ಆರ್ಮಿ ಆಫೀಸ್ ಎಂದು ನಂಬಿಸಿ ಮೋಸ ಮಾಡ್ತಿದ್ದ
ಸುತ್ತಾಡಲು ಹೋಟೆಲ್ನ ಕಾರನ್ನೇ ಬಳಸಲು ಡಿಮ್ಯಾಂಡ್
ಕೊನೆಗೂ ಆರೋಪಿ ಬಂಧಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು
ಬೆಂಗಳೂರು: ಪ್ರತಿಷ್ಠಿತ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಹಣ ಪಾವತಿಸದೇ ವಂಚಿಸುತ್ತಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊರಾಡ ಸುಧೀರ್ ಬಂಧಿತ ಆರೋಪಿ.
ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ರೂಮ್ ಬುಕ್ ಮಾಡುತ್ತಿದ್ದ ಆಸಾಮಿ, ಪೇಮೆಂಟ್ ವಿಚಾರ ಕೇಳಿದ್ರೆ ಪಾವತಿ ಮಾಡ್ತೀನಿ ಎಂದು ಆಟವಾಡಿಸ್ತಿದ್ದ. ಕೊನೆಗೆ ಫೇಕ್ ಪೇಮೆಂಟ್ ಮಾಡಿ, ನಕಲಿ ಸ್ಕ್ರೀನ್ಶಾಟ್ಗಳನ್ನು ತೋರಿಸಿ ಯಾಮಾರಿಸುತ್ತಿದ್ದ ಆರೋಪ ಕೇಳಿಬಂದಿತ್ತು.
ವಿಚಾರ ಗೊತ್ತಾಗಿ ಹೋಟೆಲ್ನವರು ವಿಚಾರಿಸಿದಾಗ ನನ್ನ ಅಕೌಂಟ್ನಿಂದ ಹಣ ಹೋಗಿದೆ. ನಿಮ್ಮ ಸರ್ವರ್ನಲ್ಲಿ ಸಮಸ್ಯೆ ಇದೆ ಎಂದು ನಂಬಿಸುತ್ತಿದ್ದ. ಹೀಗೆ ಒಂದು ಪ್ರತಿಷ್ಠಿತ ಹೋಟೆಲ್ನಲ್ಲಿ ಮೋಸ ಮಾಡಿದ್ದ ಆಸಾಮಿ, 80 ಸಾವಿರ ಬಿಲ್ನಲ್ಲಿ 10 ಸಾವಿರ ಪಾವತಿ ಮಾಡಿದ್ದ. ನಂತರ ಉಳಿದ ಬಿಲ್ ಅನ್ನು ರಾತ್ರಿ ನೀಡ್ತೀನಿ ಎಂದಿದ್ದ.
ಇದನ್ನೂ ಓದಿ: ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?
ರಾತ್ರಿ ವೇಳೆ ಆ ಬಗ್ಗೆ ಕೇಳಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ನಂತರ ಅದೇ ಹೋಟೆಲ್ನ ಬಿಎಂಡ್ಲೂ ಕಾರಿನಲ್ಲಿ ಏರ್ಪೋರ್ಟ್ಗೆ ಡ್ರಾಪ್ ಮಾಡೋದಕ್ಕೆ ಹೇಳಿದ್ದ. ಆಗ ಡ್ರೈವರ್ ನಾವು ನಮ್ಮ ಹೋಟೆಲ್ನಲ್ಲಿ ಅನುಮತಿ ಪಡಿಯಬೇಕು ಎಂದಿದ್ದ. ಈ ವೇಳೆ ಈತನ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಕೊಲ್ಕತ್ತಾದಲ್ಲಿ ತಾನು ಆರ್ಮಿ ಆಫೀಸರ್ ಎಂದು ನಂಬಿಸಿ ಯಾಮಾರಿಸಿದ್ದ. ಇದೀಗ ಹೈಗ್ರೌಂಡ್ಸ್ ಪೊಲೀಸರಿಂದ ಆರೋಪಿಯ ಬಂಧನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ