newsfirstkannada.com

ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

Share :

Published July 8, 2024 at 2:44pm

  ಕನ್ನಡದಿಂದ ಬೆಳೆದ ನಟರು ಪ್ಯಾನ್ ಇಂಡಿಯಾ ಮೂವಿ ಎನ್ನುತ್ತಿದ್ದಾರೆ

  ಕನ್ನಡದವ್ರಲ್ಲ, ಕನ್ನಡ ಸಿನಿಮಾಗಳೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಈಗ

  ದರ್ಶನ್ ಮಾಸ್ ಹೀರೋ, ಅವರಿಗೆ ರಾಜ್ಯಾದ್ಯಂತ ಫ್ಯಾನ್ಸ್ ಇದ್ದಾರೆ

ಬೆಂಗಳೂರು: ನಟ ದರ್ಶನ್ ಅವರು ಜೈಲಿನಲ್ಲಿದ್ರೂ ಅವರು ಅಭಿನಯ ಮಾಡಿರುವ ಸಿನಿಮಾಗಳು ಭಾರೀ ಸದ್ದು ಮಾಡುತ್ತಿವೆ. ಇದೀಗ ಅವರು ನಟಿಸಿದ್ದ ಶಾಸ್ತ್ರಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಕನ್ನಡ ಸಿನಿಮಾಗಳು ಯಾವುದು ಥಿಯೇಟರ್​ಗಳಿಗೆ ಬರುತ್ತಿಲ್ಲ. ಆ ಕಾರಣಕ್ಕಾಗಿ ಶಾಸ್ತ್ರಿ ಮೂವಿಯನ್ನು ರೀ ರಿಲೀಸ್ ಮಾಡಲಾಗುತ್ತಿದೆ ಎಂದು ಕನ್ನಡ ಸಿನಿಮಾ ವಿತರಕ ಶಂಕರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಮೊಬೈಲ್​ ವಾಲ್​ಪೇಪರ್​ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!

ಶಾಸ್ತ್ರಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವ ಕುರಿತು ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಶಂಕರ್, ಕನ್ನಡದಿಂದಲೇ ಬೆಳೆದ ನಟರು ಪ್ಯಾನ್ ಇಂಡಿಯಾ ಮೂವಿ ಅಂತ ಹೋಗುತ್ತಿದ್ದಾರೆ. ಕನ್ನಡ ಚಿತ್ರಗಳ ಮೇಲೆ ಅಭಿಮಾನ ಇಲ್ಲ. ದರ್ಶನ್ ಮಾಸ್ ಹೀರೋ. ಅವರಿಗೆ ರಾಜ್ಯಾದ್ಯಂತ ಫ್ಯಾನ್ಸ್ ಇದ್ದಾರೆ. ಕನ್ನಡ ಸಿನಿಮಾಗಳು ಯಾವುದು ಚಿತ್ರಮಂದಿರಕ್ಕೆ ಬರ್ತಿಲ್ಲ. ಆ ಕಾರಣಕ್ಕೆ ಶಾಸ್ತ್ರಿ ಚಿತ್ರವನ್ನು ರೀ-ರಿಲೀಸ್ ಮಾಡಲಾಗುತ್ತಿದೆ. ಕಾಟೇರ ರಿಲೀಸ್​ಗೂ ಮೊದಲು 80 ಥಿಯೇಟರ್​​ಗಳು ಮುಚ್ಚಿದ್ದವು. ಆದರೆ ಕಾಟೇರ ರಿಲೀಸ್ ಆದ ಮೇಲೆ ಎಲ್ಲ ಓಪನ್ ಆದವು. ಒಂದು ಥಿಯೇಟರ್​​ಗೆ 5 ಕೆಲಸದವರು ಎಂದರೆ 500- 600 ಜನರಿಗೆ ಕೆಲಸ ಸಿಕ್ಕಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?

ಶಾಸ್ತ್ರಿ ಮೂವಿ ಮಾಸ್ ಸಿನಿಮಾ. ಒಳ್ಳೆ ಸಿನಿಮಾ. ಜನ ಥಿಯೇಟರ್​ಗೆ ಬಂದೇ ಬರುತ್ತಾರೆ. ದರ್ಶನ್ ಅವರ ವೈಯಕ್ತಿಕ ವಿಚಾರ ಇದಕ್ಕೆ ಸಂಬಂಧಿಸಿಲ್ಲ. ಈ ಸಿನಿಮಾವನ್ನು ಬಿಡುಗಡೆ ಮಾಡುವುದು ಕಮರ್ಷಿಯಲ್ ಉದ್ದೇಶ ಅಷ್ಟೇ. ನಟ ಉಪೇಂದ್ರ ಅವರ ‘ಎ’ ಸಿನಿಮಾ ರೀ ರಿಲೀಸ್ ಮಾಡಿದ್ದು ನಾನೇ. ಬೆಳಗ್ಗೆ 6 ಗಂಟೆ ಶೋ ಹೌಸ್​ಫುಲ್ ಆಗಿತ್ತು. ಕನ್ನಡ ಸಿನಿಮಾ ಅಂದ್ರೆ ಜನ ಬಂದು ನೋಡೇ ನೋಡ್ತಾರೆ. ಇದರಿಂದ ಒಂದೆರಡು ಕಾಸು ಆಗುತ್ತೆ ಅನ್ನೋದಷ್ಟೇ ಇಲ್ಲಿನ ಪ್ರಮುಖ ಉದ್ದೇಶ ಎಂದು ಶಂಕರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

https://newsfirstlive.com/wp-content/uploads/2024/07/DARSHAN_SHASTRI.jpg

Load More