newsfirstkannada.com

ಕೈಯಲ್ಲಿ ದೊಣ್ಣೆಗಳನ್ನು ಹಿಡಿದು 2 ಕುಟುಂಬಸ್ಥರ ಮಧ್ಯೆ ಮಾರಾಮಾರಿ; ಕಾರಣವೇನು?

Share :

Published May 27, 2024 at 2:32pm

    ಜಮೀನಿನಲ್ಲಿ ದೊಣ್ಣೆಗಳನ್ನು ಹಿಡಿದು ಮಾರಾಮಾರಿ ನಡೆಸಿದ ಘಟನೆ

    ದೊಣ್ಣೆಗಳಿಂದ ಡೆಡ್ಲಿ ಫೈಟ್ ನಡೆಸಿದ ದೃಶ್ಯ ಸೆರೆ ಹಿಡಿದ ಸ್ಥಳೀಯರು

    ಮಾತಿನಲ್ಲಿ ಶುರುವಾದ ಜಗಳ ಮಾರಾಮಾರಿ, ಹಲ್ಲೆಯಲ್ಲಿ ಅಂತ್ಯ

ತುಮಕೂರು: ಎರಡು ಕುಟುಂಬಗಳ ಗಲಾಟೆಯು ದೊಣ್ಣೆಗಳನ್ನು ಹಿಡಿದು ಮಾರಾಮಾರಿ ಹಲ್ಲೆ ನಡೆಸಿರುವ ಘಟನೆ ಕುಣಿಗಲ್ ತಾಲೂಕಿನ ಹಿಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಮಾತಿನಲ್ಲಿ ಶುರುವಾದ ಜಗಳ ದೊಣ್ಣೆಗಳನ್ನ ಹಿಡಿದು ಮಾರಾಮಾರಿ ನಡೆಸಿದ ಹಲ್ಲೆಯಲ್ಲಿ ಅಂತ್ಯವಾಗಿದೆ.

ದೊಣ್ಣೆಗಳಿಂದ ಡೆಡ್ಲಿ ಫೈಟ್ ನಡೆಸಿರೋ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಘಟನೆಯಲ್ಲಿ ರೈತ ರಂಗಸ್ವಾಮಿ, ಲೀಲಾವತಿ ಗಾಯಗೊಂಡಿದ್ದಾರೆ. ಮುದ್ದುರಂಗಾಚಾರ್ ಕುಟುಂಬಸ್ಥರು ರಂಗಸ್ವಾಮಿ, ಲೀಲಾವತಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ.

ಗ್ರಾಮದ ರಂಗಸ್ವಾಮಿ ಕುಟುಂಬ ಹಾಗೂ ಮುದ್ದುರಂಗಚಾರ್ ಕುಟುಂಬದ ನಡುವೆ ಜಮೀನು ವಿವಾದ ಇತ್ತು. ಗ್ರಾಮದ ಸರ್ವೇ ನಂಬರ್ 41-42ರ ಜಮೀನು ‌ನಮಗೆ ಸೇರಬೇಕೆಂದು ಎರಡು ಕುಟುಂಬಗಳ ಮಧ್ಯೆ ಗಲಾಟೆ ಶುರುವಾಗಿದೆ. ಈ ಜಮೀನು ವಿವಾದ ಸದ್ಯ ಕೋರ್ಟ್‌ನಲ್ಲಿದ್ದರೂ ಜಮೀನಿನಲ್ಲಿ ಉಳುಮೆ ಮಾಡಲು ಮುದ್ದುರಂಗಚಾರ್ ಕುಟುಂಬ ಬಂದಿತ್ತು. ಇದನ್ನ ಪ್ರಶ್ನೆ ಮಾಡಲು ಹೋದಾಗ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪ‌ ಮಾಡಲಾಗಿದೆ.

ಇದನ್ನೂ ಓದಿ: ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ 

ಜಮೀನು ವಿವಾದದಲ್ಲಿ ಎರಡು ಕುಟುಂಬಗಳು ಪರಸ್ಪರ ಗಲಾಟೆಗಿಳಿದಿದ್ದಾರೆ. ಮುದ್ದುರಂಗಚಾರ್ ಹಾಗೂ ಕುಟುಂಬಸ್ಥರು ದೊಣ್ಣೆಗಳಿಂದ ರಂಗಸ್ವಾಮಿ ಹಾಗೂ ಪತ್ನಿ ಲೀಲಾವತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ರಂಗಸ್ವಾಮಿ ತಲೆಗೆ ಗಾಯವಾಗಿದ್ದು, ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಯಲ್ಲಿ ದೊಣ್ಣೆಗಳನ್ನು ಹಿಡಿದು 2 ಕುಟುಂಬಸ್ಥರ ಮಧ್ಯೆ ಮಾರಾಮಾರಿ; ಕಾರಣವೇನು?

https://newsfirstlive.com/wp-content/uploads/2024/05/Tumkur-Galate-1.jpg

Load More