/newsfirstlive-kannada/media/post_attachments/wp-content/uploads/2024/08/Vijayapura-Bike-Accident-1.jpg)
ವಿಜಯಪುರ: ಅತಿವೇಗ ಸಾವಿಗೆ ಆಹ್ವಾನ ಅನ್ನೋದು ಗೊತ್ತಿದ್ರೂ ವಾಹನ ಸವಾರರು ಬುದ್ಧಿ ಕಲಿಯಲ್ಲ. ಅಪಘಾತದಲ್ಲಿ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಬಲಿಯಾಗುವುದು ಮತ್ತೊಂದು ದುರಂತ. ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಇಂತಹದೇ ಘನಘೋರ ಘಟನೆ ಇಂದು ನಡೆದು ಹೋಗಿದೆ.
ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿರೋ ಭೀಕರ ಅಪಘಾತ ಹಾಡಹಗಲೇ ವಿಜಯಪುರ ನಗರದಲ್ಲಿ ನಡೆದಿದೆ. ಕಾರು ಡಿಕ್ಕಿಯಾದ ಬಳಿಕ ಬೈಕ್‌ನಲ್ಲಿದ್ದ ವಕೀಲನನ್ನು ಅರ್ಧ ಕಿಲೋಮೀಟರ್‌ವರೆಗೂ ಎಳೆದುಕೊಂಡು ಹೋಗಿದೆ. ಈ ಕರುಣಾಜನಕ ದೃಶ್ಯ ನೋಡಿದ ವಿಜಯಪುರದ ಜನ ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: ಮೈ ಮೇಲೆ ಸೀರೆ ಇರಲ್ಲ, ಆದ್ರೂ ರೇಪ್ ಆಗಿರಲ್ಲ; ಒಂದೇ ರೀತಿ 9 ಮಹಿಳೆಯರ ಹತ್ಯೆ; ಬೆಚ್ಚಿ ಬೀಳಿಸಿದ ಸ್ಯಾರಿ ಕಿಲ್ಲರ್!
ದಾರುಣವಾಗಿ ಸಾವನ್ನಪ್ಪಿದ ವಕೀಲನನ್ನು ರವಿ ಮೇಲಿನಕೇರಿ ಎಂದು ಗುರುತಿಸಲಾಗಿದೆ. ಇವರಿಗೆ 35 ವರ್ಷ ವಯಸ್ಸು. ರವಿ ಮೇಲಿನಕೇರಿ ಅವರು ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ನಿವಾಸಿ.
ಇದನ್ನೂ ಓದಿ: ಫಸ್ಟ್ ನೈಟ್‌ನಲ್ಲೇ ಮಚ್ಚಿನಿಂದ ಹೊಡೆದಾಟ.. ವಧು-ವರರ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಭೀಕರ ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಕಾರಿನ ಸಮೇತ ಪರಾರಿಯಾಗಿದ್ದಾರೆ. ವಿಜಯಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ