Advertisment

‘ನನ್ನ ಪಾಲಿಗೆ ಆಕೆ ಸತ್ತಂತೆ..’ ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿ ಹೆತ್ತ ತಂದೆ ಆಕ್ರೋಶ

author-image
Ganesh
Updated On
‘ನನ್ನ ಪಾಲಿಗೆ ಆಕೆ ಸತ್ತಂತೆ..’ ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿ ಹೆತ್ತ ತಂದೆ ಆಕ್ರೋಶ
Advertisment
  • ಇಂಜಿನಿಯರ್ ವಿದ್ಯಾರ್ಥಿನಿಗೆ ಬದುಕಿಗೆ ಕಲ್ಲಾದ ಹೆತ್ತ ತಂದೆ
  • ಮಗಳು ಮಾಡಿದ ತಪ್ಪಿಗೆ ಶ್ರದ್ಧಾಂಜಲಿ ಬ್ಯಾನರ್ ಹಾಕಿಸಿದ
  • ಬ್ಯಾನರ್ ಅಂಟಿಸಿ, ಹಾಕುತ್ತಿರುವ ಹಿಡಿ ಶಾಪವೇನು ಗೊತ್ತಾ?

ಪ್ರೀತಿ, ಪ್ರೇಮ ವಿಚಾರಕ್ಕೆ ದೇಶದಲ್ಲಿ ಅದೆಷ್ಟೋ ಮರ್ಯಾದಾ ಹತ್ಯೆಗಳು ನಡೆದಿವೆ. ಇದೀಗ ತೆಲಂಗಾಣದ ಸಿರ್ಸಿಲ್ಲಾ ಪಟ್ಟಣದಲ್ಲಿ ಹೆತ್ತ ತಂದೆಯೊಬ್ಬ ಜೀವಂತವಾಗಿರುವ ಮಗಳು ಸತ್ತಿದ್ದಾಳೆಂದು ಬ್ಯಾನರ್​​ ಮಾಡಿ ವಿಕೃತಿ ಮೆರೆದಿದ್ದಾನೆ.

Advertisment

ಆಗಿದ್ದೇನು..?
ಚಿಲುವೆರಿ ಮುರಳಿ ಎಂಬಾತನ ಮಗಳು ಆವಂತಿ ಕಾಲೇಜಿನಲ್ಲಿ ಇಂಜಿನಿಯರ್ ಓದುತ್ತಿದ್ದಾಳೆ. ಈಕೆಗೆ ಓರ್ವ ಯುವಕನ ಜೊತೆ ಸಲುಗೆ ಬೆಳೆದಿದೆ. ನಂತರ ಇಬ್ಬರು ಪ್ರೀತಿ-ಪ್ರೇಮ ಎಂದು ಸುತ್ತಾಡಿದ್ದಾರೆ. ಈ ವಿಚಾರ ಮನೆಯವರ ಮುಂದೆ ಬಂದಿದೆ.

ಇದನ್ನೂ ಓದಿ: ಗ್ರಹಣದ ವೇಳೆ ಅಚ್ಚರಿ ವಿದ್ಯಮಾನಗಳು! ಪ್ರಾಣಿ-ಪಕ್ಷಿಗಳು ಗಲಿಬಿಲಿ..!! ಮಿಡತೆಗಳು, ಕೋಳಿಗಳು ಏನು ಮಾಡ್ತವೆ?

ತೀವ್ರ ವಿರೋಧ ವ್ಯಕ್ತಪಿಡಿಸ ತಂದೆ ಪ್ರೀತಿ ಮಾಡದಂತೆ ಹೇಳಿದ್ದಾನೆ. ಆದರೆ ನನಗೆ ಪ್ರೀತಿಯೇ ಮುಖ್ಯ ಎಂದು ಮಗಳು, ಮನೆ ಬಿಟ್ಟು ಯುವಕನ ಜೊತೆ ಓಡಿ ಹೋಗಿದ್ದಾಳೆ. ಮಾತ್ರವಲ್ಲ, ಆತನನ್ನೂ ಮದುವೆ ಕೂಡ ಆಗಿದ್ದಾಳೆ ಎನ್ನಲಾಗಿದೆ.

Advertisment

ಇದರಿಂದ ಮನೆ ಮರ್ಯಾದೆ ಹೋಗಿದೆ ಎಂದು ವಾದಿಸುತ್ತಿರುವ ತಂದೆ, ಮಗಳ ಫೋಟೋ ಜೊತೆ ಶ್ರದ್ಧಾಂಜಲಿ ಬ್ಯಾನರ್ ಹಾಕಿಸಿದ್ದಾನೆ. ಅಲ್ಲದೇ ಬ್ಯಾನರ್ ಮುಂದೆ ತನ್ನ ಮಗಳು ಸತ್ತು ಹೋಗಿದ್ದಾಳೆ ಎಂದು ಕಣ್ಣೀರು ಇಟ್ಟಿದ್ದಾನೆ. ನನ್ನ ಮಗಳು ಮಾತು ಕೇಳದೇ ಓಡಿದ್ದಾಳೆ. ಇನ್ಮೇಲೆ ಆಕೆ ನನ್ನ ಪಾಲಿಗೆ ಸತ್ತಂತೆ. ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ ಎಂದು ಗೊಗೊರೆದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment