Advertisment

ಹೃದಯ ವಿದ್ರಾವಕ ಘಟನೆ.. ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಾವು..

author-image
Bheemappa
Updated On
ಹೃದಯ ವಿದ್ರಾವಕ ಘಟನೆ.. ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಾವು..
Advertisment
  • ದಕ್ಷಿಣ ಕರ್ನಾಟಕದ ಪ್ರವಾಸಕ್ಕೆ ಬಂದಿದ್ದ ವೇಳೆ ಅವಘಡ
  • ಹೆಬ್ಬಾಳೆಯ ಭದ್ರಾ ನದಿಯಲ್ಲಿ ಮುಳುಗಿ ಬಾಲಕಿ ಸಾವು
  • ಮಗಳು ಮೃತಪಟ್ಟಿದ್ದರಿಂದ ಮುಗಿಲು ಮುಟ್ಟಿದ ಆಕ್ರಂದನ

ಚಿಕ್ಕಮಗಳೂರು: ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿಯೊಬ್ಬಳು ಸ್ನಾನ ಮಾಡಲೆಂದು ನದಿಗೆ ಇಳಿದಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯು ಕಳಸ ತಾಲೂಕಿನ ಹೆಬ್ಬಾಳೆಯ ಭದ್ರಾ ನದಿಯಲ್ಲಿ ನಡೆದಿದೆ.

Advertisment

ಇದನ್ನೂ ಓದಿ:HD ರೇವಣ್ಣ ನಿವಾಸಕ್ಕೆ ಸಂತ್ರಸ್ತೆ ಜೊತೆ ಎಂಟ್ರಿ ಕೊಟ್ಟ SIT ತಂಡ.. ಏನೇನು ಮಾಡ್ತಾರೆ ಗೊತ್ತಾ?

publive-image

ಇದನ್ನೂ ಓದಿ: ಬಿರುಗಾಳಿ ಸಮೇತ ಭಾರೀ ಮಳೆ.. ಬಾಳೆ ತೋಟ ಸೇರಿ ವಿವಿಧ ಬೆಳೆಗಳಿಗೆ ಹಾನಿ..

ತಮಿಳುನಾಡಿನ ಹೊಸೂರು ಮೂಲದ ಜಾಹ್ನವಿ (14) ಮೃತಪಟ್ಟ ದುರ್ದೈವಿ. ಹೊರನಾಡಿಗೆ ಪ್ರವಾಸಕ್ಕೆಂದು ಪೋಷಕರ ಜೊತೆ ಬಾಲಕಿ ಕೂಡ ಬಂದಿದ್ದಳು. ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಹೋರಡುವ ಮುನ್ನವೇ ಭದ್ರನದಿಯಲ್ಲಿ ಸ್ನಾನ ಮಾಡಲೆಂದು ನೀರಿಗೆ ಇಳಿದಿದ್ದಳು. ಈ ವೇಳೆ ನೀರಿನಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ್ದಾಳೆ. ಮಗಳು ಮೃತಪಟ್ಟ ಹಿನ್ನೆಲೆಯಲ್ಲಿ ಪೋಷಕರ ಆಂಕ್ರದನ ಹೇಳತೀರದು ಆಗಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment