ಮಹಿಳೆಗೆ ವಿಡಿಯೋ ಕರೆ ಮಾಡಿದ ಮಾಜಿ ಸಚಿವ ಎಚ್. ಆಂಜನೇಯ
ಮಹಿಳೆಗೂ ಸಹ ಇಡೀ ಸಭೆಯನ್ನು ತೋರಿಸಿರುವ ದೃಶ್ಯ ವೈರಲ್
ವೇದಿಕೆಯಲ್ಲಿದ್ದ ಸಚಿವರಿಗೂ ವಿಡಿಯೋ ಕರೆ ತೋರಿಸಿದ್ದ ಎಚ್. ಆಂಜನೇಯ
ಚಿತ್ರದುರ್ಗ: ಕೋಟೆ ನಾಡಿನಲ್ಲಿ ನೂತನ ಕಾಂಗ್ರೆಸ್ ಶಾಸಕರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ವೇಳೆ ವೇದಿಕೆಯ ಮೇಲಿದ್ದ ಮಾಜಿ ಸಚಿವ ಎಚ್. ಆಂಜನೇಯ ಅವರು ಮಹಿಳೆಯೋರ್ವರಿಗೆ ವಿಡಿಯೋ ಕರೆಯೊಂದನ್ನ ಮಾಡಿದ್ದಾರೆ. ಮಾತ್ರವಲ್ಲದೆ ವಿಡಿಯೋ ಕರೆಯನ್ನ ಎಲ್ಲರಿಗೂ ತೋರಿಸಿದ್ದಾರೆ. ಸದ್ಯ ಈ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿದ್ದು, ವಿಡಿಯೋ ಕರೆಯಲ್ಲಿದ್ದ ಮಹಿಳೆ ಯಾರು? ಎಂಬ ಹೊಸ ಚರ್ಚೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.
ನೂತನ ಕಾಂಗ್ರೆಸ್ ಶಾಸಕರ ಸನ್ಮಾನ ಕಾರ್ಯಕ್ರಮದ ವೇಲೆ ವೇದಿಕೆ ಮೇಲಿದ್ದ ಮಾಜಿ ಸಚಿವ ಎಚ್. ಆಂಜನೇಯ ಅವರ ಜೊತೆಗೆ ಸಚಿವ ಡಿ. ಸುಧಾಕರ, ಹಿರಿಯ ಶಾಸಕ ಎನ್.ವೈ ಗೋಪಾಲಕೃಷ್ಣ, ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಕೂಡ ಇದ್ದರು. ಈ ವೇಳೆ ಅವರಿಗೂ ಸಹ ವಿಡಿಯೋ ಕಾಲ್ ತೋರಿಸಿದ್ದಾರೆ.
ಇನ್ನು ವಿಡಿಯೋ ಕರೆಯಲ್ಲಿ ಎಚ್. ಆಂಜನೇಯ ಮಹಿಳೆಗೆ 5 ಬಾರಿ ಸಲಾಮ್ ಹೊಡೆದಿದ್ದಲ್ಲದೆ, ಫುಲ್ ಖುಷ್ ಆಗಿದ್ದಾರೆ. ವಿಡಿಯೋ ಕರೆಯನ್ನ ವೇದಿಕೆಯಲ್ಲಿರುವವರಿಗೆ ಮಾತ್ರವಲ್ಲದೆ, ಮಹಿಳೆಗೂ ಸಹ ಇಡೀ ಸಭೆಯನ್ನು ತೋರಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ