newsfirstkannada.com

ಇಂದು ಸಂಪೂರ್ಣ ಸೂರ್ಯಗ್ರಹಣ; ಈ ರಾಶಿಯವರಿಗೆ ಡೇಂಜರ್, ಯಾವ್ಯಾವ ರಾಶಿಗೆ ಅಪಾಯ?

Share :

Published April 8, 2024 at 8:56am

    ಜ್ಯೋತಿಷಿಗಳ ಪ್ರಕಾರ ಈ ಬಾರಿಯ ಗ್ರಹಣ ಯಾರಿಗೆಲ್ಲ ನಷ್ಟ ಮಾಡಲಿದೆ?

    ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರ ಆಗುವುದಿಲ್ಲ

    ಆರ್ಥಿಕ ನಷ್ಟ, ಸಂಸಾರದಲ್ಲಿ ಬಿರುಕು, ಆರೋಗ್ಯ ಹದಗೆಡಲಿದೆ

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ವಿಶೇಷ ಅಂದರೆ ಇಂದು ಗೋಚರವಾಗುವ ಸೂರ್ಯಗ್ರಹಣವು ಸಂಪೂರ್ಣ ಸೂರ್ಯಗ್ರಹಣ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಸುಮಾರು 5 ಗಂಟೆಗೂ ಹೆಚ್ಚು ಕಾಲ ಉತ್ತರ ಅಮೆರಿಕದಲ್ಲಿ ಗ್ರಹಣದ ನೆರಳು ಬೀಳಲಿದೆ. ಆದರೆ ಭಾರತದಲ್ಲಿ ಸೂರ್ಯಗ್ರಹಣದ ನೆರಳು ಬೀಳುವುದಿಲ್ಲ, ಎಲ್ಲಿಯೂ ಗೋಚವಾಗುವುದಿಲ್ಲ.

ಗ್ರಹಗಳ ಸ್ಥಾನ
ಹಿಂದೂ ಕ್ಯಾಲೆಂಡರ್​ ಮತ್ತು ಜ್ಯೋತಿಷಿಗಳ ಪ್ರಕಾರ, ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗದಿದ್ದರೂ ಕೆಲ ರಾಶಿಯವರ ಬದುಕಲ್ಲಿ ಏರಿಳಿತಗಳು ಆಗುತ್ತದೆ ಎಂದು ಹೇಳುತ್ತಾರೆ. ಸಂಪೂರ್ಣ ಸೂರ್ಯ ಗ್ರಹಣವು ಚೈತ್ರ ಅಮಾವಾಸ್ಯೆ ದಿನದಂದು ನಡೆಯುತ್ತಿದ್ದು. ಮೀನ ಮತ್ತು ರೇವತಿ ರಾಶಿಯಲ್ಲಿ ಸಂಭವಿಸಲಿದೆ. ಗ್ರಹಣದಲ್ಲಿ ಸೂರ್ಯ, ಚಂದ್ರ ಮತ್ತು ಶುಕ್ರನ ಸಂಯೋಗ ಇರುತ್ತದೆ. ರಾಹು ಮತ್ತು ಕೇತುಗಳ ಅಕ್ಷವು ಕನ್ಯಾ ರಾಶಿಯಲ್ಲಿ ಪ್ರಭಾವಶಾಲಿಯಾಗಲಿದೆ. ಜೊತೆಗೆ ಸೂರ್ಯ, ಮಂಗಳ ಮತ್ತು ಕೇತುಗಳ ಪ್ರಭಾವ ಹೆಚ್ಚಿರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಿದ್ದರೆ ಜ್ಯೋತಿಷ್ಯದ ಪ್ರಕಾರ, ಯಾವೆಲ್ಲ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಅನ್ನೋ ವಿವರ ಇಲ್ಲಿದೆ.

ವೃಶ್ಚಿಕ ರಾಶಿ
ಈ ರಾಶಿಯವರಿಗೆ ಸೂರ್ಯಗ್ರಹಣವು ತುಂಬಾನೇ ಡೇಂಜರ್ ಎಂದು ಹೇಳಲಾಗುತ್ತಿದೆ. ಯಾವುದೇ ಶುಭ ಆಗುವುದಿಲ್ಲ, ಆರ್ಥಿಕ ಜೀವನದಲ್ಲಿ ಏರಿಳಿತಗಳನ್ನು ನೋಡುತ್ತಾರೆ. ಜೀವನದಲ್ಲಿ ಒಂದಷ್ಟು ಸವಾಲುಗಳು ಎದುರಾಗುತ್ತವೆ. ನೀವು ಮಾಡುತ್ತಿರುವ ಕೆಲಸದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು ಎಂದು ಜ್ಯೋತಿಷರು ಹೇಳ್ತಾರೆ.

ಇದನ್ನೂ ಓದಿ: ಸೋಮವಾರ ಸೂರ್ಯಗ್ರಹಣ!! ಭಾರತದಲ್ಲಿ ಗೋಚರ ಆಗದಿದ್ದರೂ ಭಾರತೀಯರಿಗೆ ಕಾಡಿದೆ ಟೆನ್ಷನ್, ಟೆನ್ಷನ್..! ಯಾಕೆ ಗೊತ್ತಾ?

ಕರ್ಕಾಟಕ
ವರ್ಷದ ಮೊದಲ ಸೂರ್ಯಗ್ರಹಣವು ಕರ್ಕಾಟಕ ರಾಶಿಯವರಿಗೂ ಶುಭಕರ ಎಂದು ಪರಿಗಣಿಸಲಾಗುವುದಿಲ್ಲ. ಹಣಕಾಸಿನ ಸಮಸ್ಯೆ, ಉದ್ಯೋಗಿಗಳೊಂದಿಗೆ ವಾಗ್ವಾದ, ಅತಿಯಾದ ಖರ್ಚು ಕೂಡ ಆಗುವ ಸಾಧ್ಯತೆ ಇದೆ. ಅನಗತ್ಯ ಒತ್ತಡ ಕೂಡ ನಿಮ್ಮ ಮೇಲೆ ಬರಬಹುದು, ಅದಕ್ಕಾಗಿ ಜಾಗೃತರಾಗಿರಬೇಕು ಎನ್ನುತ್ತಾರೆ.

ಕುಂಭ
ಇಂದು ನಡೆಯುವ ಸೂರ್ಯಗ್ರಹಣವು ಕಂಭ ರಾಶಿಯವರಿಗೂ ಪ್ರಯೋಜನಕಾರಿ ಅಲ್ಲ ಎಂದು ಜ್ಯೋತಿಷರು ಹೇಳುತ್ತಾರೆ. ನಿಮ್ಮ ಸುತ್ತ ನೆಗೆಟೀವ್ ವಿಚಾರಗಳು ತುಂಬುವ ಸಾಧ್ಯತೆ ಇರುತ್ತದೆ. ಆರೋಗ್ಯ ಹದಗೆಡುತ್ತದೆ. ಆರ್ಥಿಕ ನಷ್ಟ, ಸಂಸಾರದಲ್ಲಿ ಬಿರುಕು, ಅಮಂಗಳಕರ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ.

ಇದನ್ನೂ ಓದಿ: ಇಂದು ಗ್ರಹಣ: ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ, ಎಷ್ಟು ಗಂಟೆಗಳ ಕಾಲ ಗೋಚರ ಆಗಲಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಸಂಪೂರ್ಣ ಸೂರ್ಯಗ್ರಹಣ; ಈ ರಾಶಿಯವರಿಗೆ ಡೇಂಜರ್, ಯಾವ್ಯಾವ ರಾಶಿಗೆ ಅಪಾಯ?

https://newsfirstlive.com/wp-content/uploads/2024/04/SOLAR-eclipse-3.jpg

Load More