newsfirstkannada.com

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?

Share :

Published July 8, 2024 at 11:35am

  ಲೈಫ್ ಅನ್ನ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದೇ ಪ್ರತಿಕ್ಷಣ ಸಂಭ್ರಮಿಸ್ತಾರೆ

  ಹಾರ್ದಿಕ್ ಪಾಂಡ್ಯ ವೆಸ್ಟ್​ ಇಂಡೀಸ್​ ಪ್ಲೇಯರ್ಸ್​ ಅಂತ ಮಾತನಾಡುತ್ತಾರಾ?

  ಪಾಂಡ್ಯ ವಿಂಡೀಸ್​ ಆಟಗಾರರಂತೆ ಬೌಲಿಂಗ್, ಬ್ಯಾಟಿಂಗ್ 2 ಮಾಡುತ್ತಾರೆ

ವೆಸ್ಟ್ ​ಇಂಡೀಸ್​​ ಆಟಗಾರರ ಅಬ್ಬರದ ಆಟ, ಮಸ್ತುಕಟ್ಟಾದ ದೇಹ, ಗಟ್ಟಿಯಾದ ಧ್ವನಿಗೆ ಫಿದಾ ಆಗದೋರಿಲ್ಲ. ಇಂತಹ ವಿಂಡೀಸ್ ಪ್ರಭಾವಕ್ಕೆ ಒಳಗಾದ ಆಟಗಾರನೊಬ್ಬ ಟೀಮ್ ಇಂಡಿಯಾದಲ್ಲಿದ್ದಾನೆ. ಈತ ಹುಟ್ಟಿದ್ದು, ಬೆಳೆದಿದ್ದು ಇಲ್ಲೇನೆ ಆದ್ರೂ ಲೈಫ್​ ಸ್ಟೈಲ್ ಮಾತ್ರ ದ್ವೀಪರಾಷ್ಟ್ರದ ಕೆರಿಬಿಯನ್ನರನ್ನ ನೆನಪಿಸುತ್ತೆ. ಅಷ್ಟಕ್ಕೂ ರೋಹಿತ್​​ ಪಡೆಯಲ್ಲಿರೋ ಆ ವಿಂಡೀಸ್​ಮ್ಯಾನ್​ ಬೇರಾರೂ ಅಲ್ಲ. ಒನ್​ ಅಂಡ್ ಒನ್ಲೀ ಹಾರ್ದಿಕ್​​ ಪಾಂಡ್ಯ.

ಹೃದಯ ಗುಜರಾತಿ, ಆದರೆ ಆತ್ಮ ಮಾತ್ರ ಕೆರಿಬಿಯನ್​​​..!

T20 ವಿಶ್ವಕಪ್​​ ವಿನ್ನಿಂಗ್ ಹೀರೋ ಸ್ಟಾರ್ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಟಾಕ್ ಆಫ್​ ಟೌನ್ ಆಗಿದ್ದಾರೆ. ಈ ಬರೋಡಾ ಬಾಯ್​ ಹುಟ್ಟಿದ್ದು, ಬೆಳೆದಿದ್ದು, ಯಶಸ್ಸು ಕಂಡಿದ್ದೆಲ್ಲ ಭಾರತದಲ್ಲೇ. ಹಾರ್ದಿಕ್​​ ಫ್ಯಾಮಿಲಿಗೂ ವೆಸ್ಟ್​ ಇಂಡೀಸ್​​​ಗೂ ಯಾವುದೇ ಕನೆಕ್ಷನ್ ಇಲ್ಲ. ಆದರೂ ಹಾರ್ದಿಕ್​​​​ ಭಾರತಕ್ಕಿಂತ ಕೆರಿಬಿಯನ್ ಸಂಸ್ಕೃತಿಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಇವರ ಹೃದಯ ಗುಜರಾತಿ ಆದ್ರೂ ಆತ್ಮ ಮಾತ್ರ ಕೆರಿಬಿಯನ್​​​. ಅವರ ಲೈಫ್​ ಸ್ಟೈಲ್​​​, ಮಾತನಾಡುವ ರೀತಿ ಥೇಟ್​ ದ್ವೀಪರಾಷ್ಟ್ರದ ಜನರಿನಂತೆ. ಹಾರ್ದಿಕ್ ಮೇಲೆ ವೆಸ್ಟ್​ ಇಂಡೀಸ್ ಸಂಸ್ಕೃತಿಯ​​​ ಪ್ರಭಾವ ಎಷ್ಟಿದೆ ಅನ್ನೋದನ್ನ ಒಂದೊಂದಾಗಿ ಇಲ್ಲಿ ಕೊಡಲಾಗಿದೆ.

ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್​ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!

ಕಾರಣ ನಂ.1- ಪಾರ್ಟಿ ಪ್ರಿಯ

ಹಾರ್ದಿಕ್ ಪಾಂಡ್ಯ ಬೇಸಿಕಲಿ ಜಾಲಿ ಪರ್ಸನ್​​​. ಪಾರ್ಟಿಯನ್ನ ಹೆಚ್ಚಾಗಿ ಪ್ರೀತಿಸ್ತಾರೆ. ಬಿಡುವು ಸಿಕ್ರೆ ಸಾಕು ಪಾರ್ಟಿ ಮಾಡ್ತಾರೆ. ಡ್ಯಾನ್ಸ್ ಮಾಡಿ ಡ್ರಿಂಕ್ ಸೇವನೆ ಮಾಡ್ತಾ ಮಸ್ತಿ ಮಾಡ್ತಾರೆ. ಬಹುತೇಕ ಆಟಗಾರರೇ ಹೇಳುವಂತೆ ಪಾರ್ಟಿ ಅಂದ್ರೆ ಅವರ ಡೋರ್​​​​​​​ ಸದಾ ಓಪನ್ ಆಗಿರುತ್ತಂತೆ. ಇಷ್ಟಪಟ್ಟಂತೆ ಬದುಕಲು ಹಿಂಜರಿಯಲ್ಲ ಹಾಗೂ ಯಾವುದೇ ನಿರ್ಬಂಧಗಳಿಲ್ಲದೇ ಜೀವನವನ್ನ ಎಂಜಾಯ್ ಮಾಡ್ತಾರೆ. ಇದಕ್ಕೆ ಕೆರಿಬಿಯನ್​ INFLUENCE ಕಾರಣ ಅಂದ್ರು ತಪ್ಪಲ್ಲ.

ಕಾರಣ ನಂ.2- ಕೆರಿಬಿಯನ್ನರಂತೆ ಕೇಶವಿನ್ಯಾಸ

ಹಾರ್ದಿಕ್​​​ ಪಾಂಡ್ಯ ವೆಸ್ಟ್​ ಇಂಡೀಸ್ ಆಟಗಾರರಂತೆ ಭಿನ್ನ-ವಿಭಿನ್ನ ಹೇರ್​​ಸ್ಟೈಲ್​ಗೆ ಹೆಸರುವಾಸಿ. ಸರಣಿಯೊಂದು ಹೇರ್​ಸ್ಟೈಲ್​​​, ಅದಕ್ಕೆ ಬಗೆಬಗೆಯ ಕಲರ್​​​ ಹಾಕಿಸಿಕೊಳ್ತಾರೆ. ಇದಕ್ಕೆ ಕೆರಿಬಿಯನ್​​​ ಟ್ರೆಂಡ್ಸ್, ​​ಕಾರಣ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಕೇಶ ವಿನ್ಯಾಸದ ಕಾರಣಕ್ಕಾಗಿ ಹಾರ್ದಿಕ್​ರನ್ನ ಟೀಮ್ ಇಂಡಿಯಾದ ಆಂಡ್ರೆ ರಸೆಲ್ ಅನ್ನೋ ಮಾತಿದೆ.

ಕಾರಣ ನಂ.3- ಬದುಕಿನ ಮಂತ್ರ

ಹಾರ್ದಿಕ್​​ ಪಾಂಡ್ಯ ಬದುಕಿನ ಮಂತ್ರ ಹಾಗೂ ಕೆರಿಬಿಯನ್ನರ ಬದುಕಿನ ಮಂತ್ರವೂ ಎರಡೂ ಒಂದೇ ಆಗಿದೆ. ಫಿಲಾಸಫಿಗೆ ಹೆಚ್ಚು ಜೋತು ಬೀಳಲ್ಲ. ಲೈಫ್ ಅನ್ನ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದೇ ಪ್ರತಿ ಮೂಮೆಂಟ್​​ ಅನ್ನು ಸಂಭ್ರಮಿಸ್ತಾರೆ. ಆನ್​ ಹಾಗೂ ಆಫ್ ದಿ ಫೀಲ್ಡ್​ನಲ್ಲಿ ಎಷ್ಟೇ ಕಷ್ಟವಿದ್ರೂ ಮೊಗದಲ್ಲಿ ಸದಾ ನಗುವು ತುಂಬಿಕೊಂಡಿರುತ್ತೆ.

ಕಾರಣ ನಂ.4- ಗಟ್ಟಿಯಾದ ಧ್ವನಿ

ಇದನ್ನು ಎಲ್ಲರೂ ಒಪ್ಪದಿರಬಹುದು. ಆದರೆ ಹಾರ್ದಿಕ್​ ಪಾಂಡ್ಯ ಇಂಗ್ಲೀಷ್ ಉಚ್ಛಾರಣೆ​​​​, ವೆಸ್ಟ್​​ಇಂಡೀಸ್ ಆಟಗಾರರನ್ನೂ ಹೋಲುತ್ತೆ. ಅವರ ಗಟ್ಟಿಯಾದ ಧ್ವನಿ ಪ್ರತಿಯೊಬ್ಬರನ್ನ ಆಕರ್ಷಿಸುವಂತೆ ಮಾಡುತ್ತೆ.

ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?

ಕಾರಣ ನಂ.5- ಆಟದ ವೈಖರಿ

ಹಾರ್ದಿಕ್ ಹಾಗೂ ವೆಸ್ಟ್​ ಇಂಡೀಸ್​ ಆಟಗಾರರ ಆಟದ ವೈಖರಿಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ಇದುವರೆಗೆ ಪಾಂಡ್ಯಗೆ ಬದಲಿ ಆಟಗಾರನಾಗಿ ಭಾರತಕ್ಕೆ ಪೇಸ್​​ ಆಲ್​ರೌಂಡರ್ ಸಿಕ್ಕಿಲ್ಲ. ಇಂತಹ ಆಟಗಾರರು ಸಿಗೋದು ಬಹಳ ವಿರಳ. ವಿಂಡೀಸ್​ ತಂಡದಲ್ಲಿ ಸತತವಾಗಿ ಬೌಲಿಂಗ್ ಮಾಡೋದ್ರ ಜೊತೆ ಬ್ಯಾಟಿಂಗ್​​ ಮಾಡುವ ಆಟಗಾರರು ಇರುತ್ತಾರೆ. ಪಾಂಡ್ಯ ಕೂಡ ಥೇಟ್​ ಅದೇ ಥರಾ.

ಇದನ್ನೂ ಓದಿ: ಈ ಜಿಲ್ಲೆಯ ಶಾಲಾ‌-ಕಾಲೇಜುಗಳಿಗೆ ರಜೆ ಘೋಷಣೆ.. ಧಾರಾಕಾರ ಮಳೆ, ಪ್ರವಾಸಿಗರಿಗೆ ಎಚ್ಚರಿಕೆ..!

ಈಗ ನಿಮಗೆ ಅರ್ಥ ಆಗಿರಬೇಕು ಅಲ್ವಾ ? ನಾವ್ಯಾಕೆ ಆರಂಭದಲ್ಲಿ ಇಂಡಿಯನ್ ಹಾರ್ದಿಕ್ ಅಲ್ಲ, ಕರಿಬಿಯನ್​​ ಹಾರ್ದಿಕ್​​ ಎಂದು ಹೇಳಿದ್ವಿ ಅಂತ. ಏನೇ ಹೇಳಿ ಹಾರ್ದಿಕ್​​ ಓರ್ವ ಅಪ್ಪಟ ಭಾರತೀಯ. ಅವರ ಲೈಫ್​​​​ ಸ್ಟೈಲ್ ಮೇಲೆ ಯಾವ ದೇಶದ ಸಂಸ್ಕೃತಿ ಆದ್ರೂ ಪ್ರಭಾವ ಬೀರಲಿ. ಅದು ಅವರ ವೈಯಕ್ತಿಕ ವಿಚಾರ. ಭಾರತ ತಂಡದ ಪ್ರತಿನಿಧಿಯಾಗಿ ತಂಡದ ಗೆಲುವಿಗೆ ಕಾಣಿಕೆ ನೀಡ್ತಿರೋದು ಹೆಮ್ಮೆಯ ವಿಚಾರವೇ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?

https://newsfirstlive.com/wp-content/uploads/2024/07/HARDHIK_PANDYA-4.jpg

Load More