newsfirstkannada.com

ಕಾಮುಕನ ಕಾಟಕ್ಕೆ ಬೇಸತ್ತು ವಿಷ ಸೇವಿಸಿದ ಬಡ ಕುಟುಂಬ.. ಇಬ್ಬರು ಸಾವು! ಏನಿದು ಸ್ಟೋರಿ?

Share :

Published June 10, 2024 at 10:21pm

  ಪೊಲೀಸರಿಂದ ಸಿಗದ ನ್ಯಾಯ.. ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

  ಬಾಲಕಿ ಆತ್ಮಹತ್ಯೆಗೂ ಮೊದಲೇ ಬರೆದಿಟ್ಟಿರುವ ಡೆತ್​ನೋಟ್ ಸಿಕ್ಕಿದೆ

  ಪೊಲೀಸರ ನಿರ್ಲಕ್ಷ್ಯದಿಂದಲೇ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತಾ?

ಮೈಸೂರು: ಇತ್ತೀಚೆಗೆ ಸಮಾಜದಲ್ಲಿ ಹೆಣ್ಣುಮಕ್ಕಳು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಚಯಸ್ಥ ಅಂತ ಸಲುಗೆ ಕೊಟ್ರೆ ಪಾಪಿಯೊಬ್ಬ ಅಪ್ರಾಪ್ತ ಬಾಲಕಿಯ ಜೀವನಕ್ಕೆ ಕೊಳ್ಳಿ ಇಟ್ಟಿದ್ದಾನೆ. ನ್ಯಾಯ ಸಿಗದಿದ್ದಕ್ಕೆ ಅಪ್ರಾಪ್ತೆ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ. ಆ ಪೈಕಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ಹೆಣ್ಣುಮಕ್ಕಳೇ ಹುಷಾರ್​. ಪುರುಷರನ್ನು ನಂಬುವ ಮುನ್ನ ಎಚ್ಚರವಾಗಿರಿ. ಈ ಸುದ್ದಿಯಲ್ಲಿ ಬರುವ ವ್ಯಕ್ತಿ ಅಮಾಯಕನಂತೆ ಕಂಡರು ಖತರ್ನಾಕ್ ಕೆಲಸ ಮಡಿದ್ದಾನೆ. ಇವನು ಅಂತಿಂಥಾ ಖತರ್ನಾಕ್ ಅಲ್ಲ ಕಣ್ರಿ.. ಹೆಣ್ಣುಬಾಕ. ಒಬ್ಬಳು ಅಪ್ರಾಪ್ತೆ ಬಾಳಲ್ಲಿ ಆಡಬಾರದ ಆಟವಾಡಿ ಇಡೀ ಕುಟುಂಬದ ಖುಷಿಯನ್ನೇ ಕಿತ್ತುಕೊಂಡಿದ್ದಾನೆ.

ಇದನ್ನೂ ಓದಿ: ಮಕ್ಕಳು ಮಾಡಿಕೊಳ್ಳೋ ವಿಚಾರಕ್ಕೆ ಡಿವೋರ್ಸ್​ ಆಯ್ತಾ? ಈ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ಅಪ್ರಾಪ್ತೆಯ ನಗ್ನ ಚಿತ್ರ ಮಾಡಿ ಬೆದರಿಸುತ್ತಿದ್ದ ಪಾಪಿ

ಅಂದಾಗೆ ಪಾಪಿ ಹೆಸರು ಲೋಕೇಶ್. ಮೈಸೂರಿನ ಬೀರ್ನಳ್ಳಿ ನಿವಾಸಿ. ಲೋಕೇಶನಿಗೂ ಅಪ್ರಾಪ್ತೆಗೂ ಕೆ.ಆರ್. ನಗರದ ಕಾಲೇಜಿಗೆ ಹೋಗಿ ಬರುವಾಗ ಪರಿಚಯವಾಗಿತ್ತು. ಬೈಕ್​ನಲ್ಲಿ ಬರುತ್ತಿದ್ರಿಂದ ಬಾಲಕಿಯನ್ನ ಊರಿಗೆ ಡ್ರಾಪ್ ಮಾಡ್ತಿದ್ದ. ಸಲುಗೆ ಬೆಳೆದ ಮೇಲೆ ಲೋಕೇಶ್ ತನ್ನ ಅಸಲಿಯತ್ತನ್ನೂ ಪ್ರದರ್ಶಿಸಿದ್ದ. ಅಪ್ರಾಪ್ತೆ ಜೊತೆಯಿದ್ದ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಮಾಡೋಕೆ ಶುರುಮಾಡಿದ್ದ. ಕಾರಿನಲ್ಲಿ ಬಂದು ಅಡ್ಡಗಟ್ಟಿ ಬೆದರಿಕೆಯನ್ನೂ ಹಾಕಿದ್ದ. ಆರೋಪಿಯ ಉಪಟಳ ಜಾಸ್ತಿಯಾಗ್ತಿದ್ದಂತೆ ಬಾಲಕಿ, ಆತನ ಮೊಬೈಲ್ ಕಸಿದು ಕಲ್ಲಿಂದ ಜಜ್ಜಿ ಹಾಕಿದ್ದಳು. ಆಗ ಮನೆ ಬಾಗಿಲಿಗೆ ಬಂದು ರಂಪ ಮಾಡಿದ್ದ. ಬಾಲಕಿಯನ್ನ ಕುಟುಂಬಸ್ಥರು ವಿಚಾರಿಸಿದಾಗ ಎಲ್ಲ ವಿಚಾರ ಬಯಲಿಗೆ ಬಂದಿತ್ತು. ಇದರಿಂದ ನೊಂದ ಕುಟುಂಬ ಕೆಟ್ಟ ದಾರಿ ಹಿಡಿದಿತ್ತು.

ಇದನ್ನೂ ಓದಿ: ಮೂರನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?

ಇನ್ನು ಆರೋಪಿಯ ಎಲ್ಲ ವಿಚಾರವನ್ನು ಅಪ್ರಾಪ್ತೆ ಕುಟುಂಬ ತಿಳಿಯುತ್ತಿದ್ದಂತೆ ಈ ಬಗ್ಗೆ ಪೊಲೀಸರ ಮೊರೆ ಹೋಗಿದ್ರು. ಆದ್ರೆ ಪೊಲೀಸರು ಎಫ್​ಐಆರ್ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ನ್ಯಾಯ ಸಿಗದಿದ್ದಕ್ಕೆ ಹಾಗೂ ಮರ್ಯಾದೆಗೆ ಅಂಜಿ ಅಪ್ರಾಪ್ತೆಯ ಇಡೀ ಕುಟುಂಬದ ನಾಲ್ವರು ಸದಸ್ಯರು ಮಹದೇಶ್ವರ ಬೆಟ್ಟದ ತಾಳಬೆಟ್ಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದುರದೃಷ್ಟವಶಾತ್ ನಾಲ್ವರಲ್ಲಿ ಸಂತ್ರಸ್ತೆ ತಾಯಿ ಹಾಗೂ ತಾತ ಸಾವನ್ನಪ್ಪಿದ್ರೆ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಅದರಲ್ಲಿ ಬಾಲಕಿ ಸಾವು, ಬುದಕಿನ ನಡುವೆ ಹೋರಾಡುತ್ತಿದ್ದಾಳೆ. ಅಪ್ರಾಪ್ತೆಯ ಅಜ್ಜಿ ಆರೋಪಿಯನ್ನು ಸುಮ್ಮನೆ ಬಿಡಬೇಡಿ ಅಂತ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್‌, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

ಸರ್ಕಲ್ ಇನ್ಸ್​ಪೆಕ್ಟರ್​ ಸೇರಿ 3 ಅಧಿಕಾರಿಗಳು ಅಮಾನತು

ನ್ಯಾಯಕ್ಕಾಗಿ ಆಗ್ರಹಿಸಿ ರಸ್ತೆಯಲ್ಲಿ ಶವವಿಟ್ಟು ಚಂದಗಾಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಪೊಲೀಸರ ನಿರ್ಲಕ್ಷ್ಯದಿಂದಲೇ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಹೀಗಾಗಿ ಇನ್ಸ್​ಪೆಕ್ಟರ್ ಸಂತೋಷ್, ಎಎಸ್​ಐ ಗಿರೀಶ್ ಹಾಗೂ ಹೆಡ್​ ಕಾನ್ಸ್​ಟೇಬಲ್ ರಾಘವೇಂದ್ರರನ್ನ ಅಮಾನತು ಮಾಡಲಾಗಿದೆ.

ಸದ್ಯ ಅಪ್ರಾಪ್ತೆಯ ಜೀವನದಲ್ಲಿ ಆಟವಾಡಿದ ಪಾಪಿ ಲೋಕೇಶನನ್ನು ಮಳವಳ್ಳಿಯ ಸಂಬಂಧಿಕರ ಮನೆಯಲ್ಲಿ ಪೊಲೀಸ್ರು ಬಂಧಿಸಿದ್ದಾರೆ. SC/ST ದೌರ್ಜನ್ಯ ಕಾಯ್ದೆ, ಪೋಕ್ಸೋ ಕೇಸ್​ ಸೇರಿದಂತೆ ಹಲವು ಸೆಕ್ಷನ್ ಅಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಮುಕನ ಕಾಟಕ್ಕೆ ಬೇಸತ್ತು ವಿಷ ಸೇವಿಸಿದ ಬಡ ಕುಟುಂಬ.. ಇಬ್ಬರು ಸಾವು! ಏನಿದು ಸ್ಟೋರಿ?

https://newsfirstlive.com/wp-content/uploads/2024/06/MYS_FAMILY_1.jpg

Load More