Advertisment

ದರ್ಶನ್​​ ಗ್ಯಾಂಗ್​​ ಕೊಲೆ ಕೇಸಲ್ಲಿ ಸ್ಟಾರ್​ ಡೈರೆಕ್ಟರ್​​ಗೂ ಕಂಟಕ; ಪವಿತ್ರಾ ಆಪ್ತೆ ಬಗ್ಗೆ ಕೇಳಿ ಪೊಲೀಸ್ರೇ ಶಾಕ್​

author-image
Veena Gangani
Updated On
ದರ್ಶನ್​​ ಗ್ಯಾಂಗ್​​ ಕೊಲೆ ಕೇಸಲ್ಲಿ ಸ್ಟಾರ್​ ಡೈರೆಕ್ಟರ್​​ಗೂ ಕಂಟಕ; ಪವಿತ್ರಾ ಆಪ್ತೆ ಬಗ್ಗೆ ಕೇಳಿ ಪೊಲೀಸ್ರೇ ಶಾಕ್​
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಗ್ಯಾಂಗ್​ ಜೈಲಿಗೆ
  • ಆ ಖ್ಯಾತ ನಿರ್ದೇಶಕನಿಗೆ ನೋಟಿಸ್​ ನೀಡಲು ಪೊಲೀಸರು ಸಿದ್ಧತೆ!
  • ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್​ ಮತ್ಯಾರಿಗೆಲ್ಲಾ ಉರುಳಾಗುತ್ತೆ?

ಡೆವಿಲ್‌ ಗ್ಯಾಂಗ್‌ನ ರಕ್ತಸಿಕ್ತ ಇತಿಹಾಸದಲ್ಲಿ ಹೊಸ ಪಾತ್ರಗಳ ಪರಿಚಯ ಆಗುತ್ತಲೇ ಇದೆ. ಅದರಲ್ಲಿ ಹೈಲೈಟ್ ಆದವಳೇ ಸಮತಾ. ಪವಿತ್ರಾ ಗೌಡ ಪೂರ್ವಪರ ತಿಳಿದಿರೋ ಈಕೆಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನ ಮತ್ತೊಬ್ಬ ಆರೋಪಿ ಜೊತೆ ಲಿಂಕ್ ಇರೋ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಖ್ಯಾತ ನಿರ್ದೇಶಕರೊಬ್ಬರ ಮೇಲೂ ಡಿ ಗ್ಯಾಂಗ್‌ನ ಕಪ್ಪುಛಾಯೆ ಬಿದ್ದಿದೆ.

Advertisment

publive-image

ಇದನ್ನೂ ಓದಿ: ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರು ಸಂಗ್ರಹಿಸದಿರೋ ಸಾಕ್ಷ್ಯಗಳಿಲ್ಲ. ಹತ್ಯೆಗೆ ಸಂಬಂದಿಸಿದಂತೆ ವಿಚಾರಣೆ ಮಾಡದಿರೋ ವ್ಯಕ್ತಿಗಳಿಲ್ಲ. ಶಂಕೆ ವ್ಯಕ್ತವಾದ್ರೆ ಸಾಕು ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯೋದೆ ಪೊಲೀಸರ ಸದ್ಯದ ಕೆಲಸ. ಅದ್ರಂತೆ ಸಮತಾನ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಇದೀಗ ಶಾಕಿಂಗ್ ವಿಚಾರವೊಂದು ತಿಳಿದಂತಿದೆ.

ಎಲೆಕ್ಟ್ರಿಕ್ ಶಾಕ್‌ ಡಿವೈಸ್‌ಗೆ 3 ಸಾವಿರ ಕೊಟ್ಟಿದ್ಲಾ ಸಮತಾ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ಹೆಚ್ಚು ಹರಿದಾಡ್ತಿರೋ ಹೆಸರು ಸಮತಾ. ಈಕೆ ಪವಿತ್ರಾ ಗೌಡಳ ಸ್ನೇಹಿತೆ. ರೆಡ್‌ ಕಾರ್ಪೆಟ್‌ ಸ್ಟುಡಿಯೋ ನೋಡಿಕೊಳ್ತಿದ್ದವಳು ಈ ಸಮತಾ. ಈಗಾಗಲೇ ಒಂದು ಸುತ್ತು ಈಕೆಗೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದ್ರೀಗ ಈಕೆ ಮೇಲೂ ಪೊಲೀಸರಿಗೆ ಡೌಟ್‌ ಶುರುವಾಗಿದೆ.

Advertisment

publive-image

ಸಮತಾ ‘ಶಾಕ್‌’ ಸೀಕ್ರೆಟ್‌!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿತನಾಗಿರೋ 8ನೇ ಆರೋಪಿ ಧನರಾಜ್‌ ಎಂಬಾತನಿಗೂ ಈಕೆಗೂ ಲಿಂಕ್ ಇರೋ ಅನುಮಾನವಿದೆ. ಆರೋಪಿ ಧನರಾಜ್‌ಗೆ ಈಕೆ 3 ಸಾವಿರ ರೂಪಾಯಿ ಹಣ ಕಳುಹಿಸಿದ್ಲು ಎಂಬ ಮಾಹಿತಿ ಇದೆ. ಇದಿಷ್ಟೇ ಅಲ್ಲ. ಸಮತಾ ಕೊಟ್ಟಿದ್ದ 3 ಸಾವಿರ ರೂಪಾಯಿಯಲ್ಲೇ ಆರೋಪಿ ಧನರಾಜ್ ಎಲೆಕ್ಟ್ರಿಕ್ ಶಾಕ್ ಡಿವೈಸ್ ಖರೀದಿ ಮಾಡಿದ್ದ ಎನ್ನಲಾಗ್ತಿದೆ. ಇದೇ ಶಾಕ್ ಡಿವೈಸ್‌ನಿಂದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಮರ್ಡರ್ ಮಾಡಲಾಗಿದ್ದು, ಧನರಾಜ್‌ ವಿಚಾರಕ್ಕೆ ಸಮತಾಗೂ ಪೊಲೀಸರಿಂದ ವಿಚಾರಣೆ ನಡೆದಿದೆ.

publive-image

ಇನ್ನೂ, ಬಿಜೆಪಿ ಶಾಸಕರೊಬ್ಬರ ಕಾರು ಚಾಲಕ ಕಾರ್ತಿಕ್‌ ಕಾರ್ತಿಕ್ ಪುರೋಹಿತ್‌ಗೂ ಕೇಸ್‌ನ ಲಿಂಗ್‌ ರೇಣುಕಾಸ್ವಾಮಿ ಮೃತದೇಹ ಬಿಸಾಡಿದ ಬಳಿಕ ಆರೋಪಿ ಪ್ರದೋಶ್‌ನ ತನ್ನದೇ ಕಾರಿನಲ್ಲಿ ಗಿರಿನಗರಕ್ಕೆ ಕರ್ಕೊಂಡು ಬಂದಿದ್ದ ಅನ್ನೋ ಮಾಹಿತಿ ಲಭ್ಯವಾಗಿತ್ತು. ಇದೀಗ ಪ್ರದೋಶ್‌ನ ಕರೆತಂದಿದ್ದಲ್ಲದೇ ಎರಡು ದಿನಗಳ ಕಾಲ ಆರೋಪಿಗೆ ಆಶ್ರಯ ಕೊಟ್ಟಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈತನಿಗೂ ಕಳೆದ ಶನಿವಾರ ವಿಚಾರಣೆ ನಡೆದಿತ್ತು. ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಆದ್ರೆ, ಕಾರ್ತಿಕ್ ವಿಚಾರಣೆಗೆ ಗೈರಾಗಿದ್ದಾನೆ.

publive-image

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಖ್ಯಾತ ನಿರ್ದೇಶಕನಿಗೂ ಕಂಟಕವಾಗುವ ಸಾಧ್ಯತೆ ಇದೆ. ಕೊಲೆ ಬಳಿಕ ದರ್ಶನ್‌, ನಿರ್ದೇಶಕರೊಬ್ಬರನ್ನ ಫೋನ್​ ಮೂಲಕ ಸಂಪರ್ಕಿಸಿ​ ಮಾತುಕತೆ ನಡೆಸಿರೋ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಖ್ಯಾತ ನಿರ್ದೇಶಕನಿಗೆ ನೋಟಿಸ್​ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಡೆವಿಲ್ ಗ್ಯಾಂಗ್ ಕೃತ್ಯದಲ್ಲಿ ಯಾರ ಮೇಲೆ ಶಂಕೆ ಇದೆಯೋ ಅವರಿಗೆಲ್ಲಾ ವಿಚಾರಣೆ ನಡೀತಿದೆ. ಹೀಗಾಗಿ ಈ ಕೊಲೆ ಕೇಸ್‌ ಮತ್ಯಾರಿಗೆಲ್ಲಾ ಉರುಳಾಗುತ್ತೋ? ಕಾದುನೋಡಬೇಕಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment