newsfirstkannada.com

WATCH: ಪ್ರಸಿದ್ಧ ಶ್ರೀಶೈಲ ದೇವಸ್ಥಾನದ ಪ್ರಸಾದದಲ್ಲಿ ಮೂಳೆ ಪತ್ತೆ; ಭಕ್ತರು ಫುಲ್ ಶಾಕ್‌!

Share :

Published February 11, 2024 at 6:15pm

Update February 11, 2024 at 6:20pm

    ಪ್ರಸಿದ್ಧ ಹಿಂದೂ ದೇವಸ್ಥಾನ ಶ್ರೀಶೈಲದಲ್ಲಿ ಅತಿ ದೊಡ್ಡ ಪ್ರಮಾದ

    ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ನೀಡಿದ ಪ್ರಸಾದದಲ್ಲಿ ‘ಮೂಳೆ’

    ಮೂಳೆ ಸಿಕ್ಕ ಪ್ರಸಾದದ ಸಾಕ್ಷಿ ಸಮೇತ ದೂರು ಕೊಟ್ಟ ಭಕ್ತರು

ದೇಶದ ಪ್ರಸಿದ್ಧ ಹಿಂದೂ ದೇವಸ್ಥಾನಗಳಲ್ಲಿ ಒಂದಾದ ಶ್ರೀಶೈಲದಲ್ಲಿ ಅತಿ ದೊಡ್ಡ ಪ್ರಮಾದವಾಗಿದೆ. ಭಕ್ತರು ಸ್ವೀಕರಿಸುವ ದೇವರ ಪ್ರಸಾದದಲ್ಲಿ ಮೂಳೆಯ ಚೂರು ಪತ್ತೆಯಾಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಫೆಬ್ರವರಿ 9ರಂದು ಎಂದಿನಂತೆ ಶ್ರೀಶೈಲ ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ಪ್ರಸಾದ ಹಂಚಿಕೆ ಮಾಡಲಾಗಿದೆ. ಭಕ್ತರಿಗೆ ಪ್ರಸಾದವಾಗಿ ನೀಡಲು ಚಿತ್ರಾನ್ನ ತಯಾರಿಸಲಾಗಿದ್ದು, ಅರ್ಚಕರು ಭಕ್ತರಿಗೆ ನೀಡಿದ್ದಾರೆ. ದೇವರ ಪ್ರಸಾದವನ್ನು ಶ್ರದ್ಧಾಭಕ್ತಿಯಿಂದ ತಿನ್ನುತ್ತಿದ್ದ ಹೈದರಾಬಾದ್‌ ಮೂಲದ ಹರೀಶ್ ರೆಡ್ಡಿ ಎಂಬ ಭಕ್ತರಿಗೆ ಮುೂಳೆಯ ಚೂರುಗಳು ಪತ್ತೆಯಾಗಿದೆ.

ಮೂಳೆಯ ಚೂರುಗಳನ್ನು ನೋಡಿರುವ ಭಕ್ತರು ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹರೀಶ್ ರೆಡ್ಡಿ ಅವರೇ ಆ ಪ್ರಸಾದದ ಸಾಕ್ಷಿ ಸಮೇತ ಹೋಗಿ ದೇವಸ್ಥಾನದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: VIDEO: ಮದುವೆ ಮನೆಯ ಊಟಕ್ಕೆ ತಟ್ಟೆ ಸಿಗದ ಸಿಟ್ಟು.. ಕಲ್ಯಾಣ ಮಂಟಪದಲ್ಲಿ ಮಾರಾಮಾರಿ; ಆಗಿದ್ದೇನು?

ಶ್ರೀಶೈಲ ಪ್ರಸಾದದಲ್ಲಿ ಮೂಳೆ ಸಿಕ್ಕಿರೋದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ಆದೇಶಿಸಿದೆ. ಈ ಘಟನೆ ಸಂಪೂರ್ಣ ಪರಿಶೀಲನೆ ನಡೆಸುವ ಭರವಸೆಯನ್ನು ನೀಡಲಾಗಿದೆ. ಪ್ರಸಾದದಲ್ಲಿ ಆಗಿರೋ ಈ ಪ್ರಮಾದದಿಂದ ಶ್ರೀಶೈಲ ದೇವಸ್ಥಾನದ ಅಡುಗೆ ಮನೆಯ ಶುಚಿತ್ವ ಇನ್ನು ಎಷ್ಟರ ಮಟ್ಟಿಗೆ ಇರಬಹುದು ಎಂದು ಭಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಪ್ರಸಿದ್ಧ ಶ್ರೀಶೈಲ ದೇವಸ್ಥಾನದ ಪ್ರಸಾದದಲ್ಲಿ ಮೂಳೆ ಪತ್ತೆ; ಭಕ್ತರು ಫುಲ್ ಶಾಕ್‌!

https://newsfirstlive.com/wp-content/uploads/2024/02/Srisailam-temple.jpg

Load More