/newsfirstlive-kannada/media/post_attachments/wp-content/uploads/2024/05/Siddanta-Nayikaba.jpg)
ಚಿಕ್ಕೋಡಿ: ರೈತ ದೇಶದ ಬೆನ್ನೆಲುಬು. ಆತನ ಮಗ ಓದಿನಲ್ಲಿ ಸಾಧನೆ ಮಾಡಿದರೆ ಹೇಗಿರುತ್ತೆ?. ಅಂತಹದೊಂದು ಘಟನೆ ಶೇಡಬಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. SSLC ಓದುತ್ತಿದ್ದ ರೈತನ ಮಗ ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಸಿದ್ದಾಂತ ನಾಯಿಕಬಾ. ಈ ವಿದ್ಯಾರ್ಥಿ ರಾಜ್ಯಕ್ಕೆ ಎಸ್​ಎಸ್​ಎಲ್​ಸಿ ಫಲಿತಾಂಶದ ಮೂಲಕ ದ್ವಿತೀಯ ಸ್ಥಾನ ಪಡೆದು ಹೆಸರು ಮಾಡಿದ್ದಾನೆ. ಅಂದಹಾಗೆಯೇ ಈತ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಲೋಕುರ ಗ್ರಾಮದವನಾಗಿದ್ದಾನೆ.
ಸಿದ್ದಾಂತ ನಾಯಿಕಬಾ ವಿದ್ಯಾರ್ಥಿ ಆಚಾರ್ಯ ಸುಬಲಸಾಗರ ಫ್ರೌಢ ವಿದ್ಯಾಮಂದಿರಲ್ಲಿ SSLC ವ್ಯಾಸಾಂಗ ಮಾಡಿದ್ದಾನೆ. ಗಡಿ ಭಾಗದ ವಿದ್ಯಾರ್ಥಿ 625/624 ಅಂಕ ಪಡೆಯುವ ಮೂಲಕ ಮನೆಯವರ ಮುಖದಲ್ಲಿ ಸಂತಸ ಚೆಲ್ಲುವಂತೆ ಮಾಡಿದ್ದಾನೆ. ಸಿದ್ದಾಂತ ನಾಯಿಕಬಾ ಇಂಗ್ಲೀಷ್ ಹೊರತು ಪಡಿಸಿ ಎಲ್ಲ ವಿಷಯಗಳಲ್ಲೂ ಸಮಾನ ಅಂಕ ಪಡೆದಿದ್ದಾರೆ.
ಸಂತಸದ ಸಂಗತಿ ಎಂದರೆ ಸಿದ್ದಾಂತ ರೈತನ ಮಗನಾಗಿದ್ದು, ದೇಶದ ಬೆನ್ನೆಲುಬಾರಿರುವ ರೈತರ ಮಕ್ಕಳು ಇಂತಹ ಸಾಧನೆ ಮಾಡಿದರೆ ಹೆಮ್ಮೆಯಲ್ಲದೆ ಮತ್ತೇನು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us