newsfirstkannada.com

ಏಯ್‌.. ಯಾರೋ ನೀನು; ಕೆ.ಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಲೇಡಿ ಡಾಕ್ಟರ್ ಉಗ್ರ ರೂಪ; ಕಾರಣವೇನು?

Share :

Published March 22, 2024 at 1:08pm

  ಏಕಾಏಕಿ ಡಾಕ್ಟರ್‌ ಕಚೇರಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದನೆ

  ಡಾ. ಲೀಲಾ ಅವರನ್ನು ತಡೆಯಲು ಪರದಾಡಿದ ಆಸ್ಪತ್ರೆಯ ಸಿಬ್ಬಂದಿ

  ಡಾ. ಲೀಲಾ ಸಂಪತ್ ಕುಮಾರ್, ಡಾ.ಜಗದೀಶ್ ಅವರ ಮಧ್ಯೆ ಜಗಳ

ಬೆಂಗಳೂರು: ಕೆ.ಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ವರ್ಸಸ್ ಡಾಕ್ಟರ್ ಮಧ್ಯೆ ಜಗಳ ನಡೆದಿದೆ. ಮಹಿಳಾ ಡಾಕ್ಟರ್ ಇನ್ನೊಬ್ಬ ಡಾಕ್ಟರ್‌ಗೆ ಮನ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆಸ್ಪತ್ರೆಯ ಒಳಗೆ ರಂಪಾಟ ಮಾಡಿದ್ದಾರೆ.

ಕೆ.ಆರ್ ಪುರಂ ಆಸ್ಪತ್ರೆಯ ಡಾ. ಲೀಲಾ ಸಂಪತ್ ಕುಮಾರ್ ಹಾಗೂ ಡಾ.ಜಗದೀಶ್ ಅವರ ಮಧ್ಯೆ ಈ ವಾಗ್ವಾದ ನಡೆದಿದೆ. ಚೀಫ್ ಕ್ಯಾಸಿವಲ್ಟಿ ಅಧಿಕಾರಿಯಾಗಿದ್ದ ಜಗದೀಶ್ ಅವರು ಆಸ್ಪತ್ರೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಮಾಡಿದ್ದರು. ಪಿಜಿ ವಿದ್ಯಾರ್ಥಿಗಳ ಜೊತೆ ಡಾ.ಲೀಲಾ ಅವರು ಸರಿಯಾಗಿ ನಡೆದುಕೊಂಡಿಲ್ಲ ಎಂದು ಮೆಸೇಜ್ ಮಾಡಿದ್ದರು.

ಡಾ. ಜಗದೀಶ್ ಅವರು ಮಾಡಿದ್ದ ಮೆಸೇಜ್ ಅನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದ ಸ್ತ್ರೀರೋಗ ತಜ್ಞೆಯಾಗಿದ್ದ ಡಾ. ಲೀಲಾ ಸಂಪತ್ ಕುಮಾರ್ ಅವರು ಏಕಾಏಕಿ ಅವರ ಕಚೇರಿಗೆ ನುಗ್ಗಿ ನಿಂದನೆ ಮಾಡಿದ್ದಾರೆ. ಚಪ್ಪಲಿ ತೋರಿಸಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಆಸ್ಪತ್ರೆಯಲ್ಲಿರುವ ಇರುವ ಸಿಬ್ಬಂದಿ ಡಾ. ಲೀಲಾ ಅವರನ್ನು ತಡೆಯಲು ಹೋದ್ರೂ ಡಾಕ್ಟರ್ ಸುಮ್ಮನಾಗದೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಗು ದತ್ತು ಪಡೆದ ಕೇಸ್​; ಸೋನುಗೌಡ ವಿರುದ್ಧ ದಾಖಲಾದ ದೂರಿನಲ್ಲಿ ಯಾವ್ಯಾವ ಅಂಶಗಳಿವೆ?

ಡಾ. ಲೀಲಾ ಸಂಪತ್ ಕುಮಾರ್ ಅವರು ಡಾ. ಜಗದೀಶ್ ವಿರುದ್ದ ಕೆ.ಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರಲ್ಲಿ ಏನು ಲೋಪ ಇಲ್ಲವೆಂದು ಎನ್‌ಸಿಆರ್ ದಾಖಲಾಗಿದೆ. ಇಷ್ಟಕ್ಕೆ ಸುಮ್ಮನಾಗದೇ ಮತ್ತೆ ಡಾ.ಲೀಲಾ ಅವರು ಜಗದೀಶ್ ಅವರ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಆಡಳಿತಾಧಿಕಾರಿ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಯ್‌.. ಯಾರೋ ನೀನು; ಕೆ.ಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಲೇಡಿ ಡಾಕ್ಟರ್ ಉಗ್ರ ರೂಪ; ಕಾರಣವೇನು?

https://newsfirstlive.com/wp-content/uploads/2024/03/KR-Puram-Hospital-1.jpg

Load More