newsfirstkannada.com

ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್​ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!

Share :

Published July 8, 2024 at 7:47am

Update July 8, 2024 at 7:48am

  ಮಹಿಳೆ ಮೃತದೇಹ ಆಗುಂಬೆ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

  ಮಹಿಳೆ ಕೊಲೆಗೆ ಪಕ್ಕಾ ಸಿನಿಮಾ ಸ್ಟೈಲ್​​ನಲ್ಲೇ ಪ್ಲಾನ್, ಕ್ರೂರ ಹಂತಕ

  ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿದ್ದ ಓರ್ವ ಮಹಿಳೆ ಕೊಲೆ

ಅವರಿಬ್ಬರು ಪರಸ್ಪರ ಪರಿಚಯಸ್ಥರು ಮಾತ್ರವಲ್ಲ, ಸಂಬಂಧಿಕರು ಕೂಡ ಹೌದು. ಅವರ ನಡುವೆ ಸಹಜ ಸಲಿಗೆ ಕೂಡ ಇತ್ತು. ಇತ್ತೀಚಿಗೆ ನಡೆದ ಕೆಲವು ಘಟನೆಗಳು ಅವರಿಬ್ಬರ ನಡುವೆ ಕಂದಕವನ್ನು ಸೃಷ್ಟಿಸಿತ್ತು. ಈ ಕಂದಕವೇ ಇದೀಗ ಒಬ್ಬರ ಜೀವಕ್ಕೆ ತೊಂದರೆ ಕೊಟ್ಟು ಇನ್ನೂಬ್ಬ ಜೈಲು ಪಾಲಾಗಿದ್ದಾನೆ.

ಇದನ್ನೂ ಓದಿ: ಈ ಜಿಲ್ಲೆಯ ಶಾಲಾ‌-ಕಾಲೇಜುಗಳಿಗೆ ರಜೆ ಘೋಷಣೆ.. ಧಾರಾಕಾರ ಮಳೆ, ಪ್ರವಾಸಿಗರಿಗೆ ಎಚ್ಚರಿಕೆ..!

ಒಂದೆಡೆ ಜಡಿಮಳೆಯಲ್ಲೂ ಗುಡ್ಡದ ಮೇಲೆ ಮೃತದೇಹವನ್ನು ಪೊಲೀಸರು ಮಹಜರು ನಡೆಸುತ್ತಿದ್ದರು. ಮತ್ತೊಂದೆಡೆ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಥೇಟ್ ದೃಶ್ಯಂ ಚಲನಚಿತ್ರದ ತರಹ ಪ್ಲಾನ್ ಮಾಡಿದ್ದ ಖತರ್ನಾಕ್​ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?

ತೀರ್ಥಹಳ್ಳಿ ತಾಲೂಕಿನ ಹಸಿಮನೆ ಗ್ರಾಮದ ನಿವಾಸಿ ಪೂಜಾ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿದ್ದಳು. ಕಳೆದ ಜೂ.30ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದ ಪೂಜಾ ಏಕಾಏಕಿ ಕಾಣೆಯಾಗಿದ್ದಳು. ಮಗಳು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಪೂಜಾ ಪೋಷಕರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಆಗುಂಬೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್‌ ಕಂಪ್ಲೇಟ್‌ ಕೊಟ್ಟಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಿಳಿದಾಗ ಪೂಜಾಳ ಶವ ಆಗುಂಬೆಯ ದಟ್ಟ ಕಾನನದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೊಲೀಸರ ಜೊತೆಯಲ್ಲೇ ಇದ್ದ ಆರೋಪಿ ಮಣಿಕಂಠ

ದೂರು ದಾಖಲಾಗ್ತಿದ್ದಂತೆ ತನಿಖೆಗೆ ಇಳಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.. ಯಾಕಂದ್ರೆ ಆರೋಪಿಯೇ ಪೊಲೀಸರ ಜೊತೆ ಇದ್ದು, ತನಿಖೆಗೆ ಸಹಾಯ ಮಾಡುವ ರೀತಿ ಪೊಲೀಸರ ಚಲನವನದ ಮೇಲೆ ಹದ್ದಿನ ಕಣ್ಣಿಟ್ಟಿದ್ದ. ಪೂಜಾಳ ಕೊಲೆಗೆ ಪಕ್ಕಾ ಸಿನಿಮಾ ಸ್ಟೈಲ್​ನಲ್ಲೇ ಪ್ಲಾನ್​ ಮಾಡಿದ್ದ ಮಣಿಕಂಠ, ಪೊಲೀಸರ ದಿಕ್ಕು ತಪ್ಪಿಸಲು ಸುಳ್ಳಿನ ಕಥೆ ಹೇಳಿದ್ದ. ಒಂದು ಕೆಂಪು ಕಾರಿನಲ್ಲಿ ಯಾರದ್ದೋ ಜೊತೆಯಲ್ಲಿ ಇದ್ದ ಬಗ್ಗೆ ಸುಳ್ಳು ಕಥೆ ಕಟ್ಟಿ ಪೊಲೀಸರಿಗೆ ಯಾಮಾರಿಸಿದ್ದ.

ಕಾನನದ ಮರ್ಡರ್ ಮಿಸ್ಟರಿ

 • ಪೂಜಾಗೆ ನೀಡಿದ್ದ 40 ಸಾವಿರ ಹಣ ಕೊಡುವಂತೆ ಮೆಸೇಜ್
 • ಮೆಸೇಜ್​ ಮಾಡಿದ ಬಳಿಕ ಮೊಬೈಲ್​ ಸ್ವಿಚ್​ ಆಫ್​ ಮಾಡಿದ್ದ
 • ಮೊಬೈಲ್ ಆಫ್ ಮಾಡಿ ಚಾರ್ಜ್ ಹಾಕಿದ ಹಾಗೆ ಇಟ್ಟಿದ್ದ
 • ಕೊಲೆ‌ ಬಳಿಕವೂ ಆಕೆ ಮೊಬೈಲ್​ಗೆ ದುಡ್ಡು ನೀಡುವಂತೆ ಮೆಸೇಜ್
 • ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಪಕ್ಕಾ​ ಪ್ಲಾನ್​ ಮಾಡಿದ್ದ
 • ಕೊಲೆ ಮಾಡಿದ ಒಂದೇ ಗಂಟೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದ

ಆಗುಂಬೆಯಲ್ಲಿ ಯುವತಿಯ ಶವಸಿಕ್ಕ ಬಳಿಕ ಆಕೆಯ ಫೋನ್‌ ಕಾಲ್‌ ಲಿಸ್ಟ್‌ ತೆಗೆದು ಮಿಸ್ಸಿಂಗ್‌ ಆದ ಕೊನೆ ದಿನ ಯಾರೆಲ್ಲ ಕರೆ ಮಾಡಿದ್ದರು ಅವರನ್ನೆಲ್ಲ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋದವನು ಒಂದು ಸಿಡಿಆರ್​ನಿಂದ ತಗಲಾಕಿಕೊಂಡಿದ್ದಾನೆ. ಬಳಿಕ ಪೊಲೀಸ್​ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ತನಗೂ ಹಾಗೂ ಕೊಲೆಯಾದ ವಿವಾಹಿತೆ ಪೂಜಾಗೂ ಇದ್ದ ಹಣಕಾಸಿನ ವ್ಯವಹಾರ ಮತ್ತು ಸಂಬಂಧ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್

ಅವನ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇರಲಿಲ್ಲ. ಅವರ ಟೆಕ್ನಿಕಲ್ ಡಿಟೇಲ್ಸ್ ಎಲ್ಲ ಹುಡುಕಾಟ ಮಾಡಿದೆವು. ಇದರಲ್ಲಿ ಸಾಕಷ್ಟು ಜನರನ್ನ ಕರೆದು ವಿಚಾರಣೆ ಮಾಡಿ ಕಳಿಸಿದ್ದೇವು. ಆ ಮಹಿಳೆಯ ಸಂಬಂಧಿಕ ಮಣಿಕಂಠ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಆಗುಂಬೆಯ ಬೆಟ್ಟದ ಹಿಂದೆ ಬಿಸಾಕಿದ್ದನು.

ಮಿಥುನ್ ಕುಮಾರ್, ಎಸ್​​ಪಿ, ಶಿವಮೊಗ್ಗ

ದೃಶ್ಯಂ ಚಿತ್ರವನ್ನು ಹೋಲುವ ರೀತಿಯಲ್ಲೇ ಪೂಜಾಳ ಹತ್ಯೆ ನಡೆದಿದ್ದು, ಕೊನೆಗೂ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿ, ಜೈಲಿಗೆ ಕಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್​ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!

https://newsfirstlive.com/wp-content/uploads/2024/07/SMG_MURDER.jpg

Load More