newsfirstkannada.com

ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?

Share :

Published July 7, 2024 at 2:02pm

Update July 7, 2024 at 2:03pm

  ನಿನ್ನ ಹೆಸರಿಗೆ ಚ್ಯುತಿ ಬರಬಹುದೆಂದು ಫೆಬ್ರವರಿಯಲ್ಲೇ ದರ್ಶನ್​ಗೆ ಹೇಳಿದ್ದೆ

  ಚಾಲೆಂಜಿಂಗ್ ಸ್ಟಾರ್​ಗೆ ಯಾವಾಗಿನಿಂದ ರಾಜಾಯೋಗ ಕೂಡಿ ಬರುತ್ತದೆ.?

  ಅವರು 2 ವಾರ ಮಾತ್ರ ಎಳ್ಳಿನ ದೀಪ ಹಚ್ಚಿ ಆ ಮೇಲೆ ಸುಮ್ಮನಾಗಿದ್ದಾರೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಸುತ್ತ ಸದ್ಯ ಸಮಸ್ಯೆಗಳ ಸರಮಾಲೆಗಳೆ ಇವೆ. ಯಾವ ದಿಕ್ಕಿನಲ್ಲೂ ಹುಡುಕಿದರೂ ಪೊಲೀಸರಿಗೆ ಹತ್ಯೆಯ ಬಗ್ಗೆ ಒಂದಲ್ಲ, ಒಂದು ಸಾಕ್ಷಿ ಸಿಗುತ್ತಿದೆ. ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿದ್ದಂತು ಅವರಿಗೆ, ಅವರ ಕುಟುಂಬಕ್ಕೆ ತೀವ್ರ ಬೇಸರ ತರಿಸಿದೆ. ಆದರೆ ಇದರ ಬೆನ್ನಲ್ಲೇ ನಟ ದರ್ಶನ್​ಗೆ ಶನಿ, ರಾಹು ಕಾಟವಿದೆ ಎಂದು ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರು ಹೇಳಿದ್ದಾರೆ.

ಇದನ್ನೂ ಓದಿ: ಧೋನಿಯ 100 ಅಡಿ ಕಟೌಟ್​.. ಪವರ್ ಸ್ಟಾರ್ ಜೊತೆ ಇರೋ ಪೋಸ್ಟರ್ ಅಂಟಿಸಿ ಸಂಭ್ರಮ

ಈ ಸಂಬಂಧ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ, ದರ್ಶನ್ ಅವರಿಗೆ ಸದ್ಯ ಶನಿ ಕಾಟವಿದೆ. ಶ್ರವಣ ನಕ್ಷತ್ರ, ಮಕರ ರಾಶಿಗೆ ರಾಹು-ಶನಿಯ ಒಂದೇ ಬಾರಿಗೆ ಕಾಟ ಕೊಡುತ್ತಿದ್ದಾರೆ. 2025ರ ನವೆಂಬರ್ ನಂತರ ಅವರಿಗೆ ರಾಜಯೋಗ ಲಭಿಸುತ್ತದೆ. ಫೆಬ್ರವರಿಯಲ್ಲೇ ದರ್ಶನ್ ಅಣ್ಣನಿಗೆ ಈ ಬಗ್ಗೆ ಪೂರ್ಣ ಮಾಹಿತಿ ತಿಳಿಸಿದ್ದೆ. ಗಂಡಾಂತರ ಇದೆ ಅಂಥ ಹೇಳಿದ್ದೆ ಎಂದು ದರ್ಶನ್​ ಆಪ್ತ ಸ್ನೇಹಿತ ಪ್ರಧಾನ ಅರ್ಚಕ ಹೇಳಿದ್ದಾರೆ.

ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್

ದರ್ಶನ್ ಅವರದ್ದು ಶ್ರವಣ ನಕ್ಷತ್ರ, ಮಕರ ರಾಶಿಯಾಗಿದೆ. ಸದ್ಯ ಈ ರಾಶಿಗೆ ಈಗ ರಾಹು ಮತ್ತು ಶನಿ ಕಾಟ ಇದೆ. ಪ್ರತಿವಾರ ಎಳ್ಳಿನ ದೀಪ ಹಚ್ಚೋಕೆ ಅವರಿಗೆ ಹೇಳಿದ್ದೆ. ನಾನು ಹೇಳಿದ್ದನ್ನು ಅವರು 2 ವಾರ ಮಾತ್ರ ಮಾಡಿ ಆ ನಂತರ ಸುಮ್ಮನಾಗಿಬಿಟ್ಟಿದ್ದಾರೆ. ಹೀಗೆ ಮಾಡಬಾರದಿತ್ತು. ಹುಷಾರಾಗಿ ಇರು, ಈ ಸಂದರ್ಭದಲ್ಲಿ ನಿನ್ನ ಹೆಸರಿಗೆ ಚ್ಯುತಿ ಬರುವ, ಆಸ್ಪತ್ರೆ ಸೇರುವ ಸಾಧ್ಯತೆಗಳೆ ಜಾಸ್ತಿ ಇವೆ ಫೆಬ್ರವರಿಯಲ್ಲಿ ಹೇಳಿದ್ದೆ. ಎಚ್ಚರಿಕೆಯಿಂದ ಇರಬೇಕು ಅಂಥ ತಿಳಿಸಿದ್ದೆ. ಇದೇ ರೀತಿ ರಾಜ ವಿಕ್ರಮಾದಿತ್ಯನಿಗೆ ಸಮಸ್ಯೆ ಕಾಡಿತ್ತು. ಈಗ ದರ್ಶನ್​ಗೂ ಅಂತಹದ್ದೆ ಪರಿಸ್ಥಿತಿ ಬಂದಿದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?

https://newsfirstlive.com/wp-content/uploads/2024/07/DARSHAN_MAHAKALI.jpg

Load More