Advertisment

ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಆರೋಪ; ಕಾರಿನಲ್ಲಿ ಹೋಗ್ತಿದ್ದವರನ್ನ ಅಡ್ಡಗಟ್ಟಿ ಪುಂಡಾಟ; ದೂರು ದಾಖಲು

author-image
admin
Updated On
ರಾಮನವಮಿ ಸಂಭ್ರಮದ ವೇಳೆ ಕಿರಿಕ್; ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ಮೂವರು ಅರೆಸ್ಟ್
Advertisment
  • ಜೈ ಶ್ರೀರಾಮ್ ಅಂತಾ ಯಾಕೆ ಕೂಗ್ತಿರಾ ಎಂದು ಪ್ರಶ್ನಿಸಿದ ಆರೋಪ
  • ಕಾರಿನಲ್ಲಿ ಹೋಗುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ದೂರು
  • ಮೂವರು ಯುವಕರು ಕಾರಿನಲ್ಲಿ ಹೋಗುವಾಗ ಅಸಲಿಗೆ ನಡೆದಿದ್ದೇನು?

ಬೆಂಗಳೂರು: ಶ್ರೀರಾಮನವಮಿ ಮುಗಿಸಿ ಕಾರಿನಲ್ಲಿ ಹೋಗುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಖುದ್ದು ಹಲ್ಲೆಗೆ ಒಳಗಾದ ಎನ್ನಲಾದ ಯುವಕರು ದೂರು ನೀಡಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Advertisment

ಕಾರಿನಲ್ಲಿ ಹೋಗ್ತಿದ್ದವರನ್ನ ಅಡ್ಡಗಟ್ಟಿದ ಯುವಕರು ಜೈ ಶ್ರೀರಾಮ್ ಎಂದು ಹೇಳಬೇಕಾ? ಎಂದು ಕಾರಿನಲ್ಲಿ ಇದ್ದವರಿಗೆ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಯುವಕರು ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡ್ತೀವಾ ಎಂದು ಪ್ರಶ್ನೆ ಮಾಡಿದ್ದಾರೆ. ಕಾರಿನಿಂದ ಇಳಿದು ಕೇಳಲು ಹೋಗಿದ್ದ ಯುವಕರಿಗೆ ಮತ್ತಿಬ್ಬರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

publive-image

ವಿದ್ಯಾರಣ್ಯಪುರದ ಬೆಟ್ಟಳ್ಳಿ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಅಡ್ಡಗಟ್ಟಿ ಪುಂಡಾಟ ಮಾಡಿದವರ ವಿರುದ್ಧ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ಯುವಕರು ದೂರು ನೀಡಿದ್ದಾರೆ. ಈ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್.. ನಗರತ್ ಪೇಟೆಗೆ ನುಗ್ಗಿದ ಬಿಜೆಪಿ, ಹಿಂದೂ ಸೇನೆ!

Advertisment

ಐಪಿಸಿ ಸೆಕ್ಷನ್ 295a, 298, 143, 147, 504, 324, 326, 149, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಯುವಕರು ಕಾರಿನಲ್ಲಿ ಹೋಗುವಾಗ ಬಾವುಟ ಹಿಡಿದುಕೊಂಡು ಜೈ ಶ್ರೀರಾಮ್ ಅಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಕಾರನ್ನು ಅಡ್ಡಗಟ್ಟಿದ್ದಾರೆ. ಜೈ ಶ್ರೀರಾಮ್ ಅಂತಾ ಯಾಕೆ ಕೂಗ್ತಿರಾ, ಓನ್ಲಿ ಅಲ್ಲಾ ಹು ಅಕ್ಬರ್ ಅನ್ನಿ ಅಂತಾ ಗಲಾಟೆ ಮಾಡಿದ್ದಾರೆ. ಕಾರಿನಲ್ಲಿದ್ದವರ ಮೇಲೆ ಇನ್ನೂ ಮೂರು ಜನರೊಂದಿಗೆ ಬಂದು ಒಟ್ಟು 5 ಜನ ಸೇರಿ ಹಲ್ಲೆ ಮಾಡಿದ್ದಾರೆ. ಕೇಸ್ ರಿಜಿಸ್ಟರ್ ಆಗಿದೆ. ಹಲ್ಲೆ ಮಾಡಿದವರ ಗುರುತು ಪತ್ತೆಯಾಗಿದೆ ಎಂದು ಡಿಸಿಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment