newsfirstkannada.com

ಗ್ರಹಣದ ವೇಳೆ ಭೂಮಂಡಲದಲ್ಲಿ ನಡೆಯುತ್ವೆ ಅಚ್ಚರಿಗಳು; ಪ್ರಾಣಿ, ಪಕ್ಷಿಗಳ ಚಡಪಡಿಕೆ ಹೇಗಿರುತ್ತದೆ..?

Share :

Published April 8, 2024 at 1:45pm

Update April 8, 2024 at 2:36pm

  ಸೂರ್ಯಗ್ರಹಣದ ವೇಳೆ ಪ್ರಾಣಿಗಳು ಯಾಕೆ ಭಯಗೊಳ್ತಾವೆ?

  360 ಡಿಗ್ರಿಯಲ್ಲಿ ಸೂರ್ಯಾಸ್ತ, ಸೂರ್ಯೋದಯ ಒಟ್ಟಿಗೆ ನೋಡ್ಬಹುದು

  ನೆರಳು ಹಾವಿನಂತೆ ಗೋಚರ, ಏನೆಲ್ಲ ವಿಸ್ಮಯ ನಡೆಯುತ್ತದೆ..?

ಇವತ್ತು ನಭ ಮಂಡಲದಲ್ಲಿ ನಡೆಯವ ರೋಚಕ ವಿದ್ಯಮಾನಗಳಿಗೆ ಜಗತ್ತು ಸಾಕ್ಷಿ ಆಗಲಿದೆ. ಅರ್ಥಾತ್ 2024ರ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಸಂಪೂರ್ಣ ಸೂರ್ಯಗ್ರಹಣ ಇದಾಗಿದೆ. ಬರೋಬ್ಬರಿ 54 ವರ್ಷಗಳ ಹಿಂದೆ ಗೋಚರವಾಗಿದ್ದ ಸದೀರ್ಘ ಸಂಪೂರ್ಣ ಸೂರ್ಯಗ್ರಹಣವು (Total Solar Eclipse) ಮತ್ತೆ ಗತಿಸುತ್ತಿದ್ದು, ವಿಜ್ಞಾನಲೋಕ ವಿಸ್ಮಯಕಾರಿ ಸಂಗತಿಗಳನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾದು ಕೂತಿದೆ.

ಗ್ರಹಣ ಅಂದರೆ ಏನು..?
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಭಾಗವು ಗೋಚರಿಸುವುದಿಲ್ಲ. ಈ ಪರಿಸ್ಥಿತಿಯನ್ನು ಸೂರ್ಯಗ್ರಹಣ ಎಂದು ಕರೆಯುತ್ತೇವೆ. ಸಂಪೂರ್ಣ ಸೂರ್ಯಗ್ರಹಣ ಎಂದರೆ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಭೂಮಿಗೆ ಕತ್ತಲೆ ಆವರಿಸುತ್ತದೆ. ಇಂತಹ ಅಚ್ಚರಿ ಸಂಭವಿಸುತ್ತಿದ್ದಂತೆಯೇ, ಮೊದಲು ರಿಯಾಕ್ಟ್ ಮಾಡೋದು ಮೂಕ ಪ್ರಾಣಿಗಳು. ಅದರಲ್ಲೂ ಪಕ್ಷಿಗಳಿಗೆ ಇಂತಹ ಸಂಗತಿಗಳು ಬೇಗ ಗೊತ್ತಾಗಿಬಿಡುತ್ತವೆ. ಅದು ಹೇಗೆ ಸಾಧ್ಯ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಇಂದು ಸಂಪೂರ್ಣ ಸೂರ್ಯಗ್ರಹಣ; ಈ ರಾಶಿಯವರಿಗೆ ಡೇಂಜರ್, ಯಾವ್ಯಾವ ರಾಶಿಗೆ ಅಪಾಯ?

ಯಾಕೆಂದರೆ, ಪ್ರಾಣಿ ಪಕ್ಷಗಳು ನಮ್ಮ-ನಿಮ್ಮಂತೆ ಬದುಕುವುದಿಲ್ಲ. ಅವುಗಳಿಗೆ ಯಾವುದೇ ಗಡಿ-ರೇಖೆಗಳು, ನಿರ್ಬಂಧಗಳು ಇಲ್ಲವೇ ಇಲ್ಲ. ತಮ್ಮ ಇಷ್ಟದಂತೆ ಸ್ವಚ್ಛಂದವಾಗಿ, ಸ್ವೇಚ್ಚವಾಗಿ ಅಲೆದಾಡುತ್ತ, ಹಾರಾಡುತ್ತ ಬದುಕುತ್ತವೆ. ಇಲ್ಲಿ ಅವುಗಳಿಗೆ ಹಗಲು-ರಾತ್ರಿ ಎಂದು ಸಮಯ ನಿರ್ಧರಿಸಲು ಗಡಿಯಾರ ಇಲ್ಲ. ಬಹುತೇಕ ಪ್ರಾಣಿ-ಪಕ್ಷಗಳು ಹಗಲಿನ ಬೆಳಕು ಮತ್ತು ರಾತ್ರಿ ವೇಳೆ ಆಗುವ ಕತ್ತಲೆಗೆ ಅನುಗುಣವಾಗಿ ತಮ್ಮ ಕೆಲಸವನ್ನು ಮಾಡುತ್ತವೆ. ಸೂರ್ಯನ ಬೆಳಕು ನೋಡಿದ ನಂತರ ಎಚ್ಚರಗೊಳ್ಳುತ್ತವೆ. ನಂತರ ಆಹಾರ ಅರಸಿ ಹೋಗುತ್ತವೆ. ಭೂಮಿಯಲ್ಲಿ ಕತ್ತಲು ಆವರಿಸುತ್ತಿದ್ದಂತೆಯೇ ನಿದ್ರೆಗೆ ಜಾರಿ ಬಿಡುತ್ತವೆ. ಒಂದು ವೇಳೆ ಅವುಗಳು ಹಗಲಿನಲ್ಲಿ ಏಕಾಏಕಿ ಕತ್ತಲೆ ಆವರಿಸಿಬಿಟ್ಟರೆ ಸಂಕಷ್ಟಕ್ಕೆ ಒಳಗಾಗಿಬಿಡುತ್ತವೆ. ಇನ್ನು ರಾತ್ರಿ ಸಂಚರಿಸುವ ಪ್ರಾಣಿ-ಪಕ್ಷಗಳಿಗೆ ಈ ಸೂರ್ಯಗ್ರಹಣದ ಪರಿಣಾಮ ಅಷ್ಟೇನೂ ಬೀರಲ್ಲ.

ಅಧ್ಯಯನಗಳು ಏನು ಹೇಳುತ್ತವೆ..?
2017ರಲ್ಲಿ ಸಂಭವಿಸಿದ್ದ ಸೂರ್ಯಗ್ರಹಣದ ಸಂದರ್ಭದಲ್ಲಿ ಅಮೆರಿಕದ ವಿಜ್ಞಾನಿಗಳು ಒಂದು ಸಂಶೋಧನೆ ನಡೆಸಿದ್ದರು. ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿವಿಗಳು ನಡೆಸಿದ ಸಂಶೋಧನೆಯಲ್ಲಿ ಸೂರ್ಯಗ್ರಹಣ ಸಂದರ್ಭದಲ್ಲಿ ಪಕ್ಷಗಳು ಹೆಚ್ಚು ಗೊಂದಲಕ್ಕೆ, ಗಾಬರಿ ಆಗುತ್ತವೆ ಎಂಬುವುದನ್ನು ಅಧ್ಯಯನದಿಂದ ತಿಳಿದುಕೊಂಡಿದ್ದಾರೆ. ಮನುಷ್ಯರಿಗೆ ಹಗಲು ಬದಲಾದ ಕುಡಲೇ ಸಂಜೆ ಆಗಿದೆ ಎಂದು ತಿಳಿಯುತ್ತದೆ. ಬಳಿಕ ಕೆಲಸವನ್ನು ಬಿಟ್ಟು ವಿಶ್ರಾಂತಿಗೆ ಜಾರುತ್ತಾರೆ. ಆದರೆ ಪ್ರಾಣಿ-ಪಕ್ಷಿಗಳಿಗೆ ಕತ್ತಲೆ ಆಗುತ್ತಿದ್ದಂತೆಯೇ ಏನಾಗ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುದಿಲ್ಲ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಇಂದು ಗ್ರಹಣ: ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ, ಎಷ್ಟು ಗಂಟೆಗಳ ಕಾಲ ಗೋಚರ ಆಗಲಿದೆ?

ಯಾಕೆಂದರೆ, NASA ಅಧ್ಯಯನದ ಪ್ರಕಾರ.. ಗ್ರಹಣದ ಸಂದರ್ಭದಲ್ಲಿ ಭೂಮಿಗೆ ಸೂರ್ಯನ ಬೆಳಕು ಆವರಿಸುತ್ತಿದ್ದಂತೆಯೇ ತಾಪಮಾನ ವೇಗವಾಗಿ ಇಳಿಯುತ್ತದೆ. ಬೆಳಕು ಸರಿಯುತ್ತಿದ್ದಂತೆಯೇ ತಾಪಮಾನ ಮತ್ತೆ ಏರಿಕೆ ಆಗುತ್ತದೆ. ಕೆಲವೊಮ್ಮೆ ಮೈನಸ್ ಆರು ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಸಾಮಾನ್ಯವಾಗಿ 2 ಡಿಗ್ರಿ ಸೆಲ್ಸಿಯಸ್ ಕುಸಿತ ಅಥವಾ ಏರಿಕೆ ಕಂಡುಬರುತ್ತದೆ ಎಂದು ಹೇಳಲಾಗಿದೆ. 1834 ರಲ್ಲಿ ಸಂಭವಿಸಿದ ಗ್ರಹಣದ ವೇಳೆ ಪೆನ್ಸಿಲ್ವೇನಿಯಾದ ಗೆಟ್ಟಿಸ್ಟರ್ಗ್​​ನಲ್ಲಿ (pennsylvania gettysburg) ತಾಪಮಾನವು ಮೈನಸ್ 2 ಡಿಗ್ರಿ ಸೆಲ್ಸಿಯಸ್​​ಗೆ ಇಳಿದಿತ್ತು. 2017ರಲ್ಲಿ ಬೇಸಿಗೆ ಕಾಲದಲ್ಲಿ ಸಂಭವಿಸಿದ್ದ ಸೂರ್ಯಗ್ರಹಣದ ವೇಳೆಯೂ ತಾಪಮಾನ ಕುಸಿತಗೊಂಡಿತ್ತು. ಗ್ರಹಣದಲ್ಲಿ ನಡೆಯುವ ಈ ವಿದ್ಯಮಾನದಿಂದ ಇಡೀ ಜಗತ್ತು ತಾಪಮಾನದಲ್ಲಿ ಏರಿಳಿತ ಅನುಭವಿಸುತ್ತದೆ. ಹೀಗೆ ಆಗ್ತಿದ್ದಂತೆಯೇ ಪ್ರಾಣಿಗಳು ಗಲಿಬಿಲಿಗೊಳ್ಳುತ್ತವೆ ಎಂದು ವರದಿಗಳು ಹೇಳುತ್ತವೆ.

ಕೋಳಿ, ಮಿಡತೆ ಬೇಗ ಪ್ರತಿಕ್ರಿಯಿಸುತ್ತವೆ
ಗ್ರಹಣ ಶುರುವಾಗ್ತಿದ್ದಂತೆ ಕೋಳಿಗಳು ಹೆಚ್ಚು ರಿಯಾಕ್ಟ್ ಮಾಡುತ್ತವೆ. ಹಠಾತ್ ಕತ್ತಲು, ಬೆಳಕು ಬರ್ತಿದ್ದಂತೆ ಕೂಗಲು ಆರಂಭಿಸುತ್ತವೆ. ನಂತರ ಆಹಾರ ಹುಡುಕಲು ಪ್ರಾರಂಭಿಸುತ್ತವೆ. ಏಕಾಏಕಿ ಕತ್ತಲು ಆವರಿಸುತ್ತಿದ್ದಂತೆಯೇ ಅವರು ರಾತ್ರಿಯೆಂದು ಭಾವಿಸುತ್ತವೆ. ಇನ್ನು, ಮಿಡತೆಗಳು ಕೂಡ ಸೂರ್ಯಗ್ರಹಣ ವೇಳೆ ರಾತ್ರಿ ಆಗಿದೆ ಎಂದು ಕೂಗಲು ಶುರುಮಾಡುತ್ತವೆ. ಬೆಳಕು ಆವರಿಸುತ್ತಿದಂತೆಯೇ ಮತ್ತೆ ಮೌನಕ್ಕೆ ಜಾರುತ್ತವೆ.

ಇದನ್ನೂ ಓದಿ: ಸೋಮವಾರ ಸೂರ್ಯಗ್ರಹಣ!! ಭಾರತದಲ್ಲಿ ಗೋಚರ ಆಗದಿದ್ದರೂ ಭಾರತೀಯರಿಗೆ ಕಾಡಿದೆ ಟೆನ್ಷನ್, ಟೆನ್ಷನ್..! ಯಾಕೆ ಗೊತ್ತಾ?

ಪ್ರಾಣಿ ಪಕ್ಷಿಗಳು ಮಾತ್ರವಲ್ಲ. ಗ್ರಹಣದ ವೇಳೆ ಅನೇಕ ಪ್ರಕೃತಿಯಯಲ್ಲಿ ಅಚ್ಚರಿಗಳು ನಡೆಯುತ್ತವೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಅಪರೂಪದ ನೆರಳು, ಹಾವಿನಂತೆ ರೂಪುಗೊಳ್ಳುತ್ತದೆ. ಗ್ರಹಣದಿಂದ ನೆರಳು ಹಾವು ಚಲಿಸುತ್ತಿರುವಂತೆ ಅಲೆಯುತ್ತದೆ. ಆದರೆ ಇಂದು ಅದರ ರಚನೆಯ ಸಾಧ್ಯತೆ ಹೇಗಿರುತ್ತದೆ ಎಂದು ಹೇಳುವುದು ಕಷ್ಟ ಎನ್ನಲಾಗಿದೆ. ಗ್ರಹಣದ ವೇಳೆ ಚಂದ್ರ ಸೂರ್ಯನ ಆವರಿಸುತ್ತಿದ್ದಂತೆಯೇ ಆಕಾಶದಲ್ಲಿ ನಕ್ಷತ್ರಗಳು ಮತ್ತು ಗ್ರಹಗಳು ಕಾಣಿಸುತ್ತವೆ. ಸಾಮಾನ್ಯ ಹಗಲಿನಲ್ಲಿ ಇದು ಸಾಧ್ಯವಾಗುವುದಿಲ್ಲ. ಚಂದ್ರ ಆವರಿಸುತ್ತಿದ್ದಂತೆಯೇ ಸೂರ್ಯನ ಕರೋನಾ ನೋಡಬಹುದು. ಅಂದರೆ ಚಂದ್ರನಿಂದ ಆವರಿಸಿದ ಸೂರ್ಯನ ಹೊರ ಪದರ ಅದಾಗಿದೆ. ಆದರೆ ಸೌರ ಅಲೆಗಳ ಸ್ಫೋಟದ ತೀವ್ರತೆ ಹೆಚ್ಚಾಗಿರೋದ್ರಿಂದ ನೇರವಾಗಿ ನೋಡೋದು ತುಂಬಾನೇ ಅಪಾಯ.

360 ಡಿಗ್ರಿಯಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯ..!
ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯ ವಿಹಂಗಮ ದೃಶ್ಯಗಳನ್ನು ನೋಡಬಹುದು. ಎರಡೂ ವೀಕ್ಷಣೆಗಳನ್ನು ಒಟ್ಟಿಗೆ ನೋಡಬಹುದು. 360 ಡಿಗ್ರಿಯಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯ ಸಂಭವಿಸುತ್ತದೆ. ಒಟ್ಟಾರೆ ಬರೋಬ್ಬರಿ 54 ವರ್ಷಗಳ ಬಳಿಕ ಮತ್ತೆ ಸುದೀರ್ಘ ಸಂಪೂರ್ಣ ಸೂರ್ಯಗ್ರಹಣ ಮತ್ತೆ ಜರಗುತ್ತಿದ್ದು, ವಿಶ್ವದ ಜನರ ಇವತ್ತಿನ ಗ್ರಹಣದ ಮೇಲೆ ನೆಟ್ಟಿದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರ ಆಗದಿರೋದ್ರಿಂದ ಉತ್ತರ ಅಮೆರಿಕ ದೇಶಗಳು ಪ್ರಸಾರ ಮಾಡುವ ಲೈವ್ ಸ್ಟ್ರೀಮ್​ಗಳ ಮೂಲಕ ಭಾರತೀಯರೂ ಕೂಡ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಬಹುದಾಗಿದೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಹಣದ ವೇಳೆ ಭೂಮಂಡಲದಲ್ಲಿ ನಡೆಯುತ್ವೆ ಅಚ್ಚರಿಗಳು; ಪ್ರಾಣಿ, ಪಕ್ಷಿಗಳ ಚಡಪಡಿಕೆ ಹೇಗಿರುತ್ತದೆ..?

https://newsfirstlive.com/wp-content/uploads/2024/04/Total-Solar-Eclipse-3.jpg

Load More