್ಯಾಗ್ ಇಟ್ಟು ಹೋಗಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ಮಾಹಿತಿ ನೀಡಿದ್ದಾರೆ. ಸದ್ಯ ಇಡೀ ರಾಮೇಶ್ವರಂ ಕೆಫೆಯನ್ನು ಸುತ್ತುವರಿದಿರುವ ಪೊಲೀಸರು ಉನ್ನತ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಬಂದ್ನಾ ಕಿರಾತಕ!?: ಸಿಸಿಟಿವಿಯಲ್ಲಿ ಸ್ಫೋಟಕ ದೃಶ್ಯಗಳು ಸೆರೆ

https://newsfirstlive.com/wp-content/uploads/2024/03/cctv-6.jpg

Load More