newsfirstkannada.com

ಮಗು ದತ್ತು ಪಡೆದ ಕೇಸ್​; ಸೋನುಗೌಡ ವಿರುದ್ಧ ದಾಖಲಾದ ದೂರಿನಲ್ಲಿ ಯಾವ್ಯಾವ ಅಂಶಗಳಿವೆ?

Share :

Published March 22, 2024 at 12:27pm

    ಕಾಯ್ದೆಗಳಡಿ ದತ್ತು ಪಡೆಯುವುದು ಹೇಗೆ ಅಪರಾಧ ಆಗುತ್ತದೆ ಗೊತ್ತಾ?

    ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ ಬಳಿಕ ಸೋನುಗೌಡ ಬಂಧನ

    ದತ್ತು ಪಡೆದ ಮಗುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಬಹುದಾ?

ಬೆಂಗಳೂರು: ರಾಯಚೂರಿನ ಬಾಲಕಿಯನ್ನು ಬಿಗ್​ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ದತ್ತು ತೆಗೆದುಕೊಂಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಅವರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಜೆ.ಜೆ ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿ ಸೋನುಗೌಡರನ್ನ ಬಂಧಿಸಲಾಗಿದೆ.

ಸೋನುಗೌಡ ವಿರುದ್ಧ ದೂರು ದಾಖಲು ಮಾಡಲಾಗಿದ್ದ ದೂರಿನಲ್ಲಿ ಹಲವು ಅಂಶಗಳನ್ನ ಉಲ್ಲೇಖಿಸಲಾಗಿದೆ. ಅವುಗಳು ಈ ಕೆಳಕಂಡಂತಿವೆ. ಭಾರತೀಯ ದಂಡ ಸಂಹಿತೆ 1860, ಬಾಲನ್ಯಾಯ ಕಾಯ್ದೆ 2000, ಬಾಲನ್ಯಾಯ ಕಾಯ್ದೆ 2015, ಹಿಂದೂ ದತ್ತು ಕಾಯಿದೆ 1956 ಹಾಗೂ ಇನ್ನಿತರ ಕಾಯ್ದೆಗಳಡಿ ದತ್ತು ಪಡೆಯುವುದು ಹೇಗೆ ಅಪರಾಧವೆಂದು ಇಲ್ಲಿ ತಿಳಿದು ಬರುತ್ತದೆ.

ಇದನ್ನು ಓದಿ: Breaking News: ಬಿಗ್​ಬಾಸ್ ಖ್ಯಾತಿಯ ಸೋನು ಗೌಡ ಅರೆಸ್ಟ್

  1. ಹಿಂದೂ ಮತ್ತು ಕಾಯ್ದೆ 1956 ಪ್ರಕಾರ ಬಳಕೆ 8ರ ಪ್ರಕಾರ ಪಡೆಯುವ ಪ್ರಕ್ರಿಯೆ ಅರ್ಹತೆ ಕುರಿತು ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಇದಕ್ಕಾಗಿ ಮಕ್ಕಳ ರಕ್ಷಣಾ ಘಟಕ, ಕೇಂದ್ರ ಸಂಪನ 4 ಪ್ರಾಧಿಕಾರ (CARA) ರಾಜ್ಯ ದತ್ತು ಪ್ರಾಧಿಕಾರ (SARA) ದತ್ತು ಪಡೆಯುವ ಕುರಿತು ಆಕೆಯು ಆನ್​ಲೈನ್​ ಅರ್ಜಿ ವಿಳಾಸ ಮಾಹಿತಿಗಳನ್ನು ಪಡೆದು, ಎಲ್ಲ ರೀತಿಯ ಹಂತಗಳನ್ನು ಪಾಲಿಸಿದ ನಂತರ ಮಕ್ಕಳ ಕಲ್ಯಾಣ ಸಮಿತಿಯ ಸಮಸದಲಿ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮಗುವನ್ನು ದತ್ತು ಪಡೆದಿರುವುದಿಲ್ಲ. ಆದ್ದರಿಂದ ಇದು ಕಾನೂನು ಬಾಹಿರ ಆಗಿರುತ್ತದೆ.
  2. ಬಾಳ ನ್ಯಾಯ ಕಾಯ್ದೆ 2000 ಕಲಂ 29ರ ಪ್ರಕಾರ ಪೋಷಕರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಗಂಡನ ಆದೇಶದ ಪ್ರಕಾರ ದತ್ತು ಕ್ರಿಯೆ ಆಗಿರಬೇಕು.
  3. ಬಾಲನ್ಯಾಯ ಕಾಯ್ದೆ 2015 ಕಲಂ 56(5) ಹಾಗೂ ಭಾರತೀಯ ದಂಡ ಸಂಹಿತೆ 1860 ಕಲಂ 317 ಹಿಂದೆ ದತ್ತು ಕಾಯಿದೆ 1956 4, 12, 13, 14, 15 ಪ್ರಕಾರ ಮತ್ತು ಬಾಲನ್ಯಾಯ ಕಾಯ್ದೆ ಕಲಂ 74, 75, 80ರ ಪ್ರಕಾರ ಕಾನೂನು ಬಾಹಿರ ಪ್ರಕ್ರಿಯೆ ಆಗಿರುತ್ತದೆ.
  4. ಪೋಷಕರಿಗೆ ವಿವಿಧ ರೀತಿಯ ಸೌಕರ್ಯಗಳನ್ನು ನೀಡಿರುತ್ತೇನೆ ಎಂದು ಹೇಳಿದ್ದರಿಂದ ಇಲ್ಲಿ ಒಂದು ರೀತಿಯ ಮಗುವಿನ ಮಾರಾಟ ಮಾಡಿರುವಂತೆ ಮೇಲ್​ನೋಟಕ್ಕೆ ಕಂಡು ಬಂದಿರುತ್ತದೆ.
  5. ಕಲಂ 5ರ ಪ್ರಕಾರ ಮಗುವಿಗೂ ಮತ್ತು ದತ್ತು ಪಡೆಯುವ ವ್ಯಕ್ತಿಗೂ ಕನಿಷ್ಠ 25 ವರ್ಷಗಳ ಅಂತರ ಇರಬೇಕು.
  6. ಬಾಲನ್ಯಾಯ ಕಾಯ್ದೆ 2015ರ ಕಲಂ 75ರ ಪ್ರಕಾರ ಮಗುವಿಗೆ ಕಿರುಕುಳ ನೀಡಿರುತ್ತಾರೆ. ಕಿರುಕುಳ ಎಂದರೆ ಮೇಲ್ನೋಟಕ್ಕೆ ಮಗುವು 1ನೇ ಅಥವಾ 2ನೇ ತರಗತಿಯ ಮಗು ಆಗಿರುವುದರಿಂದ ಮಾರ್ಚ್​ ತಿಂಗಳಲ್ಲಿ ಶಾಲೆಯಲ್ಲಿ ಪರೀಕ್ಷೆ ಸಮಯ ಆಗಿದ್ದರೂ ಶಾಲೆಗೆ ಕಳುಹಿಸಿರುವುದಿಲ್ಲ.
  7. ಬಾಲನ್ಯಾಯ ಕಾಯ್ದೆ 2015ರ ಕಲಂ 74ರ ಪ್ರಕಾರ ಮಗುವಿನ ಹೆಸರು, ವಿಳಾಸ, ಫೋಟೋಗಳನ್ನು ಬಿಡುಗಡೆ ಮಾಡಿ ಮಗುವಿನ ಗುರುತನ್ನು ಬಹಿರಂಗ ಪಡಿಸಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮಗುವನ್ನು ದತ್ತು ಪಡೆದಿರುವುದಾಗಿ, ವಿವಿಧ ರೀತಿಯ ಬೆಲೆ ಬಾಳುವ ವಸ್ತುಗಳನ್ನು ತೆಗೆದು ಕೊಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ಮಗುವನ್ನು ದುರುಪಯೋಗ ಪಡೆಸಿಕೊಂಡಿರುತ್ತಾರೆ.
  8. ಮಗುವಿಗೆ ಒಡವೆ, ವಸ್ತ್ರ ವಸ್ತುಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಪೂರೈಸಿರುವೆ ಎನ್ನುವ ಹೇಳಿಕೆ ನೀಡಿದ್ದರಿಂದ ಈ ರೀತಿಯ ವರ್ತನೆಯಿಂದ ಮಗುವಿನ ಆತ್ಮ, ಅಭಿಮಾನ, ಬಾಲನ್ಯಾಯ ಕಾಯ್ದೆ 2015ರ ತತ್ವಗಳಾದ 15ರಲ್ಲಿ ಆತ್ಮ ಅಭಿಮಾನವು ಕೂಡ ಒಂದು ಪ್ರಮುಖ ತತ್ವವಾಗಿರುತ್ತದೆ.
  9. ಈಕೆಯು ಭಾರತೀಯ ದಂಡ ಸಂಹಿತೆ 1860, ಬಾಲನ್ಯಾಯ ಕಾಯ್ದೆ 2000, ಬಾಲನ್ಯಾಯ ಕಾಯ್ದೆ 2015, ಹಿಂದು ದತ್ತು ಕಾಯಿದೆ 1956 ಹಾಗೂ ಇನ್ನಿತರ ಕಾಯಿದೆಗಳ ಅಡಿಯಲ್ಲಿ ಕಾನೂನು ಬಾಹಿರ ದತ್ತು ಪಡೆದುಕೊಂಡು ಅಪರಾಧ ಎಸಗಿರುತ್ತಾರೆ ಎಂದು ಪ್ರಥಮ ವರದಿಯಲ್ಲಿ ಕಂಡು ಬಂದಿರುತ್ತದೆ. CARA, SARAದಲ್ಲಿ ಯಾವುದೇ ರೀತಿಯಾಗಿ ನೋಂದಣಿ ಮಾಡಿಲ್ಲ ಎನ್ನುವುದು ತಿಳಿದು ಬಂದಿದೆ.

ಇದನ್ನು ಓದಿ: ಸೋನು ಗೌಡ ಅರೆಸ್ಟ್; ಮಗು ದತ್ತು ಪಡೆಯಲು ನಿಯಮ ಏನು ಹೇಳುತ್ತೆ.. ಯಾರೆಲ್ಲ ಪಡೆಯಹುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗು ದತ್ತು ಪಡೆದ ಕೇಸ್​; ಸೋನುಗೌಡ ವಿರುದ್ಧ ದಾಖಲಾದ ದೂರಿನಲ್ಲಿ ಯಾವ್ಯಾವ ಅಂಶಗಳಿವೆ?

https://newsfirstlive.com/wp-content/uploads/2024/03/SONUGOWDA_2.jpg

Load More